ರಾಷ್ಟ್ರ ಭಾಷೆ ಕುರಿತು ನಟ ನಟಿಯರ ಟ್ವೀಟ್ ಸಮರ! ಇಲ್ಲಿದೆ ನಟ ನಟಿಯರ ಟ್ವೀಟ್ ವಿವರ

By Infoflick Correspondent

Updated:Thursday, April 28, 2022, 08:29[IST]

ರಾಷ್ಟ್ರ ಭಾಷೆ ಕುರಿತು ನಟ ನಟಿಯರ ಟ್ವೀಟ್ ಸಮರ! ಇಲ್ಲಿದೆ ನಟ ನಟಿಯರ ಟ್ವೀಟ್ ವಿವರ

ಮತ್ತೆ ಹಿಂದಿ ರಾಷ್ಟ್ರ ಭಾಷೆ ಎಂಬ ವಿವಾದ ಮತ್ತೆ ಕಿಡಿ ಹೊತ್ತಿದೆ. ಕಿಚ್ಚ ಸುದೀಪ್​ ಸಂದರ್ಶನವೊಂದರಲ್ಲಿ ಆಡಿದ ಮಾತು ಹಿಂದಿ ನಮ್ಮ ರಾಷ್ಟ್ರಭಾಷೆಯಲ್ಲ ಎಂದು ಹೇಳಿದ ಮಾತಿಗೆ, ಹಾಗಾದರೆ ಹಿಂದಿ ಭಾಷೆಯಲ್ಲೇಕೆ ನಿಮ್ಮ ಚಿತ್ರಗಳನ್ನು ಡಬ್ ಮಾಡುತ್ತೀರಿ ಎಂದು ಸಂಪೂರ್ಣ ಹಿಂದಿಯಲ್ಲಿಯೇ ಬರೆದ ಟ್ವೀಟ್ ಮೂಲಕ ಪ್ರಶ್ನೆ ಮಾಡಿದ್ದರು. 

ರಾಷ್ಟ್ರಭಾಷೆ ವಿಚಾರವಾಗಿ ಬಾಲಿವುಡ್​ ನಟ ಅಜಯ್​ ದೇವಗನ್ ಹೇಳಿಕೆಗೆ ಕನ್ನಡ ನಟ ಕಿಚ್ಚ ಸುದೀಪ್ ಕೂಡ ಖಡಕ್​ ಆಗಿ ಟ್ವಿಟರ್​​ನಲ್ಲಿ ತಿರುಗೇಟು ನೀಡಿದ್ದಾರೆ.  ಸುದೀಪ್ ಅವರ ಮಾತಿಗೆ ಕನ್ನಡದ ನಟ ನೀನಾಸಂ ಸತೀಶ್ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಆಶಿಕಾ ರಂಗನಾಥ್, ರಾಮ್ ಗೋಪಾಲ್ ವರ್ಮ ಸುದೀಪ್ ಮಾತಿಗೆ ದನಿಗೂಡಿಸಿದ್ದಾರೆ. ಹಾಗು ಅಜಯ್ ದೇವಗನ್ ಟ್ವೀಟ್ ವಿರುದ್ಧ ರಿ ಟ್ವೀಟ್ ಮಾಡಿ ಯಾವುದೇ ಕಾರಣಕ್ಕೂ ಹಿಂದಿ ನಮ್ಮ ರಾಷ್ಟ್ರ ಭಾಷೆಯಲ್ಲ ಎಂದು ಹೇಳಿದ್ದಾರೆ. 

ಹತ್ತಾರು ವರ್ಷಗಳಿಂದ ನಿಮ್ಮ ಹಿಂದಿ ಸಿನಿಮಾಗಳು ಕನ್ನಡ ನೆಲದಲ್ಲಿ ಹಣ ಮಾಡಿವೆ,ಈಗಷ್ಟೆ ನಮ್ಮ ಕನ್ನಡ ಸಿನಿಮಾಗಳು ಅಲ್ಲಿಗೆ ಕಾಲಿಟ್ಟಿವೆ,ನಮ್ಮಂತೆ ನೀವು ನಮ್ಮನ್ನು, ನಮ್ಮ ಬಾಷೆಯನ್ನು ಗೌರವಿಸಿ.ಹಿಂದಿ ಅಂದಿಗೂ ಎಂದಿಗೂ ನಮ್ಮ ರಾಷ್ತ್ರ ಭಾಷೆಯಲ್ಲ.ನಿಮ್ಮ ಧ್ವನಿಗೆ ನಮ್ಮ ಧ್ವನಿ ಕಿಚ್ಚ ಸುದೀಪ್ ಸರ್' ಎಂದು ನಟ, ನಿರ್ದೇಶಖ ಸತೀಶ್ ನೀನಾಸಂ ಟ್ವೀಟ್ ಮಾಡಿದ್ದಾರೆ. 

ನಾವೆಲ್ಲರೂ ಭಾರತಕ್ಕೆ ಸೇರಿದವರು ಮತ್ತು ಪ್ರತಿ ಭಾಷೆಯನ್ನು ಗೌರವಿಸೋಣ ಮತ್ತು ಪ್ರೀತಿಸೋಣ. ಪ್ರೀತಿಯನ್ನು ಹಂಚಿರಿ ಎಂದು ನಟಿ ಆಶಿಕಾ ರಂಗನಾಥ್ ಟ್ವೀಟ್ ಮಾಡಿದ್ದಾರೆ. 

ಹಿಂದಿಯ ಟ್ವೀಟ್‌ಗೆ ನೀವು ಕನ್ನಡದಲ್ಲಿ ಉತ್ತರಿಸಿದರೆ ಏನು ಎಂಬ ನಿಮ್ಮ ಪ್ರಶ್ನೆಗಿಂತ ಉತ್ತಮವಾಗಿ ನೀವು ಈ ವಿಚಾರವನ್ನು ಅಜಯ್ ದೇವಗನ್ ಗೆ ಹೇಳಲು ಸಾಧ್ಯವಾಗುತ್ತಿರಲಿಲ್ಲ. ನಿಮಗೆ ವಂದನೆಗಳು ಸುದೀಪ್. ಉತ್ತರ ಮತ್ತು ದಕ್ಷಿಣ ಇಲ್ಲ ಮತ್ತು ಭಾರತವು 1 ಎಂದು ಎಲ್ಲರೂ ಅರಿತುಕೊಳ್ಳುತ್ತಾರೆ ಎಂದು ನಾನು ಭಾವಿಸುತ್ತೇನೆ' ಎಂದು ಸದ್ಯ ಬಾಲಿವುಡ್ ನ ಪ್ರಖ್ಯಾತ ನಿರ್ದೇಶಕ ಹೈದರಾಬಾದ್ ಮೂಲದ ರಾಮ್ ಗೋಪಾಲ್ ವರ್ಮ ಹೇಳಿದ್ದಾರೆ. 

ಹಿಂದಿ ಎಂದಿಗೂ ಮತ್ತು ಎಂದೆಂದಿಗೂ ನಮ್ಮ ರಾಷ್ಟ್ರೀಯ ಭಾಷೆಯಾಗುವುದಿಲ್ಲ. ನಮ್ಮ ದೇಶದ ಭಾಷಾ ವೈವಿಧ್ಯತೆಯನ್ನು ಗೌರವಿಸುವುದು ಪ್ರತಿಯೊಬ್ಬ ಭಾರತೀಯನ ಕರ್ತವ್ಯವಾಗಿದೆ. ಪ್ರತಿಯೊಂದು ಭಾಷೆಯು ಅದರ ಜನರು ಹೆಮ್ಮೆಪಡಲು ತನ್ನದೇ ಆದ ಶ್ರೀಮಂತ ಇತಿಹಾಸವನ್ನು ಹೊಂದಿದೆ. ನಾನು ಕನ್ನಡಿಗ ಎಂದು ಹೆಮ್ಮೆಪಡುತ್ತೇನೆ!" ಎಂದು ರಾಜ್ಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಬರೆದಿದ್ದಾರೆ.