KGF 2 : ಜೊತೆ ಜೊತೆಯಲಿ ತಂಡ ಒಟ್ಟಿಗೆ ಸೇರಿ ಮಾಡಿರುವ ಕೆಲಸವೇನು ಗೊತ್ತಾ..?

By Infoflick Correspondent

Updated:Friday, May 13, 2022, 08:30[IST]

KGF 2 : ಜೊತೆ ಜೊತೆಯಲಿ ತಂಡ ಒಟ್ಟಿಗೆ ಸೇರಿ ಮಾಡಿರುವ ಕೆಲಸವೇನು ಗೊತ್ತಾ..?

ರಾಕಿಂಗ್ ಸ್ಟಾರ್ ಯಶ್ ಹಾಗೂ ಪ್ರಶಾಂತ್ ನೀಲ್ ಕಾಂಬಿನೇಷನ್ ನಲ್ಲಿ ಮೂಡಿಬಂದ ಕೆಜಿಎಫ್ 2 ಸಿನಿಮಾ ಬಾಕ್ಸ್ ಆಫೀಸಿನಲ್ಲಿ ಚಿಂದಿ ಉಡಾಯಿಸಿದೆ. ದಿನದಿಂದ ದಿನಕ್ಕೆ ಒಂದೊಂದೇ ದಾಖಲೆಗಳನ್ನು ಕೆಜಿಎಫ್ ಮುರಿಯುತ್ತಾ ಮುಂದೆ ಸಾಗುತ್ತಿದೆ. ಈಗಾಗಲೇ 26ನೇ ದಿನದತ್ತ ಮುನ್ನುಗ್ಗಿರುವ ಕೆಜಿಎಫ್, ಬಾಕ್ಸ್ ಆಫೀಸ್ ನಲ್ಲಿ ಕಲೆಕ್ಷನ್ ಮಾತ್ರ ಯಾವುದೇ ರೀತಿಯಲ್ಲೂ ಕಡಿಮೆ ಇಲ್ಲ. ಇದುವರೆಗೂ ಕೆಜಿಎಫ್ 2 ಬರೋಬ್ಬರಿ 1129.38 ಕೋಟಿ ಹಣವನ್ನು ಗಳಿಕೆ ಮಾಡಿದೆ. ಇತರೆ ಸಿನಿಮಾಗಳ ದಾಖಲೆಯನ್ನೂ ಕೆಜಿಎಫ್ 2 ಪುಡಿಪುಡಿ ಮಾಡಿದೆ. 

2022ರಲ್ಲಿ ಅತೀ ಹೆಚ್ಚು ಬಾಕ್ಸ್ ಆಫೀಸಿನಲ್ಲಿ ಗಳಿಕೆ ಮಾಡಿದ ಚಿತ್ರ ಎಂಬ ಹೆಗ್ಗಳಿಕೆಗೂ ಕೆಜಿಎಫ್ 2 ಕಾರಣವಾಗಿದೆ. ಭಾರತೀಯ ಸಿನಿಮಾ ರಂಗದಲ್ಲಿ ಅತೀ ಹೆಚ್ಚು ಹಣ ಗಳಿಸಿದ ಮೂರನೇ ಸಿನಿಮಾ ಕೆಜಿಎಫ್ ಎಂಬ ಖ್ಯಾತಿಯನ್ನೂ ಪಡೆದಿದೆ. ದೇಶದಲ್ಲಿ ಮಾತ್ರವಲ್ಲದೇ, ಇಡೀ ವಿಶ್ವದಲ್ಲೇ ಭರ್ಜರಿ ಪ್ರದರ್ಶನ ಕಾಣುತ್ತಿರುವ ಕೆಜಿಎಫ್ 2 ತನ್ನದೇ ಹೊಸ ದಾಖಲೆಗಳನ್ನು ಮುರಿಯುತ್ತಲೇ ಇದೆ. ಇನ್ನು ಸಿನಿಮಾದ ಕೊನೇ ಸೀನ್ ನಲ್ಲಿ ಕ್ಲೂ ಸಹ ಸಿಕ್ಕಿದೆ. ಕೆಜಿಎಫ್ ಚಾಪ್ಟರ್ 3 ಶುರುವಾಗುವ ಬಗ್ಗೆ ಮಾಹಿತಿಯನ್ನೂ ನೀಡಲಾಗಿದೆ.     

ಇನ್ನು ಈ ಸಿನಿಮಾವನ್ನು ಕೆಲ ಅಭಿಮಾನಿಗಳು ಮತ್ತೆ ಮತ್ತೆ ಥಿಯೇಟರ್ ಗೆ ಬಂದು ನೋಡುತ್ತಿದ್ದಾರೆ. ಸೆಲಬ್ರಿಟಿಗಳಿಂದ ಹಿಡಿದು ಹಳ್ಳಿಯಲ್ಲಿರುವವರೂ ಕೂಡ ಸಿನಿಮಾ ನೋಡಲು ಮುಗಿ ಬಿದ್ದಿದ್ದಾರೆ. ಇದೀಗ ಜೊತೆ ಜೊತೆಯಲಿ ಧಾರಾವಾಹಿಯ ತಂಡ ಕೂಡ ಬಿಡುವು ಮಾಡಿಕೊಂಡು, ಮಾಲ್ ಗೆ ಬಂದು ಒಟ್ಟಿಗೆ ಸಿನಿಮಾ ನೋಡಿದೆ. ಇದರ ಫೋಟೋ ಹಂಚಿಕೊಂಡಿರುವ ತಂಡ, ನಮ್ಮ ಕನ್ನಡದ ಹೆಮ್ಮೆಯ ಕೆಜಿಎಫ್ ಚಿತ್ರ ನೋಡಲು ಜೊತೆಜೊತೆಯಲಿ ತಂಡ ತೆರಳಿದ್ದೇವೆ.. ಕೆಜಿಎಫ್ ಸಿನಿಮಾ ನಮ್ಮ ಹೆಮ್ಮೆ ಎಂದು ಬರೆದುಕೊಂಡಿದ್ದಾರೆ.

ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಸಿನಿಮಾ ವಿಶ್ವಾದ್ಯಂತ ಹವಾ ಸೃಷ್ಠಿಸಿದೆ. ನೆರೆಯ ದೇಶ ಪಾಕಿಸ್ತಾನದಿಂದ ಹಿಡಿದು ಹಲವೆಡೆ ಕೆಜಿಎಫ್ ಚಿತ್ರ ರಿಲೀಸ್ ಆಗಿತ್ತು.ನಂತರ ಹಲವು ಪ್ರಯತ್ನಗಳ ಬಳಿಕ ಕೆಜಿಎಫ್ ಚಿತ್ರ ಜಪಾನ್ನಲ್ಲೂ ಸಖತ್ ಸದ್ದು ಮಾಡುತ್ತಿದೆ. ಕೇವಲ ಕನ್ನಡದಲ್ಲಿ ಮಾತ್ರವಲ್ಲದೇ ಬೇರೆ ಬೇರೆ ದೇಶ-ವಿದೇಶಗಳಲ್ಲೂ ಮತ್ತು ಬೇರೆ ಬೇರೆ ಭಾಷೆಗಳಲ್ಲೂ ಕಮಾಲ್ ಮಾಡಿರು ಕೆಜಿಎಫ್ ಗೆ ವ್ಯಾಪಕ ಪ್ರತಿಕ್ರಿಯೆ ಹಾಗೂ ಪ್ರಶಂಸೆಗಳು ವ್ಯಕ್ತವಾಗುತ್ತಿದೆ. ಸಿನಿಮಾ ನೋಡಿದ ಪ್ರತಿಯೊಬ್ಬರೂ ಸಂತಸ ಹಂಚಿಕೊಂಡಿದ್ದಾರೆ.