ಡಿಫರೆಂಟ್ ಕಥೆಯೊಂದಿಗೆ ಅದ್ಭುತವಾಗಿ ಮೂಡಿಬರುತ್ತಿರುವ ಕನ್ನಡತಿ ಧಾರಾವಾಹಿ ಅಂತ್ಯಗೊಳ್ಳಲು ಕಾರಣವೇನು..?

By Infoflick Correspondent

Updated:Tuesday, May 31, 2022, 15:36[IST]

ಡಿಫರೆಂಟ್ ಕಥೆಯೊಂದಿಗೆ ಅದ್ಭುತವಾಗಿ ಮೂಡಿಬರುತ್ತಿರುವ ಕನ್ನಡತಿ ಧಾರಾವಾಹಿ ಅಂತ್ಯಗೊಳ್ಳಲು ಕಾರಣವೇನು..?

ಡಿಫರೆಂಟ್ ಕಥೆಯೊಂದಿಗೆ ಸ್ಪಷ್ಟ ಕನ್ನಡದ ಮೂಲಕ ಹೊರ ಹೊಮ್ಮಿರುವ ಧಾರಾವಾಹಿಯೇ ಕನ್ನಡತಿ. ಈಗ ಬರೋ ಧಾರಾವಾಹಿಗಳಲ್ಲಿ ಒಂದನ್ನು ಮನಸಿಟ್ಟು ನೋಡಬೇಕು ಎನಿಸೊಲ್ಲ. ಒಂದು ಸೀರಿಯಲ್ ನಲ್ಲಿ ಅತ್ತೆ ಸೋಸೆ ಕಚ್ಚಾಟವಿದ್ರೆ, ಮತ್ತೊಂದರಲ್ಲಿ ಅಕ್ಕ-ತಂಗಿಯರ ಕಾದಾಟ. ಇಲ್ಲವೇ ಗಂಡ-ಹೆಂಡತಿ ನಡುವೆ ಜಗಳ-ಗುದ್ದಾಟ, ಮನೆ ಮನೆಯವರಲ್ಲೇ ಧ್ವೇಷದ ಅಲೆ ತುಂಬಿ ತುಳುಕುತ್ತಿರುತ್ತದೆ. ಹೀಗಿರುವಾಗ ಯಾರಿಗೂ ಧಾರಾವಾಹಿಗಳನ್ನ ನೋಡಬೇಕು ಅನಿಸೊಲ್ಲ. ಕೇವಲ ಆಡಂಬರದಿಂದಲೇ ಕೂಡಿರೋ ಸೀರಿಯಲ್ ಗಳ ನಡುವೆ ಕನ್ನಡತಿ ಧಾರಾವಾಹಿ ತುಂಬಾ ಸಿಂಪಲ್ ಆಗಿ ಮೂಡಿಬರುತ್ತಿದೆ.    

ಕನ್ನಡತಿ ಧಾರಾವಾಹಿಯ ಪ್ರತೀ ಎಪಿಸೋಡ್ ನ ಕೊನೆಯಲ್ಲೂ ಕನ್ನಡ ಅಕ್ಷರಮಾಲೆ ಬಗ್ಗೆಯೂ ಮಾಹಿತಿ ನೀಡುತ್ತಿದ್ದಾರೆ. ನಿತ್ಯ ಒಂದೊಂದು ಅಕ್ಷರದ ಅರ್ಥ ಹಾಗೂ ಹುಟ್ಟಿನ ಬಗ್ಗೆ ವಿವರಣೆ ಕೊಡುತ್ತಾರೆ. ಈ ಧಾರಾವಾಹಿಯಲ್ಲಿ ರಂಜನಿ ಅವರ ಸಂಭಾಷಣೆಯ ಶೈಲಿ ಹಾಗೂ ಭಾಷೆಯ ಸ್ಪಷ್ಟತೆಯಿಂದಲೇ ಸಿಕ್ಕಾಬಟ್ಟೆ ಫೇಮಸ್ ಆಗಿದ್ದಾರೆ. ಪುಟ್ಟ ಗೌರಿ ಸೀರಿಯಲ್ ಮೂಲಕ ಕಿರುತೆರೆಗೆ ಎಂಟ್ರಿಕೊಟ್ಟು ಕನ್ನಡತಿ ಧಾರಾವಾಹಿಯಲ್ಲಿ ಸಕ್ರಿಯರಾಗಿರುವ ನಟಿ ರಂಜನಿ ರಾಘವನ್ ಅಭಿನಯಕ್ಕೆ ವೀಕ್ಷಕರು ಫಿದಾ ಆಗಿದ್ದಾರೆ.

ಕನ್ನಡತಿ ಧಾರಾವಾಹಿಯಲ್ಲಿ ಭುವಿ ಹೆಸರಿನ ನಾಯಕಿ ಪಾತ್ರದಲ್ಲಿ ಕಾಣಿಸಿಕೊಂಡಿರುವ ರಂಜನಿ ರಾಘವನ್ ಹಾಗೂ ಹರ್ಷ ಇಬ್ಬರು ಅಭಿಮಾನಿಗಳ ಫೇವರಿಟ್ ಜೋಡಿಗಳಾಗಿದ್ದಾರೆ. ಇತ್ತೀಚೆಗಷ್ಟೇ ತನ್ನ ಪ್ರೀತಿ ನಿವೇಧನೆ ಮಾಡಿಕೊಂಡ ಹರ್ಷ ಭುವಿ ಈಗ ಮದುವೆಯಾಗುತ್ತಿದ್ದಾರೆ. ಆದರೆ ಈ ನಡುವೆ ಈ ಧಾರಾವಾಹಿ ಅರ್ಧಕ್ಕೆ ನಿಲ್ಲುತ್ತದೆ. ಹರ್ಷ ಭುವಿ ಮದುವೆಯ ಬಳಿಕ ಸೀರಿಯಲ್ ಎಂಡ್ ಆಗುತ್ತದೆ ಎಂಬ ಸುದ್ದಿ ಎಲ್ಲೆಡೆ ಹರಡಿದೆ. ಇದರಿಂದ ಅಭಿಮಾನಿಗಳು ಫುಲ್ ಬೇಸರದಲ್ಲಿದ್ದಾರೆ. 

ಕಳೆದೆರಡು ವರ್ಷ ದಿಂದ ಮೂಡಿ ಬರುತ್ತಿರುವ ಕನ್ನಡತಿ ಸೀರಿಯಲ್ ಇತರೆ ಧಾರಾವಾಹಿಗಳಿಗಿಂತಲೂ ಕೊಂಚ ಡಿಫರೆಂಟ್ ಆಗಿದೆ. ಇನ್ನು ಇತ್ತೀಚೆಗಷ್ಟೇ ಹರ್ಷ ಮಾತನಾಡಿ, ಕೇವಲ ಎಂಡಿಂಗ್ ಸಾಕಾ ಅಥವಾ ನಿಮಗೆ ಹ್ಯಾಪಿ ಎಂಡಿಂಗ್ ಬೇಕಾ.? ಸ್ವಲ್ಪ ದಿನ ಕಾಯಿರಿ ಎಂದು ವಿನಂತಿಸಿದ್ದರು. ಇದೇ ವೇಳೆಗೆ ಸೀರಿಯಲ್ ಎಂಡ್ ಆಗುತ್ತೆ ಎಂಬ ಮಾತನ್ನು ಕೇಳಿ ಬೇಸರಗೊಂಡಿದ್ದಾರೆ. ಆದರೆ ಕಲರ್ಸ್ ಕನ್ನಡ ವಾಹಿನಿ ಪ್ರತಿಕ್ರಯಿಸಿದ್ದು, ಸದ್ಯಕ್ಕಂತೂ ಧಾರಾವಾಹಿಯನ್ನು ಅಂತ್ಯಗೊಳಿಸುವುದಿಲ್ಲ ೆಂದು ಹೇಳಿದೆ. ಈ ಮಾತನ್ನು ಕೇಳಿ ಅಭಿಮಾನಿಗಳು ಸಮಾಧಾನ ಪಟ್ಟುಕೊಂಡಿದ್ದಾರೆ.