Prashant Neel : ಪ್ರಶಾಂತ್ ನೀಲ್ ಅವರ ಜೂ.ಎನ್ ಟಿಆರ್ ಜೊತೆಗಿನ ಚಿತ್ರಕ್ಕೆ ತಮಿಳಿನ ಖ್ಯಾತ ನಟ ವಿಲನ್ ಆಗಿ ಎಂಟ್ರಿ : ಯಾರದು ನೋಡಿ ?

By Infoflick Correspondent

Updated:Monday, May 23, 2022, 14:04[IST]

Prashant Neel :  ಪ್ರಶಾಂತ್ ನೀಲ್  ಅವರ  ಜೂ.ಎನ್ ಟಿಆರ್ ಜೊತೆಗಿನ ಚಿತ್ರಕ್ಕೆ ತಮಿಳಿನ ಖ್ಯಾತ ನಟ ವಿಲನ್ ಆಗಿ ಎಂಟ್ರಿ : ಯಾರದು ನೋಡಿ ?

ಕೆಜಿಎಫ್ ಖ್ಯಾತಿಯ ನಿರ್ದೇಶಕ ಪ್ರಶಾಂತ್ ನೀಲ್ ಈಗ ಪ್ರಭಾಸ್ ಜೊತೆಗಿನ ಸಲಾರ್ ಚಿತ್ರದಲ್ಲಿ ಫುಲ್ ಬ್ಯುಸಿಯಾಗಿದ್ದಾರೆ. ಅಲ್ಲದೇ, ಸಲಾರ್ ಬಳಿಕ ಜ್ಯೂನಿಯರ್ ಎನ್ ಟಿಆರ್ ಅವರ ಚಿತ್ರವನ್ನು ಪ್ರಶಾಂತ್ ನೀಲ್ ನಿರ್ದೇಶಿಸುತ್ತಿದ್ದಾರೆ. ಇದರೊಂದಿಗೆ ಪ್ರಶಾಂತ್ ನೀಲ್ ಮತ್ತೊಂದು ವಿಚಾರವನ್ನು ಅನೌನ್ಸ್ ಮಾಡಿದ್ದಾರೆ. ಪ್ರಶಾಂತ್ ನೀಲ್ ಅವರ ಸಿನಿಮಾಗಳಲ್ಲಿ ಹೀರೋಗಳಿಗೆ ಎಷ್ಟು ಪ್ರಾಮುಖ್ಯತೆಯನ್ನು ಕೊಡುತ್ತಾರೋ ಅಷ್ಟೇ ಪ್ರಾಮುಖ್ಯತೆಯನ್ನು ವಿಲನ್ ಗಳಿಗೂ ಕೊಡುತ್ತಾರೆ. ಅದಕ್ಕೆ ಬೆಸ್ಟ್ ಉದಾಹರಣೆ, ಸಂಜಯ್ ದತ್. ಇನ್ನು ಇದೀಗ ಬಹುಭಾಷಾ ನಟರೊಬ್ಬರನ್ನು ವಿಲನ್ ಮಾಡಲು ಪ್ರಶಾಂತ್ ನೀಲ್ ಮುಂದಾಗಿದ್ದಾರೆ.     

ಜೂ.ಎನ್ ಟಿಆರ್ ಅವರ ಚಿತ್ರಕ್ಕೆ NTR31 ಎಂದು ಹೆಸರಿಡಲಾಗಿದೆ ಎನ್ನಲಾಗಿದೆ. ಯಾಕೆಂದರೆ, ಇದು ಜೂ.ಎನ್ ಟಿಆರ್ ಅವರ 31ನೇ ಚಿತ್ರ ಇದಾಗಿದೆ. ಈ ಚಿತ್ರದ ಪೋಸ್ಟರ್ ಅನ್ನು ಮೈತ್ರಿ ಮೂವಿಸ್ ಟ್ವಿಟರ್ ನಲ್ಲಿ ಹಂಚಿಕೊಂಡಿದೆ. ಇದಕ್ಕೆ ಪವರ್ ಫುಲ್ ಕ್ಯಾಪ್ಶನ್ ಅನ್ನು ಕೂಡ ನೀಡಿದ್ದಾರೆ. ಅದೇನೆಂದರೆ. ಮಣ್ಣಿನಲ್ಲಿ ಬೆರೆತ ರಕ್ತ ನೆನಪಿನಲ್ಲಿರುತ್ತದೆ. ಅವನ ಮಣ್ಣೇ ಅವನ ಆಳ್ವಿಕೆ. ಆದರೆ ರಕ್ತ ಅವನದ್ದಲ್ಲ ಎಂದು ಬರೆಯಲಾಗಿದೆ. ಚಿತ್ರದ ಶೂಟಿಂಗ್ 2023ರಲ್ಲಿ ಆರಂಭಗೊಳ್ಳಲಿದೆ ಎಂದು ತಿಳಿದು ಬಂದಿದೆ. ಯಾಕೆಂದರೆ ಸದ್ಯ ಪ್ರಶಾಂತ್ ನೀಲ್ ಅವರು ಸಲಾರ್ ಚಿತ್ರದಲ್ಲಿ ಬ್ಯುಸಿಯಾಗಿದ್ದರೆ, ಜೂ.ಎನ್ ಟಿಆರ್ ಅವರು ನಿರ್ದೇಶಕ ಕೊರಟಾಲ ಶಿವ ಅವರೊಂದಿಗೆ 30ನೇ ಸಿನಿಮಾದ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ.   

 

Prashant Neel :  ಪ್ರಶಾಂತ್ ನೀಲ್  ಅವರ  ಜೂ.ಎನ್ ಟಿಆರ್ ಜೊತೆಗಿನ ಚಿತ್ರಕ್ಕೆ ತಮಿಳಿನ ಖ್ಯಾತ ನಟ ವಿಲನ್ ಆಗಿ ಎಂಟ್ರಿ : ಯಾರದು ನೋಡಿ ?

ಅದು ಬೇರೆ ಯಾರೂ ಅಲ್ಲ, ಕಮಲ್ ಹಾಸನ್. ಹೌದು ಜೂ.ಎನ್ ಟಿಆರ್ ಅವರ ನಟನೆಯ ಚಿತ್ರದಲ್ಲಿ  ಕಮಲ್ ಹಾಸನ್  ನಟಿಸಲಿದ್ದಾರೆ ಎಂಬ ಸುದ್ದಿಯೊಂದು ಎಲ್ಲಡೆ ಹರಿದಾಡುತ್ತಿದೆ. ಆದರೆ ಈ ಕುರಿತು ಚಿತ್ರತಂಡ ಇನ್ನೂ ಯಾವುದೇ ಅಧಿಕೃತ ಮಾಹಿತಿಯನ್ನು ನೀಡಿಲ್ಲ. ಆದರೆ ಕಮಲ್ ಹಾಸನ್ ವಿಲನ್ ಪಾತ್ರಕ್ಕೆ ಒಪ್ಪಿಕೊಂಡಿದ್ದಾರೆ ಎಂಬ ಸುದ್ದಿ ಇಡೀ ಚಿತ್ರರಂಗದಲ್ಲಿ ಸಂಚಲನ ಮೂಡಿಸಿದೆ.