ಯೌಟ್ಯೂಬ್ ಇಂಡಿಯಾದಲ್ಲಿ ನಮ್ಮ ಕನ್ನಡ ಸಾಂಗ್ ಟ್ರೆಂಡ್..! ಯಾಕಿಂಗೆ 2 ಹಾಡು ಹೆವಿ ವೈರಲ್..!

By Infoflick Correspondent

Updated:Saturday, January 15, 2022, 19:55[IST]

ಯೌಟ್ಯೂಬ್ ಇಂಡಿಯಾದಲ್ಲಿ ನಮ್ಮ ಕನ್ನಡ ಸಾಂಗ್ ಟ್ರೆಂಡ್..! ಯಾಕಿಂಗೆ 2 ಹಾಡು ಹೆವಿ ವೈರಲ್..!

ಯೂಟ್ಯೂಬ್ ದುನಿಯಾದಲ್ಲಿ ದಿನಕ್ಕೊಬ್ಬ ಹಾಡುಗಾರರು ಹುಟ್ಟುತ್ತಾರೆ. ಹಾಗೆ ಅವರದೇ ಆದ ಪ್ರತಿಭೆಯ ಮೂಲಕ ಸಾಕಷ್ಟು ಅಭಿಮಾನಿಗಳ ಹೃದಯಕ್ಕೆ ಹತ್ತಿರವಾಗುತ್ತಾರೆ. ಅದರಂತೆ ಸಂಗೀತ ಕ್ಷೇತ್ರದಲ್ಲಿ ಸಾಕಷ್ಟು ವಿಭಿನ್ನ ಪ್ರಯತ್ನದ ಪ್ರತಿಭೆಗಳು ಈಗಾಗಲೇ ಕನ್ನಡದಲ್ಲಿ ಮಿಂಚಿದ್ದು, ಸಾಕಷ್ಟು ಅಭಿಮಾನಿ ಬಳಗ ಹೊಂದಿದ್ದಾರೆ. ಹೌದು ರಾಪ್ ಸಾಂಗ್ ಮೂಲಕ ಈಗಾಗಲೇ ಸಾಕಷ್ಟು ಯುವಕರ ತಂಡಗಳು ಕನ್ನಡಿಗರಿಗೆ ರ್ಯಾಪ್ ಹಾಡುಗಳನ್ನು ನೀಡಿದ್ದಾರೆ. ಆಲ್ ಓಕೆ, ರಾಹುಲ್ ಡಿಟ್ಟೋ, ಚಂದನ್ ಶೆಟ್ಟಿ ಹೀಗೆ ಸಾಕಷ್ಟು ಹೊಸ ಪ್ರತಿಭೆಗಳು ರ್ಯಾಪ್ ಲೋಕದಲ್ಲಿ ದೊಡ್ಡ ಯಶಸ್ಸು ಗಳಿಸಿದ್ದಾರೆ. ಆಲ್ ಓಕೆ ಅವರ ಸಾಕಷ್ಟು ರಾಪ್ ಸಾಂಗ್ ಗಳನ್ನು ಈಗಾಗಲೇ ನೀವೂ ಕೇಳಿದ್ದೀರಿ.

ಯಾಕಿಂಗೆ ಮಗ ಯಾಕಿಂಗೆ ಎನ್ನುವ ರ್ಯಾಪ್ ಸಾಂಗ್ ಈಗಾಗಲೇ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿದ್ದು, ಕನ್ನಡ ಸಿನಿಮಾರಂಗದ ಸಾಕಷ್ಟು ಹಿರಿಯ ನಟರನ್ನು ಹಾಡಿನಲ್ಲಿ ತೋರಿಸಿ, ಜೀವನದಲ್ಲಿ ಬರುವ ಕಷ್ಟ-ಸುಖಗಳ ಹಾಗೂ ಅಪ್ಪ-ಅಮ್ಮ ಅವರ ಮಹತ್ವದ ಬಗ್ಗೆ ತುಂಬಾ ಚೆನ್ನಾಗಿ ಸಾಲುಗಳನ್ನು ಬರೆದು ಹಾಡನ್ನು ಹಾಡಿದ್ದರು. ಇದೀಗ ಅದೇ ಯಾಕಿಂಗೆ ಹಾಡಿನ ಎರಡನೇ ಭಾಗದ ವಿಡಿಯೋವನ್ನು ಬಿಡುಗಡೆ ಮಾಡಿದ್ದಾರೆ. ಇದು ಯುಟ್ಯೂಬ್ ನಲ್ಲಿ ಇದೀಗ ಟ್ರೆಂಡಿಂಗ್ 2 ರಲ್ಲಿದೆ. ಯಾಕಿಂಗೆ ಎರಡನೆ ಭಾಗದ ಈ ಹಾಡಿನಲ್ಲಿ ಇನ್ನಷ್ಟು ಅದ್ಭುತವಾದ ಸಾಲುಗಳನ್ನು ಸೇರಿಸಿ ಹಾಡಿದ್ದಾರೆ. ಹೌದು ಹಾಡಿನಲ್ಲಿ ಪುನೀತ್ ರಾಜಕುಮಾರ್, ಚಿರಂಜೀವಿ ಸರ್ಜಾ, ಸಂಚಾರಿ ವಿಜಯ್ ಅವರ ಬಗ್ಗೆ ಕೆಲವು  ಅದ್ಭುತವಾದ ಪದಗಳ ಸಂಯೋಜನೆ ಮಾಡಿ, ಸುಲಿಗೆ ಮಾಡುವರು, ದರೋಡೆಕೋರರು ಇಲ್ಲಿಯೇ ಇರುತ್ತಾರೆ.  

ಆದ್ರೆ ದಾನ ಮಾಡುವವರು, ಪ್ರೀತಿ ಹಂಚುವವರು ಬೇಗನೆ ಹೋಗಿಬಿಡುತ್ತಾರೆ ಎಂಬುದಾಗಿ ಹೇಳಿದ ಸಾಲು ತುಂಬಾ ಅದ್ಭುತವಾಗಿವೆ. ಹಾಡನ್ನು ಈಗಾಗಲೇ ನೀವು ಕೇಳಿದ್ದರೆ ಆಲ್ ಓಕೆ ಅವರ ಎರಡನೇ ಭಾಗದ ಯಾಕಿಂಗೆ ಶಿವ ಹಾಡು ಹೇಗಿದೆ ಎಂದು ಕಮೆಂಟ್ ಮಾಡಿ ತಿಳಿಸಿ..ಇಲ್ಲವಾದಲ್ಲಿ ಈ ಲೇಖನದ ಕೊನೆಯಲ್ಲಿದೆ ವಿಡಿಯೋ ನೋಡಿ, ಶೇರ್ ಮಾಡಿ ಪ್ರೋತ್ಸಾಹಿಸಿ...