ಜಯಂತಿ ಮೂರು ಮದ್ವೇಯಾದ್ರು ಜೀವನ ಎಷ್ಟು ನರಕವಾಗಿತ್ತು ಗೊತ್ತಾ..? ಮೂರನೆಯ ಪತಿ ಇವರೇ ನೋಡಿ..!!

Updated: Friday, July 30, 2021, 08:50 [IST]

ಕನ್ನಡ ಸಿನಿಮಾ ರಂಗದ ಖ್ಯಾತ ನಟಿ ಜಯಂತಿ ಅವರು ನಿನ್ನೆಯಷ್ಟೇ ಅನಾರೋಗ್ಯದಿಂದ ಸಾವನ್ನಪ್ಪಿದ್ದಾರೆ. ಅಭಿನಯದಲ್ಲಿ ಸಾಕಷ್ಟು ಹೆಸರು ಮಾಡಿ, ಅಭಿನಯ ಶಾರದೆ ಎಂಬ ಬಿರುದು ಸಹ ಪಡೆದುಕೊಂಡಿದ್ದರು. ತಮ್ಮ ಸಿನಿ ವೃತ್ತಿಯಲ್ಲಿ ಸಾಕಷ್ಟು ಹೆಸರು ಮಾಡಿ ಪಂಚ ಭಾಷೆಗಳಲ್ಲಿ ಅಭಿನಯಿಸಿ ಸುಮಾರು ಐದು ನೂರಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟನೆ ಮಾಡಿ ಎಲ್ಲರಿಂದಲೂ ನಟಿ ಜಯಂತಿ ಅವರು ಸೈ ಎನಿಸಿಕೊಂಡಿದ್ದರು. ಹೌದು ಇವರ ಸಾವಿನ ಸುದ್ದಿ ಕೇಳಿ ನಿನ್ನೆ ಕನ್ನಡದ ಸಾಕಷ್ಟು ಕಲಾವಿದರು, ಹಾಗೂ ಕನ್ನಡ ಜನತೆ ಕಂಬನಿ ಮಿಡಿದಿತ್ತು.

ಜೊತೆಗೆ ಸಿನಿರಂಗದ ನಟರು ನಟಿಯರು ಇವರ ಸಾವಿಗೆ ಸಂತಾಪ ಸೂಚಿಸಿದರು. ಜಯಂತಿಯವರು ಮೂಲತಹ ಬಳ್ಳಾರಿಯವರು. ಇವರು ಇವರ ತಾಯಿಯ ಜೊತೆ ತಮಿಳುನಾಡಿಗೆ ಬಂದು ಮೊದಲಿಗೆ ನೃತ್ಯವನ್ನು ಕಲಿತರು. ತದನಂತರ ನಟನೆ ಕಡೆಗೆ ಆಸಕ್ತಿ ಹೆಚ್ಚಿದ ಕಾರಣಕ್ಕಾಗಿ ಜಯಂತಿಯವರು ನಟನಾ ವೃತ್ತಿಗೆ ಧುಮುಕಿದರು. ನಟಿ ಜಯಂತಿ ಅವರನ್ನು ನೋಡಿ ಸಾಕಷ್ಟು ಜನ ಅವರಿಗೇನು ಕಡಿಮೆ, ತುಂಬಾ ಚೆನ್ನಾಗಿದ್ದಾರೆ ಅವರ ಜೀವನ ತುಂಬಾ ಚೆನ್ನಾಗಿದೆ ಎಂದು ತಿಳಿದುಕೊಂಡಿದ್ದರು. ಆದ್ರೆ ನಟಿ ಜಯಂತಿಯವರ ದಾಂಪತ್ಯ ಜೀವನ, ಹಾಗೂ ನಿಜ ಜೀವನ ನೀವು ಅಂದುಕೊಂಡಷ್ಟು ಸುಲಭವಾಗಿರಲಿಲ್ಲ.

ಯಾಕೆಂದರೆ ಅವರು ಹೆಚ್ಚು ನೋವುಗಳನ್ನೆ ಜೀವನದಲ್ಲಿ ಹಾಗೂ ದಾಂಪತ್ಯ ಜೀವನದಲ್ಲಿ ಅನುಭವಿಸಿದ್ದರು. ಹೌದು ನಟಿ ಜಯಂತಿಯವರು 1945 ರಲ್ಲಿ ಜನಿಸಿದ್ದು, ಸಿನಿಮಾ ಇಂಡಸ್ಟ್ರಿಯಲ್ಲಿ ಹೆಸರು ಮಾಡಿದ ಬಳಿಕ ಸಿನಿರಂಗದವರನ್ನೇ ಮದುವೆ ಆದರು. ನಿರ್ದೇಶಕ ನಟ ಪೆಕೆಟಿ ಶಿವರಾಮ್ ಜೊತೆ ಮೊದಲಿಗೆ ವಿವಾಹವಾದರು. ಇವರ ಜೊತೆ ದಾಂಪತ್ಯ ಜೀವನ ಹೇಳಿಕೊಳ್ಳುವಷ್ಟು ಚೆನ್ನಾಗಿರಲಿಲ್ಲ, ಇವರಿಗೆ ಆಗಲೇ ಮದುವೆಯಾಗಿ ನಾಲ್ಕು ಮಕ್ಕಳಿದ್ದರು. ಹಾಗೆ ಜಯಂತಿ ಅವರ ಮಗನಾಗಿ ಕೃಷ್ಣ ಕುಮಾರ್ ಅವರು ಜನಿಸಿದರು. 

ನಂತರ ಮೊದಲ ಪತಿಗೆ ವಿಚ್ಛೇದನ ನೀಡಿ, ನಿರ್ಮಾಪಕ ಗಿರಿ ಬಾಬುರನ್ನು ಎರಡನೇ ಪತಿಯಾಗಿ ಮದುವೆ ಆದ್ರು. ಇವರಿಗೂ ಕೆಲ ದಿನಗಳ ನಂತರ ವಿಚ್ಛೇದನ ನೀಡಿದರು. ನಂತರ ತಮಗಿಂತ ಕಿರಿಯ ನಟರಾದ ರಾಜ ಶೇಖರ್  ಅವರನ್ನು ಮೂರನೆಯ ಪತಿಯಾಗಿ ವರಿಸಿಕೊಂಡರು. ಇವರ ಜತೆಯೂ ವಿಚ್ಛೇದನ ಆಯ್ತು. ನಂತರ ಮಗನ ಜೊತೆ ಜಯಂತಿ ಜೀವನ ಸಾಗಿಸುತ್ತಿದ್ದರು. ಮಗನಿಗೆ ಅನು ಪ್ರಭಾಕರ್ ಅವ್ರನ್ನ ಮದುವೆ ಮಾಡಿದರು. ಅವ್ರು ಸಹ ಮಗನಿಗೆ ವಿಚ್ಛೇದನ ಕೊಟ್ಟರು. ಹೀಗೆ ಸಾಕಷ್ಟು ನೋವುಗಳನ್ನೆ ಜಯಂತಿ ನಿಜ ಜೀವನದಲ್ಲಿ ಕಂಡಿದ್ದರು...