ತನ್ನ ಮದುವೆ ವದಂತಿಗಳ ಕುರಿತು ಗರಂ ಆದ ಜೆಕೆ ಹೇಳಿದ್ದ್ಯೇನು ; ಸತ್ಯ ಇಲ್ಲಿದೆ ನೋಡಿ

By Infoflick Correspondent

Updated:Sunday, June 5, 2022, 08:31[IST]

ತನ್ನ ಮದುವೆ ವದಂತಿಗಳ ಕುರಿತು ಗರಂ ಆದ  ಜೆಕೆ  ಹೇಳಿದ್ದ್ಯೇನು ; ಸತ್ಯ ಇಲ್ಲಿದೆ ನೋಡಿ

ಕೆಲ ದಿನಗಳ ಹಿಂದೆ ಜೆಕೆ ಹಂಚಿಕೊಂಡಿದ್ದ ಇನ್ಸ್ಟಾಗ್ರಾಂ ಪೋಸ್ಟ್ ಸಖತ್ ವೈರಲ್ ಆಗಿತ್ತು.  ಜೆಕೆ ವಿವಾಹವಅಗುತ್ತಿದ್ದಾರೆ ಎಂದು ಸುದ್ದಿಗಳು ಹರಿದಾಡಲಾರಂಭಿಸಿತು. ವೈಯಕ್ತಿಕ ವಿಚಾರಕ್ಕೆ ಜಯರಾಮ್​ ಕಾರ್ತಿಕ್​ ಸುದ್ದಿಯಾಗಿದ್ದರು. ಕೇವಲ ಒಂದು ಇನ್ಸ್ಟಾಗ್ರಾಂ ಪೋಸ್ಟ್ ಮೂಲಕ ಜೆಕೆ ವಿವಾಹವಾಗುತ್ತಿದ್ದಾರೆ ಎಂಬ ಸುದ್ದಿ ಎಲ್ಲಡೆ ಹರಿದಾಡಿತ್ತು. ಆದರೆ ಇದರ ಕುರಿತು ಇದಿಗ ಸ್ವತಃ ಜೆಕೆ ಸ್ಪಷ್ಟನೆ ನೀಡಿದ್ದಾರೆ. 

ಕೆಲ ದಿನಗಳ ಹಿಂದೆ ಜೆಕೆ ಫ್ಯಾಶನ್ ಡಿಸೈನರ್ ಅಪರ್ಣಾ ಸಮಂತಾ ಅವರೊಂದಿಗಿನ ಫೋಟೋವನ್ನು ಹಂಚಿಕೊಂಡಿದ್ದರು.ಆದರೆ ಅದಾದ ಬಳಿಕ ಇವಬ್ಬರ ವಿವಾಹದ ಕುರಿತು ಸುದ್ದಿಗಳು ಹರಿದಾಡಲು ಆರಂಭಿಸಿದ ತಕ್ಷಣ ಸ್ಪಷ್ಟನೆ ನೀಡುವುದರ ಜೊತೆಗೆ ಜೆಕೆ ತಾವು ಹಂಚಿಕೊಂಡಿದ್ದ ಫೋಸ್ಟ್ ಅನ್ನು ಡಿಲೀಟ್ ಮಾಡಿದ್ದಾರೆ.  

ಮದುವೆ ವಿಚಾರವನ್ನು 42 ವರ್ಷದ ನಟ ಕಾರ್ತಿಕ್ ಜಯರಾಮ್ ತಳ್ಳಿಹಾಕಿದ್ದಾರೆ. ಇದು ಸುಳ್ಳು ಸುದ್ದಿ ಎಂದು ಗರಂ ಆಗಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಜೆಕೆ ಆಕೆ ನನ್ನ ಗೆಳತಿ ಅಷ್ಟೆ ಎಂದು ಹೇಳಿದ್ದಾರೆ. ಅಲ್ಲದೇ ವೃತ್ತಿ ಜೀವನದ ಬಗ್ಗೆ ಯಾರು ಮಾತನಾಡಲ್ಲ ಆದರೆ ಫೋಟೋ ಹಾಕಿದ ತಕ್ಷಣ ಎಲ್ಲರೂ ಕೇಳುತ್ತಾರೆ ಎಂದು ಗರಂ ಆಗಿದ್ದಾರೆ. 

‘‘ನನಗೆ ಅದೆಷ್ಟು ಬಾರಿ ಮದುವೆ ಮಾಡಿಸುತ್ತಾರೋ ಗೊತ್ತಿಲ್ಲ’’ ಎಂದು ಸುಳ್ಳು ಸುದ್ದಿಗಳನ್ನು ಹಬ್ಬಿಸುತ್ತಿರುವುದಕ್ಕೆ ನಟ ಜಯರಾಮ್ ಕಾರ್ತಿಕ್ ಬೇಸರ ವ್ಯಕ್ತಪಡಿಸಿದ್ದಾರೆ. ಅಲ್ಲದೇ 'ನಮ್ಮ ಪ್ರೊಫೇಷನಲ್ ಜೀವನವನ್ನು ಬಿಟ್ಟು ಕೇವಲ ತಮ್ಮ ವೈಯಕ್ತಿಕ ಜೀವನದ ಕುರಿತು ಇಲ್ಲಸಲ್ಲದ್ದನ್ನು ಬರೆಯಲಾಗುತ್ತದೆ. ಇದರ ಬದಲಾಗಿ ಸಿನಿಮಾಗಳ ಬಗ್ಗೆ ಬರೆಯಿರಿ' ಎಂದು ಹೇಳುವ ಮೂಲಕ ತಮ್ಮಲ್ಲಿನ ಬೇಸರವನ್ನು ತಿಳಸಿದ್ದಾರೆ.