ಜೊತೆ ಜೊತೆಯಲಿ ಸೀರಿಯಲ್ ನ ಮ್ಯಾನೇಜರ್ ಗೆ ಕಿಡ್ನಿ ವೈಫಲ್ಯ..! ಸಂಕಷ್ಟದಲ್ಲಿ ಕುಟುಂಬ..! ಸಹಾಯಕ್ಕೆ ಪ್ರಾರ್ಥನೆ

By Infoflick Correspondent

Updated:Thursday, July 21, 2022, 20:59[IST]

ಜೊತೆ ಜೊತೆಯಲಿ ಸೀರಿಯಲ್ ನ ಮ್ಯಾನೇಜರ್ ಗೆ ಕಿಡ್ನಿ ವೈಫಲ್ಯ..! ಸಂಕಷ್ಟದಲ್ಲಿ ಕುಟುಂಬ..!  ಸಹಾಯಕ್ಕೆ ಪ್ರಾರ್ಥನೆ

ಜೀ ಕನ್ನಡದಲ್ಲಿ ಪ್ರಸಾರ ಆಗುತ್ತಿರುವ ಜೊತೆ ಜೊತೆಯಲಿ ಹಾಗೂ ಪುಟ್ಟಕ್ಕನ ಮಕ್ಕಳು ಇದೀಗ ಇನ್ನಷ್ಟು ಪ್ರೇಕ್ಷಕರನ್ನು ಸೆಳೆಯುತ್ತಾ ದಿನೇ ದಿನೇ ಹೆಚ್ಚು ಗಮನ ಸೆಳೆಯುತ್ತಿವೆ. ಜೊತೆ ಜೊತೆಯಲಿ ಸೀರಿಯಲ್ ಆರಂಭ ಆದಾಗಿನಿಂದಲೂ ಸೀರಿಯಲ್ ತಂಡ ಬೇರೆ ಬೇರೆ ರೀತಿಯ ಪ್ರಯೋಗಗಳನ್ನು ಮಾಡುತ್ತಾ ಕತೆಯಲ್ಲಿ ವಿಭಿನ್ನಾತ್ಮಕವಾಗಿ ಚಿಂತನೆ ನಡೆಸಿ ಇಂದಿಗೂ ಅದೇ ಸಕತ್ ಇಂಟ್ರೆಸ್ಟಿಂಗ್ ಕಾಪಾಡಿಕೊಂಡು ಒಂದು ಹಂತ ತಲುಪಿದೆ ಎನ್ನಬಹುದು..ಹೌದು ಇತ್ತೀಚಿಗಷ್ಟೇ ಪುಟ್ಟಕ್ಕನ ಮಕ್ಕಳು ಕೂಡ ಆರಂಭ ಆಗಿತ್ತು. ಅದು ಒಳ್ಳೆಯ ಕಥೆಯಾದಾರಿತ ಸೀರಿಯಲ್. ಹೌದು ಜೆಎಸ್ ಪ್ರೊಡಕ್ಷನ್ ಅಡಿಯಲಿ ಕೆಲಸ ಮಾಡುತ್ತಿರುವ ಪ್ರತಿಯೊಬ್ಬ ಟೆಕ್ನಿಷಿಯನ್ ಹಾಗೂ ಕಲಾವಿದರು ಈ ಎರಡು ಸೀರಿಯಲ್ ಯಶಸ್ವಿಗೆ ಕಾರಣಿ ಭೂತರಾಗಿದ್ದಾರೆ.  

ಇದೇ ಸಂಸ್ಥೆಯಲ್ಲಿ ಸತತ ಏಳು ವರ್ಷದಿಂದ ಕೆಲಸ ಮಾಡಿದ ಜೊತೆ ಜೊತೆಯಲಿ ಹಾಗೂ ಪುಟ್ಟಕ್ಕನ ಮಕ್ಕಳು ಸೀರಿಯಲ್ನ ಮ್ಯಾನೇಜರ್ ಎಂಸಿ ಪಾರ್ಥ ಅವರು ಇದೀಗ ಇದ್ದಕ್ಕಿದ್ದಂತೆ ಒಂದು ಸಮಸ್ಯೆಗೆ ಸಿಲುಕಿದ್ದಾರೆ ಎನ್ನಲಾಗಿದೆ. ಎಂಸಿ ಪಾರ್ಥ ಅವರು ಮ್ಯಾನೇಜರ್ ಆಗಿ ಸುಮಾರು 7 ವರ್ಷದಿಂದಲೂ ಜೆಎಸ್ ಪ್ರೊಡಕ್ಷನ್ ಜೊತೆ ಕಾರ್ಯ ನಿರ್ವಹಿಸಿದ್ದರು. ಹಾಗೆ  ಪಾರ್ಥ ಅವರಿಗೆ ತಂದೆ ತಾಯಿ ಒಬ್ಬ ತಂಗಿ ಎಲ್ಲರನ್ನು ಕೂಡ ತುಂಬಾ ಚೆನ್ನಾಗಿ ನೋಡಿಕೊಂಡು ಜೀವನ ಸಾಗಿಸುತ್ತಿದ್ದರು. ಈ ಕುಟುಂಬದ ಮೇಲೆ ಯಾರ ಕಣ್ಣು ಬಿತ್ತೊ ಗೊತ್ತಿಲ್ಲ, ಆದ್ರೆ ಪಾರ್ಥ ಅವರು ಅನಾರೋಗ್ಯದಿಂದ ಬಳಲುತ್ತಿದ್ದಾರೆ.

ಇದ್ದಕ್ಕಿದ್ದಂತೆ ಪಾರ್ಥ ಅವರ ಎರಡು ಕಿಡ್ನಿಗಳು ವೈಫಲ್ಯ ಕಂಡಿದ್ದು, ಲಿವರ್ ಕೂಡ ಹೋಗಿದೆಯಂತೆ..ಪಾರ್ಥ ಅವರ ತಂದೆಗೆ ವಯಸ್ಸಾಗಿದೆ, ತಾಯಿಗೆ ನಡೆಯಲಿಕ್ಕೆ ಆಗುವುದಿಲ್ಲ, ಒಬ್ಬ ತಂಗಿ ಕೂಡ ಇದ್ದು ಪ್ರಾರ್ಥ ಅವರೇ ಆ ಕುಟುಂಬಕ್ಕೆ ಎಲ್ಲಾ ಆಗಿದ್ದರು. ಚೆನ್ನಾಗಿದ್ದ ಮಗನ ಜೀವನ ಹೀಗಾಯ್ತಲ್ಲ ಎಂದು ಅವರ ಇಡೀ ಕುಟುಂಬ ಇದೀಗ ಕಣ್ಣೀರಿನಲ್ಲಿ ಕೈ ತೊಳೆಯುವಂತಾಗಿದೆ. ಹೌದು ಪಾರ್ಥ ಅವರ ಚಿಕಿತ್ಸೆಗೆ 30 ರಿಂದ 40 ಲಕ್ಷ ಹಣ ಬೇಕಾಗಿದ್ದು, ನೀವು ಕೂಡ ಇವರಿಗೆ ಸಹಾಯ ಮಾಡಬೇಕು ಎಂದು ವಿನಂತಿಕೊಳ್ಳುತ್ತಿದ್ದೇವೆ. ನೀವು ಮಾಡುವ ಸಹಾಯ ಕೇವಲ ಪಾರ್ಥ ಅವರ ಜೀವಕ್ಕೆ ಅಲ್ಲ, ಅವರ ಇಡೀ ಕುಟುಂಬಕ್ಕೆ ಮಾಡಿದಂತಾಗುತ್ತದೆ.