ಅಶ್ವಿನಿ ನಕ್ಷತ್ರ ಖ್ಯಾತಿಯ ನಟ 'ಜೆಕೆ' ಹೊಸ ಅವತಾರ ನೋಡಿ ಅಭಿಮಾನಿಗಳು ಪುಲ್ ಶಾಕ್

By Infoflick Correspondent

Updated:Sunday, July 31, 2022, 09:48[IST]

ಅಶ್ವಿನಿ ನಕ್ಷತ್ರ ಖ್ಯಾತಿಯ ನಟ 'ಜೆಕೆ' ಹೊಸ ಅವತಾರ ನೋಡಿ ಅಭಿಮಾನಿಗಳು ಪುಲ್ ಶಾಕ್

ಜೆಕೆ ಅಲಿಯಾಸ್ ಜಯರಾಮ್ ಕಾರ್ತಿಕ್ ಕನ್ನಡ ಮಾತ್ರವ್ಲಲದೇ ಅನೇಕ ಬೇರೆ ಭಾಷೆಗಳ ಸೀರಿಯಲ್​ ಗಳಲ್ಲಿಯೂ ಸಿನಿಮಾಗಳಲ್ಲೂ ನಟಿಸಿದ್ದಾರೆ. ಅಶ್ವಿನಿ ನಕ್ಷತ್ರ ಧಾರಾವಾಹಿ ನಂತರ ಹೆಚ್ಚು ಪ್ರಸಿದ್ಧರಾದರು ಜೆಕೆ. ಅಶ್ವಿನಿ ನಕ್ಷತ್ರ ಸೀರಿಯಲ್ ನಂತರ ಹೆಚ್ಚು ಹಿಂದಿ ಸೀರಿಯಲ್​ ಕಡೆ ಮುಖ ಮಾಡಿದ ಜೆಕೆ ಇದೀಗ ಅವರ ಹೊಸ ಅವತಾರ ಕಂಡು ಫ್ಯಾನ್ಸ್ ಅಚ್ಚರಿ ಪಟ್ಟು ಮೆಚ್ಚುಗೆ ಸೂಚಿಸಿದ್ದಾರೆ.ಜೆಕೆ ಮತ್ತೆ ಹಿಂದಿಯ ಸೀರಿಯಲ್ ನತ್ತ ಮತ್ತೆ ಮುಖ ಮಾಡಿದ್ದಾರೆ. ಕಳೆದ ವರ್ಷದ ಹಿಂದೆ ಜಯರಾಮ್​ ಕಾರ್ತಿಕ್​ ಅವರು ಹಿಂದಿಯ ಸಿಯಾ ಕೆ ರಾಮ್ ಧಾರಾವಾಹಿಯಲ್ಲಿ ರಾವಣನಾಗಿ ಆರ್ಭಟಿಸಿ ಪ್ರೇಕ್ಷಕರ ಮನ ಗೆದ್ದಿದ್ದರು. ಇದೀಗ 5 ವರ್ಷಗಳ ನಂತರ ಹಿಂದಿ ಕಿರುತೆರೆಗೆ ಮತ್ತೆ ಕಾಲಿಟ್ಟಿದ್ದಾರೆ. ಅದೇ ರೀತಿ ಮತ್ತೊಂದು ವಿಭಿನ್ನ ಪಾತ್ರದಲ್ಲಿ ಅಬ್ಬರಿಸಲು ಜೆಕೆ ಬಂದಿದ್ದಾರೆ. 

ಹಿಂದಿಯ ಪ್ರಸಿದ್ಧ ನಿರ್ದೇಶಕ ಮಾನ್ ಸಿಂಗ್ ಆಕ್ಷನ್ ಕಟ್ ಹೇಳುತ್ತಿರುವ 'ಆಲಿಬಾಬಾ ದಸ್ತಾನ್-ಎ-ಕಾಬೂಲ್' ಎಂಬ ಸೀರಿಯಲ್​ ನಲ್ಲಿ ನಟಿಸುತ್ತಿದ್ದಾರೆ. ಈ ಸೀರಿಯಲ್​ನ ಫಸ್ಟ್​ ಲುಕ್​ ಸಹ ರಿಲೀಸ್​ ಆಗಿದೆ. ಸೀರಿಯಲ್​ ನಲ್ಲಿ ಆಲಿಬಾಬನಾಗಿ ಜೆಕೆ ಕಾಣಿಸಿಕೊಳ್ಳಲಿದ್ದಾರೆ.

ಈ ಕುರಿತು ಜೆಕೆ ತಮ್ಮ ಸಾಮಾಜಿಕ ಜಾಲತಾಣ ಇನ್ಸ್ಟಾಗ್ರಾಂ ನಲ್ಲಿಯೂ ಫಸ್ಟ್ ಲುಕ್​ ಫೋಟೋವನ್ನು ಹಂಚಿಕೊಂಡಿದ್ದು, ಇಲ್ಲಿ ಕಾಲ್ಪನಿಕ ಪ್ರಪಂಚದ ಇತಿಹಾಸದಲ್ಲಿ ಭಯಾನಕ ದುಷ್ಟ ರಾಕ್ಷಸ ಬರುತ್ತಾನೆ. ಸೋನಿ ಸಬ್​ ನಲ್ಲಿ ಆಲಿ ಬಾಬಾ ದಾಸ್ತಾನ್-ಎ-ಕಾಬೂಲ್ ಸೀರಿಯಲ್ ಬರಲಿದೆ. ಅಲಿಬಾಬಾ ಮತ್ತು 40 ಕಳ್ಳರು ಕಥೆಯಿಂದ ಸಣ್ಣ ಎಳೆಯನ್ನು ತೆಗೆದುಕೊಂಡು ಈ ಸೀರಿಯಲ್​ ಅನ್ನು ರೂಪಿಸಲಾಗಿದೆ.ಸೀರಿಯಲ್​ ಶೂಟಿಂಗ್​ ಅನ್ನು ಲಡಾಖ್‌ನಲ್ಲಿ ಪ್ರಾರಂಭಿಸುತ್ತೇವೆ. ಅಲ್ಲದೇ ಈ ಸೀರಿಯಲ್​ ಮೂಲಕ ನಾನು ಜನರ ನಿರೀಕ್ಷೆಯ ಮಟ್ಟವನ್ನು ತಲುಪುತ್ತೇನೆ ಎಂಬ ನಂಬಿಕೆ ಇದೆ' ಎಂದು ಹೇಳಿದ್ದಾರೆ.