ನಿತ್ಯಾನಂದ ಆಶ್ರಮಸೇರಿದ ಕನ್ನಡದ ನಟಿ! ಕಾರಣ ಏನು ಗೊತ್ತೆ ?
Updated:Tuesday, May 10, 2022, 20:00[IST]

ನಿತ್ಯಾನಂದ ಸ್ವಾಮಿ ಬಗ್ಗೆ ನಾವೆಲ್ಲರೂ ಸಾಕಷ್ಟು ಕೇಳಿದ್ದೇವೆ. ಭಾರತದಿಂದ ಹೊರಹೋಗಿರುವ ಅವರು, ಇತ್ತೀಚೆಗೆ ಕೈಲಾಸ ಎಂಬ ತಮ್ಮದೇ ದೇಶವನ್ನು ಕಂಡುಕೊಂಡಿದ್ದಾರೆ ಎನ್ನುವುದು ದೊಡ್ಡ ಸುದ್ದಿಯಾಗಿತ್ತು. ಈ ವ್ಯಕ್ತಿ ಆಧ್ಯಾತ್ಮಿಕವಾಗಿ ಹೆಸರು ಮಾಡಿದ್ದರು. ಈ ವ್ಯಕ್ತಿಯ ಅನುಯಾಯಿಗಳು ಕಡಿಮೆಯಾಗಿಲ್ಲ. ಭಾರತ ಮತ್ತು ಅಮೆರಿಕಾದಲ್ಲಿ ಇವರ ಆಶ್ರಮಗಳಿವೆ. ಈಗ ನಟಿಮಣಿಯರು ನಿತ್ಯಾನಂದನದ ಮಯ ವಾಗುತ್ತಿದ್ದಾರೆ.
ನಟಿ ರಂಜಿತಾ ಅವರು ನಿತ್ಯಾನಂದನ ಮಾಯಾ ಆಗಿ ಆಶ್ರಮ ಸೇರಿ ಭಾರಿ ಸುದ್ದಿಯಾಗಿದ್ದರು. ಈಗ ಮತ್ತೊಬ್ಬ ನಟಿ ನಿತ್ಯಾನಂದ ಆಶ್ರಮ ಸೇರಿದ್ದಾರೆ. ಕನ್ನಡ ಚಿತ್ರರಂಗದ ಓರ್ವ ನಟಿ ಟಿ ಕೌಸಲ್ಯ ನಿತ್ಯಾನಂದನ ಆಕರ್ಷಣೆಗೆ ಒಳಗಾಗಿದ್ದಾರೆ.
ಸಾಕಷ್ಟು ವರ್ಷಗಳಿಂದ ಈ ನಟಿಗೆ ಬಹಳ ಹಿಮ್ಮಡಿ ನೋವು ಕಾಣಿಸಿಕೊಂಡಿದ್ದು ಯಾವ ವೈದ್ಯರ ಬಳಿ ತೋರಿಸಿದರು ಕಡಿಮೆ ಆಗಲಿಲ್ಲ. ನಂತರ ಸ್ನೇಹಿತೆಯೊಬ್ಬರು ನಿತ್ಯಾನಂದ ಅವರ ಆಶ್ರಮಕ್ಕೆ ಹೋಗಲು ಸೂಚನೆ ನೀಡಿದು ಸ್ನೇಹಿತೆಯ ಸೂಚನೆಯಂತೆ ನಿತ್ಯಾನಂದ ಸ್ವಾಮಿ ಅವರ ಆಶ್ರಮಕ್ಕೆ ಹೋಗಿ ಅಲ್ಲಿ ಹೀಲಿಂಗ್ ಥೆರಪಿ ತೆಗೆದುಕೊಳ್ಳಲು ಆರಂಭಿಸಿದರು. ಹೀಲಿಂಗ್ ಥೆರಪಿ ಶುರು ಮಾಡಿದ ನಂತರ ಅವರಿಗಿದ್ದ ಹಿಮ್ಮಡಿ ನೋವು ಕಡಿಮೆ ಆಗುತ್ತಿದ್ದಂತೆ ನಟಿ ನಿತ್ಯಾನಂದ ಸ್ವಾಮಿಯ ಶಿಷ್ಯೆಯಾಗಿದ್ದಾರೆ.
ಬೆಂಗಳೂರಿನಲ್ಲಿ ಹುಟ್ಟಿ ತಮಿಳು ತೆಲುಗು ಕನ್ನಡ ಮತ್ತು ಕೆಲವು ಮಲಯಾಳಂ ಸಿನಿಮಾಗಳಲ್ಲೂ ನಟಿಸಿ ಜನಪ್ರಿಯತೆ ಪಡೆದಿರುವ ನಟಿ ಕೌಸಲ್ಯ ಮಲಯಾಳಂ ಸಿನಿಮಾದಲ್ಲಿ ನಟಿಸುವ ಮೂಲಕ ನಾಯಕಿಯಾದರು. ನಟನೆಗೂ ಮೊದಲು ಮಾಡೆಲಿಂಗ್ ಮಾಡುತ್ತಿದ್ದರು.ಈಗ ನಿತ್ಯಾನಂದ ಸ್ವಾಮಿಯ ಶಿಶ್ಯೆಯಾಗಿದ್ದಾರೆ.