ಇಷ್ಟರಲ್ಲೇ ಶುರುವಾಗುತ್ತಿದೆ ಬಿಗ್ಬಾಸ್ ಸೀಸನ್ 9..! ಕಂಟೆಸ್ಟೆಂಟ್ ಇವರೇ ಬಹುತೇಕ ಖಚಿತ ನೋಡಿ..!

By Infoflick Correspondent

Updated:Friday, April 15, 2022, 12:33[IST]

ಇಷ್ಟರಲ್ಲೇ ಶುರುವಾಗುತ್ತಿದೆ ಬಿಗ್ಬಾಸ್ ಸೀಸನ್ 9..! ಕಂಟೆಸ್ಟೆಂಟ್ ಇವರೇ ಬಹುತೇಕ ಖಚಿತ ನೋಡಿ..!

ಕನ್ನಡದ ಅತಿ ದೊಡ್ಡ ರಿಯಾಲಿಟಿ ಶೋ ಆಗಿರುವ ಬಿಗ್ಬಾಸ್ ಇದೀಗ ಮತ್ತೆ ಶುರು ಆಗುತ್ತಿದೆ ಎನ್ನುವ ಮಾತುಗಳು ಕಿರುತೆರೆ ವಲಯದಲ್ಲಿ ಕೇಳಿಬರುತ್ತಿವೆ. ಹೌದು ಬಿಗ್ ಬಾಸ್ ರಿಯಾಲಿಟಿ ಶೋ ಅತ್ಯದ್ಭುತ ವೇದಿಕೆಯಾಗಿದ್ದು ಸಾಕಷ್ಟು ಹೊಸಬರಿಗೆ ನವ ಯುವಕಲಾವಿದರಿಗೆ ಒಂದು ಒಳ್ಳೆಯ ಪ್ಲಾಟ್ಫಾರ್ಮ್ ಎಂದು ಹೇಳಬಹುದು.

ಬಿಗ್ ಬಾಸ್ ಸೀಸನ್ ಎಂಟರಲ್ಲಿ ಸಕ್ಕತ್ ಮನರಂಜನೆ ನೀಡಿದ್ದ ಎಲ್ಲಾ ಸ್ಪರ್ಧಿಗಳು ಕೊನೆಯಲ್ಲಿ ಮಂಜು ಪಾವಗಡ ಬಿಗ್ಬಾಸ್ ಸೀಸನ್ 8 ರ ವಿನ್ನರ್ ಆಗಿ ಹೊರಹೊಮ್ಮಿದರು. ಹಾಗೆ ರನ್ನರ್ ಅಪ್ ಆಗಿ ಅರವಿಂದ ಕೆಪಿ ಅವರು ತೃಪ್ತಿಪಟ್ಟುಕೊಂಡಿದ್ದರು. ಬಿಗ್ ಬಾಸ್ ಸಮಯ ಸಾಕಷ್ಟು ವಿಳಂಬವಾಗಿದೆ. ಕೊರೋನಾ ಹಾವಳಿಯಿಂದ ನಿಗದಿತ ಸಮಯದಲ್ಲಿ ಬಿಗ್ ಬಾಸ್ 8 ಕಾರ್ಯಕ್ರಮವನ್ನು ನಡೆಸಲಾಗಿಲ್ಲ. 

ತಡವಾಗಿ ಬಿಗ್ಬಾಸ್ ಸೀಸನ್ ಆರಂಭವಾದರೂ ಮಧ್ಯದಲ್ಲಿ ಅರ್ಧಕ್ಕೆ ನಿಲ್ಲಿಸಿ ಮತ್ತೆ ಮರು ಬಿಗ್ ಬಾಸ್ ಕಾರ್ಯಕ್ರಮ ಶುರುಮಾಡಿದ್ದರು. ಅದಾದ ಬಳಿಕ ಮಿನಿ ಬಿಗ್ಬಾಸ್ ತಂದರು ಅದು ಪ್ರೇಕ್ಷಕರನ್ನು ಅಷ್ಟರಮಟ್ಟಿಗೆ ಗಮನ ಸೆಳೆಯಲಿಲ್ಲ. ಇದೀಗ ಬಿಗ್ ಬಾಸ್ ಸೀಸನ್ 9 ಇಷ್ಟರಲ್ಲೇ ಬರಲಿದೆ ಎಂಬ ಸುದ್ದಿ ಕೇಳಿ ಬಂದಿದೆ. ಬಿಗ್ ಬಾಸ್ ಪ್ರಿಯರಲ್ಲಿ ಈ ಬಾರಿಗೆ ಯಾವೆಲ್ಲ ಸ್ಪರ್ಧಿಗಳು ಬಿಗ್ ಮನೆಗೆ ಎಂಟ್ರಿ ಕೊಡಬಹುದು ಎಂಬುದಾಗಿ ಲೆಕ್ಕಚಾರ ಹಾಕುತ್ತಿದ್ದಾರೆ. ವರದಿಗಳ ಪ್ರಕಾರ ಕೆಲವೊಂದಿಷ್ಟು ಸ್ಪರ್ಧಿಗಳ ಹೆಸರುಗಳ ಬಿಡುಗಡೆಯಾಗಿದೆ. ಮೊದಲಿಗೆ ಬಿ ಟಿವಿ ನಿರೂಪಕಿ ದಿವ್ಯ ವಸಂತ ಈ ಬಾರಿ ಬಿಗ್ ಬಾಸ್ ಮನೆಗೆ ಬರುವ ಸಾಧ್ಯತೆ ಇದೆ ಎನ್ನಲಾಗಿದೆ. 

ಕನ್ನಡದ ಹಿರಿಯ ಖ್ಯಾತ ನಟಿ ಪ್ರೇಮಾ, ಸಂಗೀತ ಲೋಕದ ಆಲ್ ಓಕೆ, ಮಂಡ್ಯ ರಮೇಶ್, ಗುರೂಜಿ ಆರ್ಯವರ್ಧನ್, ಎಂ ಸಿ ಕಾರಿಯಪ್ಪ, ಹಾಗೆ ಅಗ್ನಿಸಾಕ್ಷಿ ಖ್ಯಾತಿಯ ವಿಜಯ್ ಸೂರ್ಯ ಬರುತ್ತಿದ್ದಾರೆ ಎಂಬುದಾಗಿ ವರದಿಯಾಗಿದೆ. ಮತ್ತೆ ಸುಪ್ರೀತಾ ಸತ್ಯ ನಾರಾಯಣ್, ಮಜಾ ಭಾರತ ರಾಘವೇಂದ್ರ ವೇಧ ಕೃಷ್ಣಮೂರ್ತಿ, ರವಿ ಶ್ರೀವಾತ್ಸವ್, ಅರಗಿಣಿ ಖ್ಯಾತಿಯ ಮೇಘನ ಖುಷಿ, ಸೌಂದರ್ಯ ಜಯಮಾಲಾ, ಹಾಗೆ ಮಜಾ ಟಾಕೀಸ್ ನ ತರಂಗ ವಿಶ್ವ, ಹಾಗೆ ಬಿಟಿವಿ ನಿರೂಪಕರಾದ ಚಂದನ್ ಶರ್ಮಾ ಎನ್ನಲಾಗಿದೆ. ಇವರ ಬಗ್ಗೆ ನಿಮಗೆ ಹೆಚ್ಚು ಮಾಹಿತಿ ಬೇಕಾದಲ್ಲಿ ಈ ಲೇಖನದ ಕೊನೆಯಲ್ಲಿರುವ ವಿಡಿಯೋ ನೋಡಿ. ಹಾಗೆ ಮಾಹಿತಿಯನ್ನು ಶೇರ್ ಮಾಡಿ. ( video credit ; cini jagattu )