ನಡು ಬಳುಕಿಸಿದ ಕಮಲಿ ಡ್ಯಾನ್ಸ್ ನೋಡಿದ ಅಭಿಮಾನಿಗಳು ಫಿದಾ

By Infoflick Correspondent

Updated:Tuesday, April 19, 2022, 13:27[IST]

ನಡು ಬಳುಕಿಸಿದ ಕಮಲಿ ಡ್ಯಾನ್ಸ್ ನೋಡಿದ ಅಭಿಮಾನಿಗಳು ಫಿದಾ

ಕಳೆದ ಮೂರು ವರ್ಷಗಳಿಂದ ಕಮಲಿ ಧಾರಾವಾಹಿ ಅದ್ಭುತವಾಗಿ ಮೂಡಿ ಬರುತ್ತಿದೆ. ಈ ಧಾರಾವಾಹಿಯಲ್ಲಿ ಕಮಲಿ ಅವತಾರದಲ್ಲಿ ಪ್ರೇಕ್ಷಕರನ್ನು ರಂಜಿಸುತ್ತಿರುವ ಅಮೂಲ್ಯ ಓಂಕಾರ್ ಗೌಡ, ಈಗ ತೆಲುಗಿನಲ್ಲೂ ಬಣ್ಣ ಹಚ್ಚಿದ್ದಾರೆ. ಮಾರ್ಡನ್ ಲುಕ್ ನಲ್ಲೂ, ಹಳ್ಳಿ ಹುಡುಗಿಯಾಗಿಯೂ ಮುದ್ದಾಗಿ ಕಾಣು್ತಾರೆ ಅಮೂಲ್ಯ ಓಂಕಾರ್. ಡಿಪ್ಲೋಮಾ ಓದಿರುವ ಅಮೂಲ್ಯ ಮೂಲತಃ ಮೈಸೂರಿನವರು. ಕಿರುತೆರೆಯಲ್ಲಿ ಹಳ್ಳಿ ಹುಡುಗಿಯಂತೆ ನಟಿಸುವ ಅಮೂಲ್ಯ ನಿಜ ಜೀವನದಲ್ಲಿ ಮಾರ್ಡನ್ ಬಟ್ಟೆಗಳನ್ನೂ ಧರಿಸುತ್ತಾರೆ. ಅಮೂಲ್ಯ ಅವರ ಹಾಟ್ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಅಭಿಮಾನಿಗಳು ಫಿದಾ ಆಗಿದ್ದಾರೆ. 

2014 ರಲ್ಲಿ ಅಮೂಲ್ಯ ಓಂಕಾರ್ ಗೌಡ ಅವರು ಸ್ವಾತಿಮುತ್ತು ಧಾರಾವಾಹಿ ಮೂಲಕ ಕಿರುತೆರೆಗೆ ಪಾದಾರ್ಪಣೆ ಮಾಡಿದರು. ನಂತರ 2016 ರಲ್ಲಿ ಅರಮನೆ ಧಾರಾವಾಹಿಯಲ್ಲಿ ನಟಿಸಿದರು. ಬಳಿಕ ಅಮೂಲ್ಯ ಅವರಿಗೆ ಪುನರ್ ವಿವಾಹ ಎಂಬ ಧಾರಾವಾಹಿಯಲ್ಲೂ ಅವಕಾಶ ಸಿಕ್ಕಿತು. ನಂತರ ಕಮಲಿ ಧಾರಾವಾಹಿಯಲ್ಲಿ ನಾಯಕಿಯಾಗಿ ಕಾಣಿಸಿಕೊಂಡರು. ಕಳೆದ 7-8 ವರ್ಷದಿಂದ ಕಿರುತೆರೆಯಲ್ಲೇ ನಟಿಸುತ್ತಿರುವ ಅಮೂಲ್ಯ ಓಂಕಾರ್ ಅವರು ಎಂದಿಗೂ ಚಿತ್ರರಂಗದತ್ತ ಮುಖ ಮಾಡಿದವರಲ್ಲ. 

ಅಮೂಲ್ಯ ಓಂಕಾರ್ ಗೌಡ ಅವರು ಸೋಶಿಯಲ್ ಮೀಡಿಯಾದಲ್ಲಿ ಸದಾ ಒಂದಿಲ್ಲೊಂದು ಫೋಟೋಗಳನ್ನು ಅಪ್ ಲೊಡ್ ಮಾಡುತ್ತಿರುತ್ತಾರೆ.    

ಹಾಟ್ ಫೋಟೋಗಳನ್ನು ಅಪ್ ಲೋಡ್ ಮಾಡುವುದರ ಮೂಲಕ ಪಡ್ಡೆ ಹುಡುಗರ ನಿದ್ದೆಗೆಡಿಸಿದ್ದಾರೆ. ಇನ್ನು ಇದೀಗ ಅಮೂಲ್ಯ ಡ್ಯಾನ್ಸ್ ಮಾಡಿದ್ದಾರೆ. ಸೊಂಟ ಬಳುಕಿಸುವ ವೀಡಿಯೋವನ್ನು ಅಪ್ ಲೋಡ್ ಮಾಡಿ ಪಡ್ಡೆ ಹೈಕಳ ಕಣ್ಣುಕುಕ್ಕುವಂತೆ ಮಾಡಿದ್ದಾರೆ. ಈ ವೀಡಿಯೋ ಭಾರೀ ವೈರಲ್ ಆಗಿದ್ದು, ಕಮಲಿ ಹಾಟ್ ಲುಕ್ ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ.