ಕೆಜಿಎಫ್ ಚಾಪ್ಟರ್ 3 ಚಿತ್ರೀಕರಣ ಆರಂಭವಾಗೋದು ಯಾವಾಗ ಗೊತ್ತಾ..?

By Infoflick Correspondent

Updated:Thursday, April 14, 2022, 15:12[IST]

ಕೆಜಿಎಫ್ ಚಾಪ್ಟರ್ 3 ಚಿತ್ರೀಕರಣ ಆರಂಭವಾಗೋದು ಯಾವಾಗ ಗೊತ್ತಾ..?

ಎರೆಡು ವರ್ಷಗಳಿಂದ ಕಾದು ಕುಳಿತಿದ್ದ ಕೆಜಿಎಫ್ ಅಭಿಮಾನಿಗಳಿಗೆ ಇಂದು ಹಬ್ಬವೋ ಹಬ್ಬ. ಬಹು ನಿರೀಕ್ಷಿತ ಚಿತ್ರ ಕೆಜಿಎಫ್ 2 ಈಗಾಗಲೇ ವಿಶ್ವಾದ್ಯಂತ ಭಾರಿ ಸದ್ದು ಮಾಡುತ್ತಿದೆ. ಚಿತ್ರ ನೋಡಿದ ಅಭಿಮಾನಿಗಳು ರಾಕಿಂಗ್ ಸ್ಟಾರ್ ಯಶ್ ಅಭಿನಯವನ್ನು ಹಾಡಿ ಹೊಗಳಿದ್ದಾರೆ. ಪ್ಯಾನ್ ಇಂಡಿಯಾ ಸಿನಿಮಾ ಇದಾಗಿದ್ದು ಕನ್ನಡ, ತೆಲುಗು, ತಮಿಳು, ಮಳಯಾಳಂ ಹಾಗೂ ಹಿಂದಿ ಭಾಷೆಯಲ್ಲಿ ಚಿತ್ರ ರಿಲೀಸ್ ಆಗಿದೆ. ಭಾರತ ಸೇರಿದಂತೆ 75 ದೇಶಗಳಲ್ಲಿ ಕೆಜಿಎಫ್ 2 ಚಿತ್ರ ತೆರೆ ಮೇಲೆ ಅಬ್ಬರಿಸಿ ಬೊಬ್ಬಿರಿಯುತ್ತಿದೆ. 

ಕೆಜಿಎಫ್ 2 ಚಿತ್ರ ರಿಲೀಸ್ ಗೂ ಮುನ್ನವೇ ಟ್ರೈಲರ್, ತೂಫಾನ್, ಸುಲ್ತಾನ್ ಹಾಗೂ ಗಗನ ನೀ ಹಾಡುಗಳು ಯೂಟ್ಯೂಬ್ ನಲ್ಲಿ ಕಮಾಲ್ ಮಾಡಿದ್ದವು. ಹೊಂಬಾಳೆ ಫಿಲ್ಮ್ಸ್ ನ ವಿಜಯ್ ಕಿರಗಂದೂರು ಚಿತ್ರವನ್ನು ನಿರ್ಮಿಸಿದ್ದು, ಪ್ರಶಾಂತ್ ನೀಲ್ ನಿರ್ದೇಶಿಸಿದ್ದಾರೆ. ಕೆಜಿಎಫ್ 2 ಚಿತ್ರ ಇಂದು ವಿಶ್ವಾದ್ಯಂತ ಧೂಳೆಬ್ಬಿಸಿದೆ. ಕೆಜಿಎಫ್ ಮೊದಲ ಅಧ್ಯಾಯ ಹಾಗೂ ಎರಡನೇ ಅಧ್ಯಾಯ ಅಧ್ಭುತವಾಗಿ ಮೂಡಿ ಬಂದಿದೆ. ಚಿತ್ರ ನೋಡಿದ ಅಭಿಮಾನಿಗಳು ಮಾಧ್ಯಮದ ಎದುರು ತಮ್ಮ ಅಭಿಪ್ರಾಯಗಳನ್ನು ತಿಳಿಸಿದ್ದು, ಬೇಡಿಕೆಯೊಂದನ್ನು ಇಟ್ಟಿದೆ.  

ಸಿನಿಮಾ ನೋಡಿರುವ ಅಭಿಮಾನಿಗಳು ಫುಲ್ ಫಿದಾ ಆಗಿದ್ದಾರೆ. ಪ್ರಶಾಂತ್ ನೀಲ್ ಹಾಗೂ ಯಶ್ ಕಾಂಬಿನೇಷನ್ ನಲ್ಲಿ ಮೂಡಿ ಬಂದ ಚಿತ್ರವನ್ನು ಮೆಚ್ಚಿಕೊಂಡು ಈಗ ಕೆಜಿಎಫ್ ಚಾಪ್ಟರ್ 3 ಬೇಕೇ ಬೇಕು ಎಂದು ಹೇಳುತ್ತಿದ್ದಾರೆ. ಟ್ವಿಟರ್ ನಲ್ಲೂ ಈ ವಿಚಾರ ಟ್ರೆಂಡ್ ಆಗಿದೆ. ಕೆಜಿಎಫ್ 2 ಚಿತ್ರದ ಕೊನೆಯಲ್ಲಿ ಮೂರನೇ ಭಾಗದ ಬಗ್ಗೆ ಸುಳಿವು ನೀಡಲಾಗಿದೆ. ಮಾಧ್ಯಮಗಳಿಗೂ ಮಾತನಾಡಿದ ಅಭಿಮಾನಿಗಳು, ಪ್ರಶಾಂತ್ ನೀಲ್ ಹಾಗೂ ಯಶ್ ಕಾಂಬಿನೇಷನ್ ನಲ್ಲಿ ಕೆಜಿಎಫ್ ಚಾಪ್ಟರ್ 3 ಬೇಕೆ ಬೇಕು ಎಂದು ಹೇಳಿದ್ದಾರೆ.