ಜೊತೆಜೊತೆಯಲಿ ತಂಡದಿಂದ ಮತ್ತೊಬ್ಬ ಖ್ಯಾತ ನಟನಿಗೆ ಕರೆ ! ಆದರೆ ನಟ ವಿಧಿಸಿದ್ದು ಈ ಷರತ್ತು

By Infoflick Correspondent

Updated:Friday, August 26, 2022, 09:43[IST]

ಜೊತೆಜೊತೆಯಲಿ ತಂಡದಿಂದ ಮತ್ತೊಬ್ಬ ಖ್ಯಾತ ನಟನಿಗೆ ಕರೆ ! ಆದರೆ ನಟ ವಿಧಿಸಿದ್ದು ಈ ಷರತ್ತು

ನಟ ಅನಿರುದ್ಧ್ ಕಿರಿಕ್‌ ಮಾಡಿಕೊಂಡು ಶೂಟಿಂಗ್‌ ಸೆಟ್‌ನಿಂದ ಹೊರ ನಡೆದ ಮೇಲೆ ಇನ್ನು ಮುಂದೆ ಆರ್ಯವರ್ಧನ್ ಪಾತ್ರದಲ್ಲಿ ಯಾರು ನಟಿಸುತ್ತಾರೆ ಎನ್ನುವ ಕುತೂಹಲ ವೀಕ್ಷಕರಲ್ಲಿದೆ.ಕಳೆದೊಂದು ವಾರದಿಂದ ಎಲ್ಲಡೆ 'ಜೊತೆಜೊತೆಯಲಿ' ಧಾರಾವಾಹಿಯ ಬಗ್ಗೆ ಬಿಸಿಬಿಸಿ ಚರ್ಚೆ ನಡೀತಿದೆ. 

ರಾಜಿ ಮಾಡಿಕೊಂಡು ಮತ್ತೆ ಧಾರಾವಾಹಿಯಲ್ಲಿ ನಟಿಸಲು ನಟ ಅನಿರುದ್ಧ್ ಸಿದ್ಧರಾಗಿದ್ದಾರೆ. ಇದನ್ನು ಸ್ವತಃ ಸುದ್ಧಿಗೋಷ್ಠಿಯಲ್ಲಿ ಹೇಳಿದ್ದಾರೆ. ಆದರೆ ಧಾರಾವಾಹಿ ನಿರ್ಮಾಪಕ ಆರೂರು ಜಗದೀಶ್ ಇದಕ್ಕೆ ಸುತಾರಂ ಒಪ್ಪುತ್ತಿಲ್ಲ. ಅನಿರುದ್ಧ್‌ ನಮ್ಮ ಧಾರಾವಾಹಿಯಲ್ಲಿ ನಟಿಸೋದು ಬೇಡ ಎನ್ನುತ್ತಿದ್ದಾರೆ. ಆರ್ಯವರ್ಧನ್ ಪಾತ್ರಕ್ಕೆ ಬೇರೆ ನಟನನ್ನು ಕರೆತರು ನಿರ್ದೇಶಕರು ನಿರ್ಮಾಪಕರು ಸಿದ್ಧತೆ ನಡೆಸಿದ್ದಾರೆ.   

ಈಗಾಗಲೇ ನಿರ್ದೇಶಕ ಅನೂಪ್ ಭಂಡಾರಿ, ಜೆಕೆ ಮುಂತಾದವರ ಹೆಸರು ನಾಯಕನ ಪಾತ್ರಕ್ಕೆ ಕೇಳಿಬರುತ್ತಿದೆ. ಅನೂಪ್ ಭಂಡಾರಿಗೆ ಕರೆ ಬಂದಿದ್ದು ಅವರು ಬ್ಯೂಸಿ ಇದ್ದ ಕಾರಣ ಆಫರ್ ತಿರಸ್ಕರಿಸಿದ್ದಾರೆ. ಹಾಗಾದರೆ ಈಗ ಆರ್ಯವರ್ಧನ್ ಪಾತ್ರ ಯಾರು ಮಾಡಿತ್ತಾರೆ ಎಂಬುದು ಜನರ ಪ್ರಶ್ನೆಯಾಗಿದೆ. 

ಹೊಸ ನಟನ ಆಯ್ಕೆ ನಡೆಯಬೇಕಿದೆ. ಹಾಗಾಗಿ ಪಾತ್ರಕ್ಕೆ ಹೊಂದಿಕೆಯಾಗುವಂತಹ ನಟರ ಜೊತೆ ಚರ್ಚೆ ಶುರುವಾಗಿದೆ. ಇದೀಗ  ನಟ ಹರೀಶ್‌ ರಾಜ್‌ಗೆ ಧಾರಾವಾಹಿ ತಂಡ ಕರೆ ಮಾಡಿ ಆರ್ಯವರ್ಧನ್‌ ಪಾತ್ರದಲ್ಲಿ ನಟಿಸುವಂತೆ ಆಫರ್  ನೀಡಲಾಗಿದೆ. ನಟ ಹರೀಶ್‌ ರಾಜ್‌ ಜೊತೆ ತಂಡ ಮಾತುಕತೆ ನಡೆಸಿದೆ.

ಈ ವಿಷಯದ ಕುರಿತು ಹರೀಶ್ ರಾಜ್ ಮಾತನಾಡಿದ್ದಾರೆ. ನನ್ನನ್ನು ಅಪ್ರೋಚ್ ಮಾಡಿರುವುದು ಹೌದು. ಮಾತುಕತೆ ನಡೀತಿದೆ. ಖಂಡಿತ ಒಬ್ಬ ಕಲಾವಿದನಾಗಿ ಒಂದು ಪಾತ್ರ ಬಂದಾಗ ಆ ಪಾತ್ರಕ್ಕೆ ನ್ಯಾಯ ಒದಗಿಸುವುದು ನನ್ನ ಕರ್ತವ್ಯ. ಅವರು ಅಪ್ರೋಚ್ ಮಾಡಿದ್ದಾರೆ ಅಂದರೆ ನಾನು ಆ ಪಾತ್ರ ಮಾಡಬಹುದು ಎಂದು ಅವರಿಗೆ ಅನ್ನಿಸರಬಹುದು. ನೋಡೋಣ ಮಾತುಕತೆ ನಡೀತಿದೆ. ನೋಡೋಣ ಏನಾಗುತ್ತದೆ ಎಂದಿದ್ದಾರೆ.   

ಆದರೆ ಹರೀಶ್ ರಾಶ್ ಒಂದು ಷರತ್ತು ಹಾಕಿದ್ದಾರಂತೆ ! ಅದೇನು ಗೊತ್ತೆ . ಯಾವುದೇ ಧಾರವಾಹಿ ಆದರೂ ಹೆಚ್ಚು ಸಮಯ ಕೇಳುತ್ತದೆ. ತಿಂಗಳಲ್ಲಿ 15 ದಿನ ಅದಕ್ಕಾಗಿ ಕೊಡಬೇಕು. ಇನ್ನುಳಿದ 15 ದಿನಗಳಲ್ಲಿ ನಾನು ಬೇರೆ ಸಿನಿಮಾ ಕೆಲಸಗಳಲ್ಲಿ ತೊಡಗಿಕೊಳ್ಳಬಹುದು. ಆ ತರಹದ ಫೆಕ್ಸಿಬಿಲಿಟಿ ಇದ್ದಾಗ ಮಾಡಬಹುದು. ನನ್ನ ಷರತ್ತುಗಳನ್ನು ಧಾರಾವಾಹಿ ತಂಡಕ್ಕೆ ಹೇಳಿದ್ದೇನೆ. ನನ್ನ ಸಿನಿಮಾ ರಿಲೀಸ್‌ಗೆ ರೆಡಿಯಾಗಿದೆ. ಮತ್ತೊಂದು ಸಿನಿಮಾ ಶುರುವಾಗಬೇಕಿದೆ ಎಂದು ತಿಳಿಸಿದ್ದೀನಿ. 

ನನ್ನ ಷರತ್ತುಗಳಿಗೆ ಅವರು ಓಕೆ ಎನ್ನಬೇಕು ನೋಡೋಣ. ನನ್ನ ಸಿನಿಮಾ ಕೆಲಸಗಳು ಇದೆ, ಅದನ್ನು ನೋಡಿಕೊಂಡು ಧಾರಾವಾಹಿಯಲ್ಲಿ ನಟಿಸಬಹುದಾ ಎಂದು ಕೇಳಿದ್ದೇನೆ. ಅದಕ್ಕೆ ಅವರು ಒಪ್ಪಿದರೆ, ನಾನು ನಟಿಸಲು ಸಿದ್ಧ. ಕೊನೆಗೆ ವಾಹಿಯವರೇ ನಿರ್ಧಾರ ತೆಗೆದುಕೊಳ್ಳಬೇಕು ನೋಡೋಣ" ಎಂದ ಹರೀಶ್ ರಾಜ್ ತಿಳಿಸಿದ್ದಾರೆ.