ಜೊತೆ ಜೊತೆಯಲಿ ಧಾರಾವಾಹಿ ಗೆ ಹರೀಶ್ ರಾಜ್ ಎಂಟ್ರಿ ! ಯಾವ ಪಾತ್ರಕ್ಕೆ ಗೊತ್ತೆ

By Infoflick Correspondent

Updated:Wednesday, August 31, 2022, 10:02[IST]

ಜೊತೆ ಜೊತೆಯಲಿ ಧಾರಾವಾಹಿ ಗೆ ಹರೀಶ್ ರಾಜ್ ಎಂಟ್ರಿ ! ಯಾವ ಪಾತ್ರಕ್ಕೆ ಗೊತ್ತೆ

ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಧಾರಾವಾಹಿಗಳಲ್ಲಿ ಜೊತೆ ಜೊತೆಯಲಿ  ಸೀರಿಯಲ್ ಸಹ ಒಂದು ಸೀರಿಯಲ್ ಶೂಟಿಂಗ್‍ನಲ್ಲಿ ಆದ ಕಿರಿಕ್‍ನಿಂದ ಅನಿರುದ್ಧ್ ಧಾರಾವಾಹಿಯಿಂದ ಔಟ್ ಆಗಿದ್ದಾರೆ. ಆ ಪಾತ್ರಕ್ಕೆ ಯಾರು ಬರ್ತಾರೆ ಅನ್ನೋ ಕುತೂಹಲ ಹಾಗೇ ಉಳಿದಿದೆ

ಹರೀಶ್ ರಾಜ್ ಆರ್ಯವರ್ಧನ್ ಆಗಿ ಧಾರವಾಹಿಗೆ ಬರಲಿದ್ದಾರೆ ಎಂಬ ರೂಮರ್ ಗಳಿತ್ತು. ಸ್ಯಾಂಡಲ್ ವುಡ್ ನಟ, ಬಿಗ್ ಬಾಸ್ ಖ‍್ಯಾತಿಯ ಹರೀಶ್ ರಾಜ್ ಜೊತೆ ಜೊತೆಯಲಿ ಧಾರವಾಹಿಗೆ ಎಂಟ್ರಿ ಕೊಟ್ಟಿದ್ದಾರೆ.    

 ತಾನು ಮಾಡುತ್ತಿರುವುದು ಆರ್ಯವರ್ಧನ್ ಪಾತ್ರವಲ್ಲ ಎಂದು ಹರೀಶ್ ರಾಜ್ ಈಗಾಗಲೇ ಅಭಿಮಾನಿಗಳಿಗೆ ಸುಳಿವು ನೀಡಿದ್ದಾರೆ. ಇಂದಿನ ಸಂಚಿಕೆಯಿಂದ ಹರೀಶ್ ರಾಜ್ ಧಾರವಾಹಿಗೆ ಎಂಟ್ರಿ ಕೊಟ್ಟಿದ್ದು ಅವರ ಪಾತ್ರವೇನು ಎಂಬುದು ಸಸ್ಪೆನ್ಸ್ ಆಗಿ ಉಳಿದಿದೆ.

ಹರೀಶ್ ರಾಜ್ ಅವರು ಜೊತೆ ಜೊತೆಯಲಿ ಸೀರಿಯಲ್‍ಗೆ ಎಂಟ್ರಿ ಆಗಿದ್ದಾರೆ. ಆದ್ರೆ ಆರ್ಯವರ್ಧನ್ ಪಾತ್ರಕ್ಕಲ್ಲ. ಅವನ ಸಹೋದರ ಪಾತ್ರ ವಿಶ್ವಾಸ್ ದೇಸಾಯಿ ಪಾತ್ರಕ್ಕೆ. ಧಾರಾವಾಹಿ ತಂಡವು ಹೊಸ ಪ್ರೋಮವೊಂದನ್ನು ಬಿಟ್ಟಿದೆ. ಅದರಲ್ಲಿ ಹರೀಶ್ ರಾಜ್ ಕಾಣಿಸಿಕೊಂಡಿದ್ದಾರೆ. ಆರ್ಯವರ್ಧನ್ ನಿಜವಾದ ಅಮ್ಮ ಅಂದ್ರೆ ಪ್ರಿಯದರ್ಶಿನಿ ಬಳಿ, ವಿಶ್ವಾಸ್ ದೇಸಾಯಿ ಸಾಲದ ಮೇಲೆ ಸಾಲ ತಗೊಂಡು ನನ್ನ ಕಂಪನಿ ಮುಳುಗಿ ಹೋಯಿತು. ಸಾಲು ಇರೋದು 700 ಕೋಟಿ ರೂಪಾಯಿ ಅಮ್ಮ ಎನ್ನುತ್ತಾನೆ. ಅದಕ್ಕೆ ಅಮ್ಮ ಪ್ರಿಯದರ್ಶಿನಿ ಎಲ್ಲ ಕೋಟಿಗಳನ್ನು ಮೀರಿಸುವಂತಹ, ನಿನ್ನನ್ನ ಬದುಕಿಸುವಂತ ಒಬ್ಬ ಇದಾನೆ ಎಂದು ಹೇಳುತ್ತಾಳೆ.

ಆರ್ಯವರ್ಧನ್ ಪಾತ್ರದಲ್ಲೇ ಅನಿರುದ್ಧ ಕಾಣಿಸಿಕೊಂಡಿರುವುದರಿಂದ ಹರೀಶ್ ರಾಜ್ ಅವರು ಆರ್ಯವರ್ಧನ್ ಪಾತ್ರದ ಬದಲು ಬೇರೊಂದು ಪಾತ್ರ ಮಾಡಿದ್ದಾರೆ ಎನ್ನುವುದು ಸ್ಪಷ್ಟ. ಆದರೆ, ಆರ್ಯವರ್ಧನ್ ಪಾತ್ರವನ್ನು ಕಥೆಯಲ್ಲಿ ಹೇಗೆ ತಗೆದುಕೊಂಡು ಹೋಗುತ್ತಾರೆ ಎನ್ನುವುದೇ ಸದ್ಯಕ್ಕಿರುವ ಕುತೂಹಲ.