ಯಾವಾಗ ಶುರುವಾಗುತ್ತಿದೆ ಗೊತ್ತಾ ನಿಮ್ಮ ನೆಚ್ಚಿನ ರಿಯಾಲಿಟಿ ಶೋ ರಾಜಾ-ರಾಣಿ..?

By Infoflick Correspondent

Updated:Thursday, May 19, 2022, 08:54[IST]

ಯಾವಾಗ ಶುರುವಾಗುತ್ತಿದೆ ಗೊತ್ತಾ  ನಿಮ್ಮ ನೆಚ್ಚಿನ ರಿಯಾಲಿಟಿ ಶೋ ರಾಜಾ-ರಾಣಿ..?

ಸೆಲೆಬ್ರಿಟಿಗಳು ಅಂದರೆ ನಮಗೆಲ್ಲಾ ಅವರು ಬಿಡಿ. ತುಂಬಾ ಫೇಮಸ್. ಅವರಿಗೆ ಪ್ರಾಬ್ಲೆಮ್ಸ್ ಎಲ್ಲಾ ಎಲ್ಲಿರುತ್ತೆ. ಅರಾಮಾದ ಜೀವನ ಅವರದು ಅಂತ ತಿಳಿದುಕೊಳ್ತೀವಿ. ಆದರೆ. ಅವರೂ ಮನುಷ್ಯರೆ, ಅವರಿಗೂ ಕಷ್ಟ-ನೋವು ಇರುತ್ತೆ ಅನ್ನೋದು ಹಲವರಿಗೆ ತಿಳಿದಿರೋದಿಲ್ಲ. ಇದನ್ನೇ ಹೇಳುವ ಕಾರ್ಯಕ್ರಮವೇ ರಾಜಾ-ರಾಣಿ ರಿಯಾಲಿಟಿ ಶೋ. ಕಲರ್ಸ್ ಕನ್ನಡದಲ್ಲಿ ಕಳೆದ ವರ್ಷ ಈ ಶೋ ಹಿಟ್ ಆಗಿತ್ತು. ಇದೀಗ ಸೀಸನ್-2 ಆರಂಭಿಸಲು ಕಲರ್ಸ್ ಕನ್ನಡ ವಾಹಿನಿ ಮುಂದಾಗಿದೆ. 

ರಿಯಾಲಿಟಿ ಶೋಗಳು ತುಂಬಾನೇ ಹಿಟ್ ಆಗಿವೆ. ಹೀಗಾಗಿನೇ ಹಲವಿವು ರಿಯಾಲಿಟಿ ಕಾರ್ಯಕ್ರಮಗಳು ಹೊಸ ಹೊಸ ಐಡಿಯಾಗಳೊಂದಿಗೆ ಮೂಡಿ ಬರುತ್ತಿವೆ. ಕಲರ್ಸ್ ವಾಹಿನಿಯಲ್ಲಿ ಕಳೆದವರ್ಷಪ್ರಸಾರವಾಗಿದ್ದ ರಾಜಾ-ರಾಣಿ ಶೋ ದೊಡ್ಡ ಮಟ್ಟದ ಯಶಸ್ಸು ಕಂಡಿತ್ತು. ಆದರೆಶೋತುಂಬಾ ಬೇಗ ಮುಕ್ತಾಯಗೊಂಡಿತುಎಂದು ಪ್ರೇಕ್ಷಕರು ಬೇಸರ ಮಾಡಿಕೊಂಡಿದ್ದರುಕೂಡ. ರಾಜಾ-ರಾಣಿ ಕಾರ್ಯಕ್ರಮಕ್ಕೆ ಅತ್ಯುತ್ತಮವಾದ ಪ್ರತಿಕ್ರಿಯೆಗಳು ಬಂದಿತ್ತು. ಕಲಾರಂಗದ ಜೋಡಿಗಳ ನಿಜ ಜೀವನವನ್ನು ವೀಕ್ಷಕರ ಮುಂದೆ ತೆರೆದಿಡುವುದೇ ಈ ಕಾರ್ಯಕ್ರಮದ ಉದ್ದೇಶವಾಗಿದೆ. ರಿಯಲ್ ಕಪಲ್ ಗಳ ರಿಯಾಲಿಟಿ ಶೋ ಸ್ವಲ್ಪ ಡಿಫರೆಂಟ್ ಆಗಿದೆ. 

ಆದರೆ ಈಗ ಸಂತಸದ ವಿಚಾರ ಎಂದರೆ ಮತ್ತೆ ರಾಜಾ ರಾಣಿ ಶೋ ಬರುತ್ತಿದೆ. ರಾಜು ತಾಳಿಕೋಟೆ ಹಾಗೂ ಪತ್ನಿ ಪ್ರೇಮಾ, ಚಂದನ್ ಶೆಟ್ಟಿ-ನಿವೇದಿತಾ ಗೌಡ, ಮುರುಗಾ-ಇಷಿತಾ, ನೇಹಾ ಗೌಡ-ಚಂದನ್ ಸೇರಿದಂತೆ ಹಲವು ಜೋಡಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ರಾಜಾ-ರಾಣಿ ರಿಯಾಲಿಟಿ ಶೋ ನಲ್ಲಿದ್ದ ಜೋಡಿಗಳೆಲ್ಲಾ ತಮ್ಮ ತಮ್ಮ ನೋವುಗಳನ್ನು ಹಾಗೂ ತಮ್ಮ ಜೀವನದ ಕಷ್ಟದ ಕ್ಷಣಗಳನ್ನು ಹೇಳಿಕೊಂಡಿದ್ದರು. ಈ ಕಾರ್ಯಕ್ರಮವನ್ನು ಅನುಪಮಾ ಗೌಡ ಅವರು ನಿರೂಪಣೆ ಮಾಡಿದ್ದರೆ, ಹಿರಿಯ ನಟಿ ತಾರಾ ಹಾಗೂ ಸೃಜನ್ ಲೋಕೇಶ್ ಜಡ್ಜ್ ಆಗಿದ್ದರು.,ಇದೀಗ ಮತ್ತೆ ರಾಜಾ-ರಾಣಿ ಸೀಸನ್ ಶುರುವಾಗುತ್ತಿದ್ದು, ಜೂನ್ ತಿಂಗಳ ಮೊದಲ ವಾರದಿಂದ ಈ ಕಾರ್ಯಕ್ರಮ ಪ್ರಾರಂಭವಾಗಲಿದೆ.