ಕನಸಿನ ಬೆನ್ನೇರಿ ಬಂದ ಶಿವಾಜಿ ರಾವ್‌ ಜಾಧವ್ ಇಂದು 42 ಮನೆಗಳ ಒಡೆಯ

By Infoflick Correspondent

Updated:Monday, August 29, 2022, 15:58[IST]

ಕನಸಿನ ಬೆನ್ನೇರಿ ಬಂದ ಶಿವಾಜಿ ರಾವ್‌ ಜಾಧವ್ ಇಂದು 42 ಮನೆಗಳ ಒಡೆಯ

ಅದು ದೊಡ್ಡ ಕುಟುಂಬ. ಓದು ಮುಗಿಸಿದ ಮೇಲೆ ಕುಟುಂಬ ಉದ್ಯೋಗ ಬೇಕರಿ ಕೆಲಸಕ್ಕೆ ಸೇರಿದ ಆ ಹುಡುಗ ಇಂದು ಕೋಟಿಗಟ್ಟಲೆ ಆಸ್ತ ಮಾಡಿದ್ದಾರೆ. ತಮ್ಮ ಕುಟುಂಬ ಉದ್ಯೋಗವನ್ನು ತೊರೆದು ಕನಸಿನ ಬೆನ್ನೇರಿ ಬಂದ ನಟ ಶಿವಾಜಿ ರಾವ್ ಜಾಧವ್ ಅವರ ಕಥೆ. ಯಾರಿದು ಅಂತ ನೀವು ಪ್ರಶ್ನೆ ಕೇಳಬಹುದು. ಅವರೇ ಕಣ್ರಿ.. ನಿಮ್ಮೆಲ್ಲರ ಅಚ್ಚು ಮೆಚ್ಚಿನ ಜೊತೆ ಜೊತೆಯಲಿ ಧಾರಾವಾಹಿಯ ಸುಬ್ಬು. ಇವರ ನಿಜವಾದ ಹೆಸರು ಶಿವಾಜಿ ರಾವ್ ಜಾಧವ್. 

ಮೈಸೂರಿನಲ್ಲಿ ವಾಸವಿರುವ ಇವರದ್ದು ದೊಡ್ಡ ಕುಟುಂಬ. ಹೀಗೆ ನಾಟಕ ನೋಡಿ, ತಾನೂ ಒಬ್ಬ ನಟನಾಗಬೇಕು ಎಂದು ಆಸೆ ಪಟ್ಟರು. ಸಣ್ಣ ಪುಟ್ಟ ನಾಟಕಗಳಲ್ಲಿ ನಟಿಸುತ್ತಾ, ತಮ್ಮದೇ ಒಂದು ತಂಡವನ್ನೂ ಕಟ್ಟಿಕೊಂಡರು. ಕೊನೆಗೆ ಧಾರಾವಾಹಿಯೊಂದರಲ್ಲಿ ನಟಿಸುವ ಮೂಲಕ ಕಿರುತೆರೆಗೂ ಎಂಟ್ರಿ ಕೊಟ್ಟರು. ಬಳಿಕ ಟಿಎನ್ ಸೀತಾರಾಂ, ಸೇತುರಾಂ ಅವರೊಂದಿಗೆ ಹಲವು ಧಾರಾವಾಹಿಗಳಲ್ಲಿ ಕಾಣಿಸಿಕೊಂಡರು. ಮಂಥನ ಧಾರಾವಾಹಿಯಲ್ಲಿ ರೆಡ್ಡಿ ಪಾತ್ರದಲ್ಲಿ ನಟಿಸಿದರು. ಈ ಪಾತ್ರ ಶಿವಾಜಿ ಅವರಿಗೆ ಒಳ್ಳೆಯ ಬ್ರೇಕ್ ತಂದುಕೊಟ್ಟಿತು.    

ಅಲ್ಲಿಂದ ಶಿವಾಜಿ ರಾವ್ ಅವರೂ ಹಿಂದಿರುಗಿ ನೋಡಿದ್ದೇ ಇಲ್ಲ. ಇದೀಗ ಜೊತೆ ಜೊತೆಯಲಿ ಧಾರಾವಾಹಿಯಲ್ಲಿ ಸುಬ್ಬು ಪಾತ್ರದಿಂದ ಮಿಂಚುತ್ತಿದ್ದಾರೆ. ಇನ್ನು ಶಿವಾಜಿ ಅವರು ಮೊದಲು ಧಾರಾವಾಹಿಯಲ್ಲಿ ನಟಿಸುವಾಗ ಕೇವಲ 100-150  ರೂಪಾಯಿ ಹಣ ಸಿಗುತ್ತಿತ್ತಂತೆ. ಅದರಲ್ಲೇ ಕಷ್ಟಪಟ್ಟು ಜೀವನ ನಡೆಸುತ್ತಿದ್ದರಂತೆ. ಬಂದ ಹಣದಲ್ಲೇ ಕೂಡಿಡುತ್ತಿದ್ದ ಶಿವಾಜಿ ರಾವ್ ಅವರು ಇಂದು ಮೈಸೂರಿನಲ್ಲಿ ದೊಡ್ಡ ಬಂಗಲೆಯನ್ನು ಕಟ್ಟಿಸಿದ್ದಾರೆ. ಅದರಲ್ಲೇ ವಾಸವಿರುವ ಶಿವಾಜಿ ಅವರು 42 ಮನೆಗಳಿರುವ ಅಪಾರ್ಟ್ ಮೆಂಟ್ ಅನ್ನು ಕೂಡ ಕಟ್ಟಿಸಿದ್ದು, ಬಾಡಿಗೆಗೆ ಕೊಟ್ಟಿದ್ದಾರಂತೆ.