ಕನ್ನಡ್ ಎನ್ನುತ್ತಿದ್ದವರು ಇಂದು ಕನ್ನಡ ಎಂದು ಸ್ಪಷ್ಟವಾಗಿ ಹೇಳುತ್ತಿದ್ದಾರೆ: ಇದಕ್ಕೆ ಕಾರಣ ಏನು ಗೊತ್ತಾ..?

By Infoflick Correspondent

Updated:Tuesday, May 17, 2022, 18:47[IST]

ಕನ್ನಡ್ ಎನ್ನುತ್ತಿದ್ದವರು ಇಂದು ಕನ್ನಡ ಎಂದು ಸ್ಪಷ್ಟವಾಗಿ ಹೇಳುತ್ತಿದ್ದಾರೆ: ಇದಕ್ಕೆ ಕಾರಣ ಏನು ಗೊತ್ತಾ..?

ಕೆಜಿಎಫ್ ಚಾಪ್ಟರ್-2 ಈಗ ಅಭಿಮಾನಿಗಳನ್ನು ರಂಜಿಸುತ್ತಿರುವ ಚಿತ್ರ. ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಚಾಪ್ಟರ್ -2 ಸಿನಿಮಾ ಬಿಡುಗಡೆಯಾಗಿ ಸಖತ್ ಸೌಂಡ್ ಮಾಡುತ್ತಿದೆ. ರಾಕಿಂಗ್ ಸ್ಟಾರ್ ಯಶ್ ಹಾಗೂ ನಿರ್ದೇಶಕ ಪ್ರಶಾಂತ್ ನೀಲ್ ನಿರ್ದೇಶನದ ಕೆಜಿಎಫ್-2 ಚಿತ್ರ ನಿತ್ಯ ದಾಖಲೆಗಳನ್ನು ಮಾಡುತ್ತಲೇ ಇದೆ. ಇದುವರೆಗೂ ಕನ್ನಡ ಚಿತ್ರ ಮಾಡಿರದ ದಾಖಲೆಗಳನ್ನು ಕೆಜಿಎಫ್-2 ಸಿನಿಮಾ ಮಾಡಿದೆ. ಅದಾಗಲೇ ಬರೋಬ್ಬರಿ ಒಂದು ಸಾವಿರ ಕೋಟಿ ಕಲೆಕ್ಷನ್ ಮಾಡಿ ಧೂಳೆಬ್ಬಿಸಿದೆ. ಚಿತ್ರ ರಿಲೀಸ್ ಆಗಿ 3 ವಾರ ಕಳೆದರೂ, ಯಶ್ ಹವಾ ಸ್ವಲ್ಪವೂ ತಗ್ಗಿಲ್ಲ. ಕೆಜಿಎಫ್ 2 ರಿಲೀಸ್ ಆದ ಬಳಿಕ ಇಡೀ ವಿಶ್ವದಲ್ಲೇ ಚಿತ್ರ ರೂಲ್ ಮಾಡುತ್ತಿದೆ.  

ಕೋಲಾರ ಚಿನ್ನದ ಗಣಿಯ ರಕ್ತಸಿಕ್ತ ಚರಿತ್ರೆಯಲ್ಲಿ ಹೆಸರು ಮಾಡಿದ ಚಿತ್ರವೇ ಕೆಜಿಎಫ್. ಚಿತ್ರದಲ್ಲಿ ಯಶ್ ಜೊತೆಗೆ ಶ್ರೀನಿಧಿ ಶೆಟ್ಟಿ, ರವೀನಾ ಟಂಡನ್, ಪ್ರಕಾಶ್ ರಾಜ್, ರಾವ್ ರಮೇಶ್, ಸಂಜಯ್ ದತ್, ಈಶ್ವರಿ ರಾವ್, ಅಚ್ಯುತ್ ಕುಮಾರ್ ಮತ್ತು ಅರ್ಚನಾ ಜೋಯಿಸ್ ಸೇರಿದಂತೆ ಹಲವರು ಇದ್ದಾರೆ. ಪ್ರಶಾಂತ್ ನೀಲ್ ನಿರ್ದೇಶನದ ಕೆಜಿಎಫ್ ಚಾಪ್ಟರ್ 2 ಚಿತ್ರಕ್ಕೆ ವಿಜಯ್ ಕಿರಗಂದೂರು ಹಣ ಹೂಡಿದ್ದಾರೆ. ಕೇವಲ ಕನ್ನಡದಲ್ಲಿ ಮಾತ್ರವಲ್ಲದೇ ಬೇರೆ ಬೇರೆ ದೇಶ-ವಿದೇಶಗಳಲ್ಲೂ ಮತ್ತು ಬೇರೆ ಬೇರೆ ಭಾಷೆಗಳಲ್ಲೂ ಕಮಾಲ್ ಮಾಡಿದೆ.

ಇನ್ನು ಪ್ರಪಂಚದ ಯಾವುದೋ ಒಂದು ಮೂಲೆಯಲ್ಲಿದ್ದ ಕರ್ನಾಟಕ ರಾಜ್ಯವನ್ನು ಇದೀಗ ಇಡೀ ಜಗತ್ತೇ ತಿರುಗಿ ನೋಡುವಂತೆ ಮಾಡಿದ್ದು ಕೆಜಿಎಫ್ ಚಿತ್ರ. ಇಷ್ಟು ದಿನ ಕನ್ನಡ ಭಾಷೆಯನ್ನು ತಿರಸ್ಕರಿಸುತ್ತಿದ್ದವರು ಈಗ ಗೌರವಿಸುವಂತಾಗಿದೆ. ಇದಕ್ಕೂ ಕೂಡ ಕೆಜಿಎಫ್ ಚಿತ್ರವೇ ಕಾರಣ. ಏಕೆಂದರೆ, ಇಷ್ಟ ದಿವಸ ಕನ್ನಡ್ ಎನ್ನು ಉಚ್ಛರಿಸುತ್ತಿದ್ದ ಜನರು ಈಗ ಸ್ಪಷ್ಟವಾಗಿ ಕನ್ನಡ ಎಂದು ಉಚ್ಛರಿಸುತ್ತಿದ್ದಾರೆ. ಇದೆಲ್ಲದಕ್ಕೂ ಕಾರಣವೇ ಕೆಜಿಎಫ್ ಈ ವಿಚಾರವನ್ನು ಎಲ್ಲರೂ ಒಪ್ಪಲೇ ಬೇಕಾದಂತಹ ಸತ್ಯ.