Anirudh : ಜೊತೆ ಜೊತೆಯಲ್ಲಿ ಧಾರಾವಾಹಿ ಅಂತ್ಯವಾಗುತ್ತಿದ್ದೀಯೆ ? ಈ ವಿಡಿಯೋ ಹೇಳುವುದೇನು ?

By Infoflick Correspondent

Updated:Monday, July 4, 2022, 08:20[IST]

Anirudh :  ಜೊತೆ ಜೊತೆಯಲ್ಲಿ ಧಾರಾವಾಹಿ  ಅಂತ್ಯವಾಗುತ್ತಿದ್ದೀಯೆ   ? ಈ ವಿಡಿಯೋ ಹೇಳುವುದೇನು ?

ಜೊತೆ ಜೊತೆಯಲಿ' ಧಾರಾವಾಹಿ ಶುರುವಾಗಿ ಹತ್ತಿರ ಹತ್ತಿರ ಮೂರು ವರ್ಷಗಳೇ ಕಳೆದಿವೆ. ಆದರೂ ಜನರು ಅತಿ ಕುತೂಹಲದಿಂದ ಧಾರಾವಾಹಿ ನೋಡುತ್ತಿದ್ದಾರೆ. ಕನ್ನಡ ಕಿರುತೆರೆಯಲ್ಲಿ ಇದೀಗ ಹಲವಾರು ಧಾರವಾಹಿಗಳು ಪ್ರಸಾರವಾಗುತ್ತಿದ್ದು, ನಂಬರ್1 ಸ್ಥಾನಕ್ಕಾಗಿ ಪೈಪೋಟಿ ನಡೆಸಿವೆ. ಇನ್ನು ಇಂಥ ಧಾರವಾಹಿಗಳಲ್ಲಿ ಜೊತೆ ಜೊತೆಯಲಿ ಧಾರಾವಾಹಿ ಕೂಡ ಒಂದು. ಧಾರಾವಾಹಿ ಆರಂಭದಿಂದಲೂ 'ನಂಬಿಕೆ' ಅನ್ನೋ ಪದದ ಅರ್ಥವನ್ನು ತುಂಬಾನೇ ಚೆನ್ನಾಗಿ ನಿಭಾಯಿಸಿಕೊಂಡು ಬಂದಿದ್ದಾರೆ ಆರ್ಯವರ್ಧನ್ ಕಥೆಯ ದಾರಿ ವಿಭಿನ್ನವಾಗಿ ಸಾಗುತ್ತಿದೆ. ಆದರೆ ಈಗ ಇದ್ದಕ್ಕಿದ್ದ ಹಾಗೇ ಧಾರಾವಾಹಿ ನಿಂತು ಹೋಗುತ್ತಾ ಎಂಬ ಅನುಮಾನ ಮೂಡಿದೆ.  

ಸಿರಿಮನೆ ಸದ್ಯ ತಾಯಿಯಾಗುತ್ತಿದ್ದಾಳೆ. ಈ ವಿಚಾರ ಮನೆಯವರಿಗೆ ಗೊತ್ತಾದರೆ ಅದಕ್ಕಿಂತ ಖುಷಿ ಮತ್ತೊಂದಿಲ್ಲ. ಆದರೆ ಅನು ಗೊಂದಲದಲ್ಲಿದ್ದಾಳೆ. ಮನೆಯವರಿಗೆ ಹೇಳುವುದೋ ಬಿಡುವುದೋ ತಿಳಿಯುತ್ತಿಲ್ಲ. ಯಾಕೆಂದರೆ ಒಂದು ಕಡೆ ತನ್ನ ಸೇಡನ್ನು ತೀರಿಸಿಕೊಳ್ಳಲು ಎಲ್ಲಾ ಕಡೆಯ ಹಾದಿಯಿಂದಲೂ ಯತ್ನಿಸುತ್ತಿದ್ದಾಳೆ. ಹೀಗಾಗಿ ಮನೆಯವರಿಗೆ ಇನ್ನು ಗರ್ಭಿಣಿ ಎಂಬ ವಿಚಾರವನ್ನು ತಿಳಿಸಿಲ್ಲ. ಆದರೆ ಮಗು ಹುಟ್ಟಿದ ಮೇಲೆ ಧಾರಾವಾಹಿಯ ಕಥೆ ಸಾಗುವುದಿಲ್ಲವೇನೋ ಎಂಬ ಅನುಮಾನ ಮೂಡಿದೆ. ಅನುಸಿರಿಮನೆಗೆ ಮಗುವಾದ ಮೇಲೆ ಧಾರಾವಾಹಿ ನಿಂತು ಹೋಗುತ್ತಾ ಎಂಬ ಪ್ರಶ್ನೆಗಳು ಮೂಡಿವೆ. ಅದಕ್ಕೆಲ್ಲಾ ಕಾರಣ ಆ ಒಂದು ವಿಡಿಯೋ. 

ಜೊತೆ ಜೊತೆಯಲಿ' ಧಾರಾವಾಹಿ ಮುಗಿದು ಹೋಗುತ್ತಾ ಎಂಬುದಕ್ಕೆ ಈ ಪಾರ್ಟಿಯೇ ಕಾರಣವಾಗಿದೆ. ಗೆಟ್ ಟಿಗೆದರ್ ಪಾರ್ಟಿ ಮಾಡುವ ವಿಡಿಯೋ ವೈರಲ್ ಆಗಿದೆ.  ವಿಡಿಯೋದಲ್ಲಿ 'ಜೊತೆ ಜೊತೆಯಲಿ' ಧಾರಾವಾಹಿಯ ಎಲ್ಲಾ ನಟ-ನಟಿಯರು ಸೇರಿಕೊಂಡು  ಎಂಜಾಯ್ ಮಾಡಿದ್ದಾರೆ. ಕೇಕ್ ಕತ್ತರಿಸಿ, ಡ್ಯಾನ್ಸ್ ಮಾಡಿ, ಅಡ್ವೆಂಚರ್ ಮಾಡುತ್ತಾ ಇಡೀ ಟೀಂ ಖುಷ್ ಖುಷಿಯಾಗಿ‌ ಕಳೆದಿದ್ದಾರೆ. ಈ ವಿಡಿಯೋವನ್ನು ಮೇಘಾ ಶೆಟ್ಟಿ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಎಲ್ಲರೂ ಒಟ್ಟಿಗೆ ಸೇರಿ ಆಚರಿಸಿರುವ ಪಾರ್ಟಿಗೆ ಗೆಟ್ ಟುಗೆದರ್ ಎಂದು ಕ್ಯಾಪ್ಶನ್ ಕೊಟ್ಟಿದ್ದಾರೆ. ಇದರಿಂದಾಗಿ ಧಾರಾವಾಹಿ ನಿಂತು ಹೋಗುತ್ತಾ ಎಂಬ ಅನುಮಾನ ಮೂಡಿದೆ.