Jodi No 1 : ರಿಯಲ್ ಜೋಡಿಗಳಿಗೆ ನೂತನವಾಗಿ ಬರುತ್ತಿದ್ದಾರೆ ಅನುಶ್ರೀ ಅರ್ಜುನ್ ಜನ್ಯಾ..! ಇಲ್ನೋಡಿ ವಿಡೀಯೋ

By Infoflick Correspondent

Updated:Wednesday, June 8, 2022, 12:35[IST]

Jodi No 1 :  ರಿಯಲ್ ಜೋಡಿಗಳಿಗೆ ನೂತನವಾಗಿ ಬರುತ್ತಿದ್ದಾರೆ ಅನುಶ್ರೀ ಅರ್ಜುನ್ ಜನ್ಯಾ..! ಇಲ್ನೋಡಿ ವಿಡೀಯೋ

ಜೀ ಕನ್ನಡ ವಾಹಿನಿ ಕಿರುತೆರೆಯಲ್ಲಿ ಸತತ ಹದಿನೈದು ವರ್ಷದಿಂದ ಪ್ರೇಕ್ಷಕರನ್ನು ರಂಜಿಸುತ್ತಲೆ ಬಂದಿದೆ. ಹೌದು ಒಂದರಮೇಲೊಂದರಂತೆ ನೂತನ ಕಾರ್ಯಕ್ರಮಗಳನ್ನು ಕಿರುತೆರೆಯಲ್ಲಿ ಪ್ರಸಾರ ಮಾಡುತ್ತಿದ್ದು, ಹೆಚ್ಚು ಪ್ರೇಕ್ಷಕರನ್ನು ರಂಜಿಸುತ್ತಾ ಬರುತ್ತಿದೆ. ಜೀ ಕನ್ನಡ ಇದೀಗ ಮತ್ತೊಂದು ಹೆಜ್ಜೆ ಮುಂದೆ ಹೋಗಿದ್ದು, ಇದೇ 11 ನೇ ತಾರೀಖಿನಿಂದ ಶನಿವಾರ ಮತ್ತು ಭಾನುವಾರ ರಾತ್ರಿ ಆರು ಮೂವತ್ತಕ್ಕೆ ಜೋಡಿ ನಂಬರ್ ಒಂದು ಎಂಬ ಹೊಸ ಕಾರ್ಯಕ್ರಮವನ್ನು ಕಿರುತೆರೆಗೆ ತರಲು ಸಜ್ಜಾಗಿದೆ ಎನ್ನಲಾಗಿದೆ. ನಿಜ ಜೀವನದಲ್ಲಿ ರಿಯಲ್ ಜೋಡಿಗಳಾದ ಕೆಲ ಸೆಲೆಬ್ರಿಟಿಗಳನ್ನು ಈ ಜೋಡಿ ನಂಬರ್ ವನ್ ಕಾರ್ಯಕ್ರಮಕ್ಕೆ ಕರೆತರುತ್ತಿದೆ ಜೀ ಕನ್ನಡ ವಾಹಿನಿ ಚಾನೆಲ್. ಹೌದು ಕಾರ್ಯಕ್ರಮದ ಪ್ರೋಮೋ ಇದೀಗ ಬಿಡುಗಡೆಯಾಗಿದೆ.

ಪ್ರಮೋದಲ್ಲೇ ತೋರಿಸಿದ ಹಾಗೆ ಅನುಶ್ರೀ ಮತ್ತು ಅರ್ಜುನ್ ಜನ್ಯ ಅವರು ರೀಲ್ ಜೋಡಿಗಳಾಗಿ ಹೊರಹೊಮ್ಮಿದ್ದಾರೆ. ರಿಯಲ್ ಜೋಡಿಗಳಿಗಾಗಿ ಈ ಕಾರ್ಯಕ್ರಮ ಬರುತ್ತಿದೆ ಎನ್ನುವ ವಿಚಾರ ಬಿಚ್ಚಿಟ್ಟಿದ್ದಾರೆ. ಹೌದು ಈ ಹೊಚ್ಚ ಹೊಸ ರಿಯಾಲಿಟಿ ಶೋನಲ್ಲಿ ಈ ಮುಂಚೆಯೇ ಬಿಗ್ಬಾಸ್ ಮನೆಗೆ ಹೋಗಿ ಬಂದಿದ್ದ ಕಿರಿಕ್ ಕೀರ್ತಿ ಬರಲಿದ್ದಾರೆ. ಕಿರಿಕ್ ಕೀರ್ತಿ ಪತ್ನಿ ಅರ್ಪಿತ ಕೂಡ ಬರಲಿದ್ದಾರೆ. ಹಾಗೆ ಮೊನ್ನೆಯಷ್ಟೇ ಮದುವೆಯಾಗಿದ್ದ ರಮ್ಯ ಮತ್ತು ನೀನಾದ ಹರಿತ್ಸ ಜೋಡಿ ಕೂಡ ಆಗಮಿಸಲಿದೆ ಎಂದು ಹೇಳಲಾಗುತ್ತಿದೆ. ಕಾಮಿಡಿ ಕಿಲಾಡಿಗಳು ಕಾರ್ಯಕ್ರಮದಲ್ಲಿ ಹೆಚ್ಚು ಮಿಂಚಿದ್ದ ಹಾಗೂ ರನ್ನರ್ ಅಪ್ ಆಗಿದ್ದ ಗೋವಿಂದೇಗೌಡ ಮತ್ತು ಅವರ ಪತ್ನಿ ದಿವ್ಯಶ್ರೀ ಅವರು ಕೂಡ ಬರಲಿದ್ದಾರಂತೆ.   

ಕನ್ನಡ ಚಿತ್ರರಂಗದ ಹಿರಿಯ ನಟ ಅಭಿಜಿತ್ ದಂಪತಿ ಸಹ ಬರುತ್ತಿದ್ದಾರೆ. ಜೊತೆಗೆ ಹಿಟ್ಲರ್ ಕಲ್ಯಾಣ ಧಾರಾವಾಹಿಯ ನಟಿ ನೇಹಾ ಪಾಟೀಲ್ ಪ್ರಣವ್ ಸಹ ಬರುತ್ತಿದ್ದು, ಇನ್ನು ಕೂಡ ಕೆಲ ರಿಯಲ್ ಜೋಡಿಗಳು ಈ ಹೊಚ್ಚಹೊಸ ಜೋಡಿ ನಂಬರ್ ವನ್ ಕಾರ್ಯಕ್ರಮದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ. ಇನ್ನುಳಿದ ರಿಯಲ್ ಜೋಡಿಗಳು ಯಾವುವು ಗೊತ್ತಾ..? ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋ ನೋಡಿ. ಹಾಗೆ ಈ ಶೋಗೆ ಜಡ್ಜಸ್ ಯಾರೆಂದು ಇನ್ನೂ ವಾಯಿನಿ ಬಿಟ್ಟುಕೊಟ್ಟಿಲ್ಲ. ನಿಮ್ಮ ಪ್ರಕಾರ ಯಾರು ಈ ಶೋಗೆ ಜಡ್ಜಸ್ ಆಗಿ ಬರಬೇಕು ಎಂದು ಕಮೆಂಟ್ ಮಾಡಿ ವಿಡಿಯೋ ಇಷ್ಟವಾದಲ್ಲಿ ಶೇರ್ ಮಾಡಿ, ಮತ್ತು ನೂತನ ಕಾರ್ಯಕ್ರಮ ನಂಬರ್ ಒನ್ ತಂಡಕ್ಕೆ ಶುಭವಾಗಲಿ ಎಂದು ಹಾರೈಸಿ ಧನ್ಯವಾದಗಳು...( video credit :zee kannada tv )