ಅವಕಾಶಗಳಿಲ್ಲದೆ ಬೀದಿ ಬದಿ ಸೋಪು ಮಾರ್ತಿದ್ದಾರೆ ನಟಿ ಲಕ್ಷ್ಮಿ ಮಗಳು ಐಶ್ವರ್ಯ ಭಾಸ್ಕರನ್

By Infoflick Correspondent

Updated:Saturday, June 18, 2022, 15:50[IST]

ಅವಕಾಶಗಳಿಲ್ಲದೆ ಬೀದಿ ಬದಿ ಸೋಪು ಮಾರ್ತಿದ್ದಾರೆ ನಟಿ ಲಕ್ಷ್ಮಿ ಮಗಳು ಐಶ್ವರ್ಯ ಭಾಸ್ಕರನ್

ಚಿತ್ರರಂಗ ಅಂದ್ರೆ ಹಾಗೇನೆ ಸ್ನೇಹಿತರೆ, ಯಾವಾಗ ಯಾವ ಕಲಾವಿದರ ಜೀವನದಲ್ಲಿ ಹೇಗೆ ದೊಡ್ಡದಾದ ಬಿರುಗಾಳಿ ಏಳುತ್ತದೆ ಎಂದು ನಾವು ಹೇಳಲಿಕ್ಕಾಗದು. ಸ್ಟಾರ್ ನಟ ನಟಿಯರು ಕೂಡ ನೋಡನೋಡುತ್ತಿದ್ದಂತೆಯೇ ವರ್ಷಗಳ ಕಳೆದ ಮೇಲೆ ಅವರ ಜೀವನ ಮಾಡುವ ವೃತ್ತಿ ಕೆಲವರದ್ದು ಬೇರೆ ರೀತಿಯಲ್ಲಿಯೇ ಇರುತ್ತದೆ. ಹೌದು ಒಂದಾನೊಂದು ಕಾಲದಲ್ಲಿ ಸ್ಟಾರ್ ನಟರ ಜೊತೆ ತೆರೆ ಹಂಚಿಕೊಂಡಿದ್ದ ಮತ್ತು ಟಾಪ್ ನಟಿಯಾಗಿ ಮಿಂಚಿದ  ನಟಿ ಐಶ್ವರ್ಯ ಅಲಿಯಾಸ್ ಐಶ್ವರ್ಯ ಭಾಸ್ಕರ್ ಅವರು ಇಂದು ಬೀದಿಬದಿಯಲ್ಲಿ ಸಾಬೂನು ಮಾರಿ ಜೀವನ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ. ಕನ್ನಡದಲ್ಲಿ ಪಾಂಡವರು, ಒಗ್ಗರಣೆ ಚಿತ್ರಗಳಲ್ಲಿ ಅಭಿನಯ ಮಾಡಿದ್ದ ಈ ನಟಿ ಐಶ್ವರ್ಯಾ ಅವರು ಇದೀಗ ತುಂಬಾ ಕಷ್ಟದಲ್ಲಿದ್ದಾರೆ.   

ಜೊತೆಗೆ ಸ್ಟಾರ್ ಗಿರಿ ಎನ್ನುವುದು ಸದಾ ಒಂದೇ ರೀತಿ ಇರುವುದಿಲ್ಲ, ಯಾವಾಗ ಬೇಕಾದರೂ ಏನು ಬೇಕಾದರೂ ಆಗಬಹುದು ಎಂದು ನೋವನ್ನು ವ್ಯಕ್ತಪಡಿಸಿದ್ದಾರೆ ನಟಿ ಐಶ್ವರ್ಯ. ಹೌದು ಇವರು ಮೂಲತಃ ಕೆರಳದವ್ರು ಹಾಗೆ ಮಲಯಾಳಂ ಮೂಲದ ನಟಿಯಾಗಿರುವ ಈ ಐಶ್ವರ್ಯ ಅವರು ಹೆಚ್ಚು ಮಲಯಾಳಂ ಮತ್ತು ತಮಿಳು ಚಿತ್ರಗಳಲ್ಲಿ ಅಭಿನಯ ಮಾಡಿದ್ದಾರೆ. ಇವರ ಮಲಯಾಳಂ ಚಿತ್ರಗಳು ಬಟರ್ಫ್ಲೈ, ನರಸಿಂಹ, ಮತ್ತು ಪ್ರಜಾ ಎಂದು. ಪ್ರಜಾ ಚಿತ್ರ ಇವರಿಗೆ ದೊಡ್ಡ ಯಶಸ್ಸು ತಂದುಕೊಟ್ಟಿತ್ತು. ನಟ ಮೋಹನ್ ಲಾಲ್ ಅವರ ಜೊತೆಯಾಗಿ ತೆರೆ ಹಂಚಿಕೊಂಡಿದ್ದಾರೆ. ಹೌದು ನಟಿ ಐಶ್ವರ್ಯ ಇತ್ತೀಚಿಗೆ ಸಂದರ್ಶನದಲ್ಲಿ ಅವರ ನೋವನ್ನು ತೋಡಿಕೊಂಡಿದ್ದಾರೆ. ನಾನು ರಸ್ತೆಬದಿಯಲ್ಲಿ ಇದೀಗ ಸಾಬೂನು ಮಾರಿಯೇ ಜೀವನ ಮಾಡುತ್ತಿದ್ದೇನೆ.

ನನ್ನ ಮದುವೆಯಾಗಿದ್ದ ಪತಿ ನನಗೆ ವಿಚ್ಛೇದನ ಕೊಟ್ಟು ಇನ್ನೊಂದು ಮದುವೆ ಆದ. ಈಗಲೂ ಆ ಪತಿ ಮತ್ತು ಆತನ ಎರಡನೇ ಹೆಂಡತಿ ಜೊತೆಗೆ ನನ್ನ ಒಡನಾಟವಿದೆ. ನಾನು ಈ ಸಿನಿ ಕ್ಷೇತ್ರದಲ್ಲಿ ಟಾಪಲ್ಲಿ ಇದ್ದಿದ್ದೆ ಕೇವಲ ಮೂರು ವರ್ಷ. ದುಡಿದ ಹಣವನ್ನೆಲ್ಲ ಮಗಳ ಮದುವೆಗೆಂದು ಖರ್ಚು ಮಾಡಿದ್ದೇನೆ. ನಾನೇನೋ ಕುಡಿದು ಹಾಳು ಮಾಡಿಲ್ಲ. ಆದರೆ ನನಗೆ ಸಿನಿಮಾ ಅವಕಾಶ ಬರಬರುತ್ತಾ ಕಡಿಮೆಯಾಗಿದ್ದು, ನಂತರ ಕಿರುತೆರೆಯಲ್ಲೂ ಸಹ ಅವಕಾಶ ಕಡಿಮೆಯಾದವು. ಹಾಗಾಗಿ ಇದೀಗ ನಾನು ಒಬ್ಬಂಟಿಯಾಗಿದ್ದೇನೆ, ನನಗೆ ಜೀವನ ಮಾಡಲು ಈ ಸಾಬೂನು ವ್ಯಾಪಾರ ಸಾಕು ಎಂದು ನೋವನ್ನು ವ್ಯಕ್ತಪಡಿಸಿದ್ದಾರೆ. ಇನ್ನು ಮೇಲಾದರೂ ನನಗೆ ಅಭಿನಯ ಮಾಡಲು ಅವಕಾಶ ಮಾಡಿಕೊಡುತ್ತಾರ ಎಂದು ಕಾದು ನೋಡಬೇಕು ಎಂದು ಸಂದರ್ಶನದಲ್ಲಿ ಹೇಳಿದ್ದಾರೆ. ಮಾಹಿತಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ. ನಟಿ ಐಶ್ವರ್ಯಾ ಅವರ ಕಣ್ಣೀರಿನ ಈ ಕಥೆ ಬಗ್ಗೆ ನಿಮ್ಮ ಅನಿಸಿಕೆ ಏನೆಂದು ನಮಗೆ ತಿಳಿಸಿ ಧನ್ಯವಾದಗಳು....