ಕೆಸರಿನ ಗದ್ದೆಯಲ್ಲಿ ಶ್ವೇತಾ ಚೆಂಗಪ್ಪ, ಮಾಳವಿಕಾ ಹಾಗೂ ಪ್ರೇಮ್..! ಜೋಡಿಗಳ ಅವತಾರ ವೈರಲ್..

By Infoflick Correspondent

Updated:Friday, July 29, 2022, 11:49[IST]

ಕೆಸರಿನ ಗದ್ದೆಯಲ್ಲಿ ಶ್ವೇತಾ ಚೆಂಗಪ್ಪ, ಮಾಳವಿಕಾ ಹಾಗೂ ಪ್ರೇಮ್..! ಜೋಡಿಗಳ ಅವತಾರ ವೈರಲ್..

ಕನ್ನಡದ ಕಿರುತೆರೆ ಖ್ಯಾತ ರಿಯಾಲಿಟಿ ಶೋಗಳಲ್ಲಿ ಒಂದಾದ ಇತ್ತೀಚಿನ ಜೋಡಿ ನಂಬರ್ ಒನ್ ಕಾರ್ಯಕ್ರಮ ಸಹ ಈಗ ಸಕತಾಗಿ ಮೂಡಿ ಬರುತ್ತಿದೆ. ಝೀ ಕನ್ನಡದಲ್ಲಿ ಈಗಾಗಲೇ ಹೆಚ್ಚು ರಿಯಾಲಿಟಿ ಶೋಗಳು ಪ್ರಸಾರ ಆಗಿವೆ. ನಮ್ಮಮ್ಮ ಸೂಪರ್ ಸ್ಟಾರ್ ಮುಗಿದಿದೆ, ಹಾಗೆ ರಾಜ ರಾಣಿ ಮುಗಿದು ತನ್ನ ಎರಡನೇ ಸೀಸನ್ ಆರಂಭ ಮಾಡಿದೆ. ಮತ್ತು ಕನ್ನಡದ ಮತ್ತೊಂದು ಕಾರ್ಯಕ್ರಮ ಗಿಚ್ಚಿ ಗಿಲಿ ಗಿಲಿ ಸಹ ಕಾಮಿಡಿ ಜಲಕ್ ನೀಡುತ್ತಾ ಒಳ್ಳೆಯ ಪ್ರತಿಕ್ರಿಯೆ ಪಡೆದುಕೊಂಡಿದೆ. ಹೌದು ಝೀ ಕನ್ನಡದಲ್ಲಿ ಇದೀಗ ಕೆಲ ಕನ್ನಡದ ಕೆಲ ಸ್ಟಾರ್ ಕಿರುತೆರೆ ಕಲಾವಿದರ ಜೋಡಿಗಳ ಆಗಮನ ಈ ಶೋಗೆ ಆಗಿದ್ದು ಬೇರೆ ಬೇರೆ ರೀತಿಯಲ್ಲಿ ಪ್ರೇಕ್ಷಕರ ಗಮನವನ್ನು ಸೆಳೆಯಲು ಹೆಚ್ಚು ಪ್ರಯೋಗ ಮಡುತ್ತಿದ್ದಾರೆ.  

ಅದೇ ರೀತಿ ಈ ಷೋ ಈಗಾಗಲೆ ಹೆಚ್ಚು ಬೇಡಿಕೆಯ ಷೋ ಆಗಿದೆ. ಜೋಡಿ ನಂಬರ್ ಒನ್ ಕಾರ್ಯಕ್ರಮ ಝೀ ಕನ್ನಡ ಚಾನೆಲ್ ನಲ್ಲಿ ಪ್ರತಿವಾರ ಶನಿವಾರ ಹಾಗೂ ಭಾನುವಾರ ಸಂಜೆ 6.30ಕ್ಕೆ ಪ್ರಸಾರ ಆಗುತ್ತಿದ್ದು, ನಟಿ ಶ್ವೇತಾ ಚೆಂಗಪ್ಪಾ ಅವರು ಕಾರ್ಯಕ್ರಮ ನಿರೂಪಣೆ ಮಾಡುತ್ತಿದ್ದಾರೆ. ಹಾಗೆ ಮಾಳವಿಕಾ ಹಾಗೂ ಲವ್ಲಿ ಸ್ಟಾರ್ ಪ್ರೇಮ್ ಅವರು ಷೋನ ತೀರ್ಪುಗಾರರಾಗಿ ಕಾಣಿಸಿಕೊಳ್ಳುತ್ತಿರುವುದು ವಿಶೇಷವಾಗಿ ಎಂದು ಹೇಳಬಹುದು.ಹೌದು, ಜೋಡಿಗಳು ಈ ವಾರ ಕೆಸರು ಗದ್ದೆಯಲ್ಲಿ ಮಿಂದೆದ್ದು ಅವರವರ ಜೋಡಿ ಜೊತೆ ತೆಂಗಿನಕಾಯಿಗಾಗಿ ಪರದಾಟ ನಡೆಸಿದ್ದಾರೆ. ವೀಕ್ಷಕರಿಗೆ ಈ ವಾರ ಒಳ್ಳೆಯ ಮನರಂಜನೆ ಪೂರ ಕಾರ್ಯಕ್ರಮ ಸಿಗಲಿದ್ದು ಈ ಜೋಡಿಗಳ ಅವತಾರ ನಿಜಕ್ಕೂ ತುಂಬಾ ಫನ್ನಿ ಆಗಿದೆ ಎಂದು ಹೇಳಬಹುದು.

ಜೋಡಿ ವೇದಿಕೆಯಲ್ಲಿ ಅವರವರ ಕೆಲ ನಿಜ ಜೀವನದ ಕೆಲ ವಿಚಾರಗಳಿಗೆ ಸಂಬಂಧಿಸಿದಂತೆಯೇ ಟಾಸ್ಕ್ ಗಳನ್ನು ಹೆಚ್ಚು ನೀಡಲಾಗಿದೆ. ಹಾಗೆ ಒಬ್ಬರನ್ನೊಬ್ಬರು ಅರ್ಥೈಸಿಕೊಳ್ಳದೆ ಇರುವ ಕೆಲ ವಿಚಾರಗಳನ್ನು ಸಹ ಪ್ರಸ್ತಾಪ ಮಾಡಿ ಮತ್ತೆ ಆ ಸಮಸ್ಯೆ ಇರದಂತೆಯೇ ಮಾಡಿಸಲಾಗುತ್ತಿದೆ. ಅಸಲಿಗೆ ಈ ವಾರ ಹೇಗೆಲ್ಲ ಕೆಸರುಗದ್ದೆಯಲ್ಲಿ ಜೋಡಿಗಳು ಆಟವನ್ನು ಆಡಿದ್ದಾರೆ ಗೊತ್ತಾ.? ಇದೀಗ ಒಂದು ಪ್ರೊಮೋ ತುಣುಕನ್ನು ಹಂಚಿಕೊಂಡಿರುವ ಜೀ ಕನ್ನಡ ವತಿಯವರು ಯಾವ ರೀತಿ ಜೋಡಿಗಳು ಕೆಸರಿನಲ್ಲಿ ಅವರವರ ಜೋಡಿಯನ್ನು ಹೆಗಲ ಮೇಲೆ ಹೊತ್ತುಕೊಂಡು ಓಡುತ್ತ ಸೆಣಸಾಟ ನಡೆಸುತ್ತಾರೆ ಎಂಬುದಾಗಿ ಈ ವಿಡಿಯೋದಲ್ಲಿ ತೋರಿಸಿದ್ದಾರೆ. ಜೊತೆಗೆ ಅದರ ವಿಡಿಯೋ ತುಣುಕು ಇದೀಗ ಎಲ್ಲೆಡೆ ವೈರಲಾಗುತ್ತಿದೆ ಎಂದು ಹೇಳಬಹುದು. ಪ್ರೇಕ್ಷಕರು ಕೂಡ ಈ ವಾರ ಜೋಡಿ ನಂಬರ್ ಒನ್ ವೇದಿಕೆ ಮೂಲಕವೆ ಸಖತ್ ಮನರಂಜನೆ ಪಡೆಯುವುದು ಪಕ್ಕ ಆಗಿದೆಯಂತೆ. ಇಲ್ಲಿದೆ ನೋಡಿ ಆ ವಿಡಿಯೋ, ತಪ್ಪದೇ ಮಾಹಿತಿ ಶೇರ್ ಮಾಡಿ ನಿಮ್ಮ ನೆಚ್ಚಿನ ಜೋಡಿ ಯಾರೆಂದು ಕಾಮೆಂಟ್ ಮಾಡಿ ಧನ್ಯವಾದಗಳು..