Jayaram Karthik : ಸಕತ್ ವರ್ಕ್ ಔಟ್ ಮೂಲಕ ಎಕ್ಕ ಸಕ್ಕ ಹಾಡಿಗೆ ಮೈ ಕೊಡವಿದ ಜೆಕೆ..! ವಿಡೀಯೋ ಬಾರಿ ವೈರಲ್

By Infoflick Correspondent

Updated:Friday, June 17, 2022, 16:25[IST]

Jayaram Karthik :  ಸಕತ್ ವರ್ಕ್ ಔಟ್ ಮೂಲಕ ಎಕ್ಕ ಸಕ್ಕ ಹಾಡಿಗೆ ಮೈ ಕೊಡವಿದ ಜೆಕೆ..! ವಿಡೀಯೋ ಬಾರಿ ವೈರಲ್

ಕಾರ್ತಿಕ್ ಜಯರಾಮ್ ಅವರು ಕನ್ನಡ ಚಿತ್ರರಂಗದಲ್ಲಿ ಒಬ್ಬ ಭಾರತೀಯ ನಟ. ಅವರು ಕಲರ್ಸ್ ಕನ್ನಡದಲ್ಲಿ ಈ ಮುಂಚೆ ಪ್ರಸಾರ ಆಗಿದ್ದ ಅಶ್ವಿನಿ ನಕ್ಷತ್ರ ಎಂಬ ಸೀರಿಯಲ್ ಮೂಲಕ ಹೆಚ್ಚು ಜನಪ್ರಿಯತೆ ಪಡೆದು ಹೆಸರುವಾಸಿಯಾಗಿದ್ದಾರೆ. ಇದರಲ್ಲಿ ಅವರು ಸೂಪರ್ ಸ್ಟಾರ್ ನಟ ಜೈ "ಜೆಕೆ" ಕೃಷ್ಣ ಪಾತ್ರದಲ್ಲಿ ನಟಿಸಿದ್ದಾರೆ. ಸ್ಟಾರ್ ಪ್ಲಸ್‌ನಲ್ಲಿ ರಾವಣನಾಗಿ ಸಿಯಾ ಕೆ ರಾಮ್‌ನಲ್ಲಿ ನಟಿಸಿದ್ದಾರೆ. ನಾಯಕ ನಟನಾಗಿ ಅವರ ಮೊದಲ ಪಾತ್ರವು ಜಸ್ಟ್ ಲವ್‌ನಲ್ಲಿ ಬಂದಿತು ಎಂದು ತಿಳಿದುಬಂದಿದೆ..

ಹೌದು ನಟ ಕಾರ್ತಿಕ್ ಜಯರಾಂ ಅವರು ಸುದೀಪ್ ಅವರಿಗೆ ಒಳ್ಳೆಯ ಸ್ನೇಹಿತ ಎಂದು ಹೇಳಬಹುದು. ಬಿಗ್ಬಾಸ್ ಮನೆಗೆ ಹೋಗಿಬಂದ ನಟ ಜಯರಾಮ್ ಕಾರ್ತಿಕ್ ಅವರು ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಸದ್ದು ಮಾಡುತ್ತಿದ್ದಾರೆ. ತಮ್ಮ ಇನ್ಸ್ಟಾಗ್ರಾಂ ಖಾತೆಯ ಮೂಲಕ ವರ್ಕ್ ಔಟ್ ನಲ್ಲಿ ತುಂಬಾ ಬ್ಯುಸಿಯಾಗಿದ್ದಾರೆ ಎಂದು ತಿಳಿದುಬಂದಿದೆ. ನಟ ಜೆಕೆ ಎಂಬುದಾಗಿ ಪ್ರಸಿದ್ಧಿ ಹೊಂದಿರುವ ಕಾರ್ತಿಕ್ ಅವರು ಅವರದೇ ಆದ ಅಪಾರ ಅಭಿಮಾನಿ ಬಳಗವನ್ನು ಅವರ ಚಾಣಕ್ಷತನದ ಅಭಿನಯದಿಂದಲೆ ಗಳಿಸಿಕೊಂಡಿರುವುದು ವಿಶೇಷ ಎನ್ನಬಹುದು. ನಟ ಕಾರ್ತಿಕ್ ಜಯರಾಂ ಅವರಿಗೆ ಹುಡುಗಿಯರ ಫ್ಯಾನ್ ಫಾಲೋವಿಂಗ್ ಕೂಡ ಇದೆ. ಹೌದು ಬಹಳ ದಿನಗಳ ನಂತರ ಇದೀಗ ಜಯರಾಮ್ ಕಾರ್ತಿಕ್ ಅವರು ಕಿಚ್ಚ ಸುದೀಪ್ ಅವರ ಬಹು ನಿರೀಕ್ಷಿತ ಚಿತ್ರ ಪ್ಯಾನ್ ಇಂಡಿಯಾ ಸಿನಿಮಾವಾದ ವಿಕ್ರಾಂತ ರೋಣ ಹಾಡೊಂದಕ್ಕೆ ಜಿಮ್ ನಲ್ಲಿಯೇ ವಿಭಿನ್ನ ಶೈಲಿಯ ಡಾನ್ಸ್ ಮಾಡಿ ಎಲ್ಲರ ಗಮನಸೆಳೆದಿದ್ದಾರೆ ಎಂದು ಹೇಳಲಾಗುತ್ತಿದೆ. 

ಅಸಲಿಗೆ ಜೆಕೆ ಅವರು ಜಿಮ್ ನಲ್ಲಿ ವರ್ಕೌಟ್ ಮಾಡುತ್ತ ಸುದೀಪ್ ಅವರ ಎಕ್ಕಸಕ್ಕ ಹಾಡಿಗೆ ಮೈ ಕೊಡವಿ ಬಾರಿ ನೃತ್ಯ ಮಾಡಿದ್ದು ಹೇಗೆ ಗೊತ್ತಾ..? ತದನಂತರ ಅವರ ಇನ್ಸ್ಟಾಗ್ರಾಂ ಖಾತೆಯಲ್ಲಿ ವಿಡಿಯೋವನ್ನು ಶೇರ್ ಮಾಡಿಕೊಂಡಿದ್ದು ಅದೇ ಎಕ್ಕಸಕ್ಕ ಹಾಡಿಗೆ ವಿಭಿನ್ನ ಶೈಲಿಯ ರೀಲ್ಸ್ ವಿಡಿಯೋ ಅತಿ ಹೆಚ್ಚು ವೀಕ್ಷಣೆ ಕಂಡಿದೆಯಂತೆ. ಅವರ ಅಭಿಮಾನಿಗಳು ಸಹ ಈ ಕಸರತ್ತಿನ ವಿಡಿಯೋ ನೋಡಿ ಖುಷಿಯಾಗಿದ್ದಾರೆ ಎನ್ನಲಾಗಿದೆ. ಇನ್ನೊಂದು ಕಡೆ ನಟ ಕಿಚ್ಚ ಸುದೀಪ್ ಅವರ  ಅಭಿಮಾನಿಗಳು ಸಹ ವಾವ್ ಎಂದು ಭೇಷ್ ಎಂದಿದ್ದಾರೆ. ಈ ಮಾಹಿತಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ. ಹಾಗೆ ನೀವು ಕೂಡ ಜೆಕೆಯವರ ಎಕ್ಕಸಕ್ಕ ಹಾಡಿನ ರೀಲ್ಸ್ ನೋಡಬೇಕು ಎಂದಾದಲ್ಲಿ, ಇಲ್ಲಿದೆ ನೋಡಿ ವಿಡಿಯೋ. ವಿಡಿಯೋವನ್ನು ಪೂರ್ತಿ ನೋಡಿ ಇಷ್ಟವಾದರೆ ತಪ್ಪದೇ ಶೇರ್ ಕೂಡ ಮಾಡಿ ಧನ್ಯವಾದಗಳು..