ಕನ್ನಡದಲ್ಲಿ ಹಾಡೊಂದಕ್ಕೆ ಅತಿ ಹೆಚ್ಚು ಸಂಭಾವನೆ ಇವರಲ್ಲಿ ಯಾರು ಪಡೆಯುತ್ತಾರೆ ಗೊತ್ತಾ..? ಈಗ ಬಯಲು..!

By Infoflick Correspondent

Updated:Sunday, March 6, 2022, 19:27[IST]

ಕನ್ನಡದಲ್ಲಿ ಹಾಡೊಂದಕ್ಕೆ ಅತಿ ಹೆಚ್ಚು ಸಂಭಾವನೆ ಇವರಲ್ಲಿ ಯಾರು ಪಡೆಯುತ್ತಾರೆ ಗೊತ್ತಾ..? ಈಗ ಬಯಲು..!

ಕನ್ನಡ ಚಿತ್ರರಂಗದಲ್ಲಿ ಮಾತ್ರವಲ್ಲದೆ ಎಲ್ಲಾ ಸಿನಿ ಕ್ಷೇತ್ರದಲ್ಲೂ ನಟನೆಗೆ ಮತ್ತು ಸಿನಿಮಾದ ಪ್ರತಿಯೊಂದು ಕೆಲಸಕ್ಕೂ ಹೆಚ್ಚು ಮಹತ್ವವಿದೆ. ಸಿನಿಮಾ ಕ್ಷೇತ್ರದಲ್ಲಿ ಒಬ್ಬ ನಟನಿಗೆ ಹಾಗೂ ನಟಿಗೆ ಮತ್ತು ಎಲ್ಲಾ ಕಲಾವಿದರಿಗೆ ಯಾವ ರೀತಿ ಸಂಭಾವನೆ ನೀಡುತ್ತಾರೋ ಅದೇ ರೀತಿ ಸಿನಿಮಾದ ಪ್ರತಿಯೊಂದು ಕೆಲಸಕ್ಕೂ ಅದರದೇ ಆದ ಸಂಭಾವನೆ ಇರುತ್ತದೆ. ಹೌದು ಒಂದು ಸಿನಿಮಾದಲ್ಲಿ ನಟಿಸುತ್ತಿದ್ದಾರೆ ಎಂದರೆ ಅವರಿಗೆ ಇಂತಿಷ್ಟು ಹಣ ಎಂದು ಮೊದಲೇ ಮಾತನಾಡಿ ಸಂಭಾವನೆ ರೂಪದಲ್ಲಿ ಕೊಡಲಾಗುತ್ತದೆ. ಅದೇ ರೀತಿ ಒಂದು ಸಿನಿಮಾ ಹಿಟ್ ಆಗುವುದಕ್ಕೆ ಹಾಡು ತುಂಬಾ ಕೆಲಸ ಮಾಡುತ್ತದೆ. ಸಿನಿಮಾದಲ್ಲಿ ಹಾಡುಗಳು ಅದ್ಭುತವಾಗಿ ಮೂಡಿಬಂದರೆ, ಸಿನಿ ಪ್ರೇಕ್ಷಕ ಹೆಚ್ಚು ಮನರಂಜನೆ ಪಡೆದುಕೊಳ್ಳುತ್ತಾನೆ.

ಕನ್ನಡ ಚಿತ್ರರಂಗದಲ್ಲಿ ಈಗಾಗಲೇ ಸಾಕಷ್ಟು ಗಾಯಕರು ಅವರದೇ ಆದ ಹಾಡಿನ ಮೂಲಕ ಅತಿ ಹೆಚ್ಚು ಅಭಿಮಾನಿ ಬಳಗ ಹೊಂದಿದ್ದಾರೆ. ಕೆಲ ಗಾಯಕರು ಬೇಡಿಕೆಯುಳ್ಳ ಗಾಯಕರಾಗಿದ್ದಾರೆ. ಇನ್ನು ಕೆಲವರು ಹೆಚ್ಚು ಸಂಭಾವನೆ ಪಡೆಯುವ ಗಾಯಕರು ಇದ್ದಾರೆ. ಕೆಲವರಿಗೆ ಬೇಡಿಕೆಯೂ ಇದ್ರು ಸಂಭಾವನೆ ಹೆಚ್ಚು ಇರುವುದಿಲ್ಲ. ಇನ್ನೂ ಕೆಲವರಿಗೆ ಬೇಡಿಕೆ ಕಡಿಮೆ ಇದ್ದರೂ ಸಂಭಾವನೆ ಮಾತ್ರ ಹೆಚ್ಚಿರುತ್ತದೆ. ಸದ್ಯ ತಿಳಿದು ಬಂದಿರುವ ಮಾಹಿತಿ ಪ್ರಕಾರ ಕನ್ನಡದಲ್ಲಿ ಗಾಯಕ ವಿಜಯಪ್ರಕಾಶ್ (Vijaya Prakash) ಅತಿ ಹೆಚ್ಚು ಸಂಭಾವನೆಯನ್ನು ಪಡೆಯುವ ಗಾಯಕರಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಒಂದು ಹಾಡಿಗೆ ಒಂದು ಲಕ್ಷ ಹಣ ಚಾರ್ಜ್ ಮಾಡುತ್ತಾರಂತೆ. ಜೊತೆಗೆ ರಾಜೇಶ್ ಕೃಷ್ಣನ್ (Rajesh Krishnan) ಹೆಚ್ಚು ಇತ್ತೀಚಿಗೆ ಹಾಡುಗಳನ್ನು ಹಾಡುತ್ತಿಲ್ಲ, ಆದರೆ ಇವರಿಗೆ ಬೇಡಿಕೆ ಕಡಿಮೆಯಾಗಿಲ್ಲ ಎನ್ನಲಾಗುತ್ತಿದೆ. 

ನಟ ದರ್ಶನ್ ಅವರ ಸಿನಿಮಾಗಳಿಗೆ ಗಾಯಕ ಹೇಮಂತ್ ಅವರು ಹೆಚ್ಚು ಹಾಡುಗಳನ್ನು ಹಾಡುತ್ತಾರೆ. ಇವರಿಗೂ ಕೂಡ ಸಂಭಾವನೆ ಏನು ಕಡಿಮೆ ಇಲ್ಲ ಎನ್ನಲಾಗುತ್ತಿದೆ. ಹಾಗೆ ವಿಜಯಪ್ರಕಾಶ್ ಸುಜಿತ್ ಶೆಟ್ಟಿ ಅವರಂತೆ ವರ್ಷಕ್ಕೆ 40ರಿಂದ ಐವತ್ತು ಹಾಡುಗಳನ್ನು ಹೇಮಂತ್ ಮತ್ತು ರಾಜೇಶ್ ಕೃಷ್ಣನ್ ಅವರು ಹಾಡುವುದಿಲ್ಲ. ಮಹಿಳಾ ಗಾಯಕಿರ ವಿಭಾಗದಲ್ಲಿ ಶಮಿತ ಮಲ್ನಾಡ್ (Shamita malnad) ಮತ್ತು ಅನುರಾಧ ಭಟ್ (Anuradha Bhat) ಅವರು ತುಂಬಾ ಹೆಸರು ಮಾಡಿದ್ದಾರೆ. ಜೊತೆಗೆ ಇವರಿಗೂ ಕೂಡ ಒಳ್ಳೆಯ ಸಂಭಾವನೆ ಇದೆ ಎಂದು ಹೇಳಲಾಗುತ್ತಿದೆ..