ಜೂನಿಯರ್ ಪುನೀತ್ ರಾಜ್ ಕುಮಾರ್ ಅವರನ್ನು ನೋಡಿದ ರಂಗಾಯಣ ರಘು ಮಾಡಿದ್ದೇನು ಗೊತ್ತಾ..?

By Infoflick Correspondent

Updated:Tuesday, August 2, 2022, 09:04[IST]

ಜೂನಿಯರ್ ಪುನೀತ್ ರಾಜ್ ಕುಮಾರ್ ಅವರನ್ನು ನೋಡಿದ ರಂಗಾಯಣ ರಘು ಮಾಡಿದ್ದೇನು ಗೊತ್ತಾ..?

ಪುನೀತ್ ರಾಜ್ ಕುಮಾರ್ ಅವರ ಬಗ್ಗೆ ಎಷ್ಟು ಹೇಳಿದರೂ ಕಡಿಮೆಯೇ. ಅಪ್ಪು ಅವರ ನಡೆ-ನಡಿ, ಹಾವಾ-ಭಾವಾ ಯಾವುದರ ಬಗ್ಗೆ ಮಾಡತನಾಡಬೇಕೆಂದರೂ ಪದಗಳಿಲ್ಲ. ಪುನೀತ್ ರಾಜ್ ಕುಮಾರ್ ಅಂತಹವರು ಜಗತ್ತಿಗೆ ಒಬ್ಬನೇ ಎಂದರೂ ತಪ್ಪಾಗೋದಿಲ್ಲ. ಇದೆಲ್ಲಾ ಯಾಕೆ ಹೇಳುತ್ತಿದ್ದೀನಿ ಅಂತ ನಿಮಗೆ ಹೇಳಬೇಕಾಗೇನು ಇಲ್ಲ. ಯಾಕೆಂದರೆ ಈಗಾಗಲೇ, ಅಪ್ಪು ಅವರ ಬಗ್ಗೆ ಎಲ್ಲರೂ ಸಾಕಷ್ಟು ವಿಚಾರಗಳನ್ನು ತಿಳಿದುಕೊಂಡಿದ್ದೀರಾ. ಆದರೂ, ಅಪ್ಪು ಅವರ ಒಂದಲ್ಲ ಒಂದು ವಿಚಾರವನ್ನು ಪ್ರತಿಯೊಬ್ಬರು ತಮ್ಮ ಅನುಭವಗಳನ್ನು ಹೇಳಿಕೊಳ್ಳುವುದನ್ನು ನಿಲ್ಲಿಸಿಲ್ಲ.

ಪುನೀತ್ ರಾಜ್ ಕುಮಾರ್ ಉಸಿರು ಚೆಲ್ಲಿ 7 ತಿಂಗಳು ಕಳೆದರೂ ಕೂಡ ಅಪ್ಪು ನಮ್ಮನ್ನಗಲಿದ್ದಾರೆ ಎಂದು ಯಾರೊಬ್ಬರೂ ಮನಃಪೂರ್ವಕವಾಗಿ ಒಪ್ಪಲು ತಯಾರಿಲ್ಲ. ಎಲ್ಲೋ ಹೋಗಿದ್ದಾರೆ. ಬರುತ್ತಾರೆ. ಅವರಿಗೆ ಹುಷಾರಿಲ್ಲ.. ಚೇತರಿಸಿಕೊಳ್ಳುತ್ತಾರೆ.. ಹೀಗೆ ಕೆಲ ಅಭಿಮಾನಿಗಳು ತಮಗೆ ತಾವೇ ತಿಳಿದುಕೊಂಡು ಸಮಾಧಾನ ಮಾಡಿಕೊಳ್ಳುತ್ತಿದ್ದಾರೆ. ಇಡೀ ಚಿತ್ರರಂಗವೇ ಅಪ್ಪು ಅವರನ್ನು ಕಳೆದುಕೊಂಡ ದುಃಖದಲ್ಲಿದೆ. ರಾಜ್ ಕುಮಾರ್ ಕುಟುಂಬದಲ್ಲಿ ಪುನೀತ್ ಸಾವು ಸಹಿಸಲಾರದ ಸಂಕಟವನ್ನುಂಟು ಮಾಡಿದೆ. ಅಶ್ವಿನಿ ಅವರಂತೂ ಪ್ರೀತಿಯ ಗಂಡನನ್ನು ಕಳೆದುಕೊಂಡು ಅನಾಥ ಭಾವದಲ್ಲಿ ಜೀವನ ತಳ್ಳುತ್ತಿದ್ದಾರೆ. 

2021 ರ ಅಕ್ಟೋಬರ್ 29ರಂದು ಶುಕ್ರವಾರ ಬೆಳಗ್ಗೆ 11 ಗಂಟೆ ಸುಮಾರಿಗೆ ಪುನೀತ್ ರಾಜ್ ಕುಮಾರ್ ಅವರಿಗೆ ವರ್ಕೌಟ್ ಮಾಡುವಾಗ ಹೃದಯಾಘಾತ ಸಂಭವಿಸಿತ್ತು. ಅವರು ರಮಣಶ್ರೀ ಆಸ್ಪತ್ರೆಗೆ ನಡೆದುಕೊಂಡೇ ಹೋಗಿದ್ದರು. ಅಲ್ಲಿಂದ ವಿಕ್ರಮ್ ಆಸ್ಪತ್ರೆಗೆ ತೆರಳಿ, ಚಿಕಿತ್ಸೆ ಪಡೆಯಲು ಮುಂದಾದರು. ಆದರೆ ವಿಕ್ರಮ್ ಆಸ್ಪತ್ರೆಗೆ ಪುನೀತ್ ಅವರು ಹೋಗುವಷ್ಟರಲ್ಲೇ ಕಾರ್ಡಿಯಾಕ್ ಅರೆಸ್ಟ್ ಆಗಿತ್ತು. ಅವರ ಆರೋಗ್ಯ ಸ್ಥಿತಿ ಚಿಂತಾಜನಕವಾಗಿತ್ತು. ಪುನೀತ್ ಅವರನ್ನು ಉಳಿಸಿಕೊಳ್ಳಲು ವಿಕ್ರಮ್ ಆಸ್ಪತ್ರೆ ವೈದ್ಯರು ಶಕ್ತಿ ಮೀರಿ ಪ್ರಯತ್ನಿಸಿದ್ದರು. ಆದರೆ ಚಿಕಿತ್ಸೆ ಫಲಿಸದೇ, ಪುನೀತ್ ವಿಕ್ರಮ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳಿದರು. ಅವರ ಪಾರ್ಥಿವ ಶರೀರದ ಅಂತಿಮ ದರ್ಶನವನ್ನು ಪಡೆಯಲು ಲಕ್ಷಾಂತರ ಜನ ಅಭಿಮಾನಿಗಳ ಜನಸಾಗರವೇ ಆಗಮಿಸಿತ್ತು.

ಹಾಸ್ಯ ನಟ ರಂಗಾಯಣ ರಘು ಅವರು ಪುನೀತ್ ರಾಜ್ ಕುಮಾರ್ ಅವರು ಹಲವು ಚಿತ್ರಗಳಲ್ಲಿ ಒಟ್ಟಿಗೆ ನಟಿಸಿದ್ದಾರೆ. ಇನ್ನು ಇತ್ತೀಚೆಗೆ ಕಾರ್ಯಕ್ರಮ ಒಂದಕ್ಕೆ ತೆರಳಿದ್ದರು. ಅಲ್ಲಿ ಜೂನಿಯರ್ ಪುನೀತ್ ರಾಜ್ ಕುಮಾರ್ ಅವರು ಬಂದಿದ್ದರು. ಅವರನ್ನು ನೋಡಿದ ರಂಗಾಯಣ ರಘು ಅವರು, ಸೀದಾ ಹೋಗೆ ಕೈ ಕುಲುಕಿಸಿ ತಬ್ಬಿಕೊಂಡಿದ್ದಾರೆ. ನೋಡಲು ಅಪ್ಪುವಿನಂತೆ ಇರುವುದಕ್ಕೆ ಖುಷಿಪಟ್ಟಿದ್ದಾರೆ. ನೋಡಿ.. ಸೆಲಬ್ರಿಟಿಗಳೇ ಹೀಗೆ ಇರಬೇಕಾದರೆ ಇನ್ನು ಸಾಮಾನ್ಯ ಜನರ ಕಥೆ ಹೇಗಿರಬೇಡ ಅಲ್ವಾ..?