Prashanth Neel : ಕನ್ನಡಿಗರಿಂದ ಪ್ರಶಾಂತ್ ನೀಲ್ ಅವರಿಗೆ ಕ್ಲಾಸ್ ! ಖ್ಯಾತ ನಿರ್ದೇಶಕ ಮಾಡಿದ ತಪ್ಪಾದರೂ ಏನು ?

By Infoflick Correspondent

Updated:Wednesday, July 13, 2022, 10:38[IST]

Prashanth Neel : ಕನ್ನಡಿಗರಿಂದ ಪ್ರಶಾಂತ್ ನೀಲ್ ಅವರಿಗೆ ಕ್ಲಾಸ್  ! ಖ್ಯಾತ ನಿರ್ದೇಶಕ ಮಾಡಿದ ತಪ್ಪಾದರೂ ಏನು ?

ಕೆಜಿಎಫ್ ಮೂಲಕ ವಿಶ್ವದ ಗಮನ ಸೆಳೆದು, ಪ್ಯಾನ್ ಇಂಡಿಯಾ ನಿರ್ದೇಶಕನಾದ ಪ್ರಶಾಂತ್ ನೀಲ್‌ಗೆ ತೆಲುಗಿನಿಂದ ಸಾಕಷ್ಟು ಸಿನಿಮಾಗಳ ಆಫರ್ ಬಂದಿದೆ. ಕನ್ನಡದ ನಿರ್ದೇಶಕ ಈ ಮಟ್ಟಿಗೆ ಬೆಳೆದಿರುವುದು, ಕನ್ನಡಿಗರಿಗೆ ಖುಷಿಯ ವಿಚಾರವೆ ಆದರೆ ಇದೀಗ ಕನ್ನಡಿಗರು ಪ್ರಶಾಂತ್ ನೀಲ್ ಅವರಿಗೆ ಸ್ವಲ್ಪ ಮಟ್ಟಿಗೆ ತರಾಟೆ ತೆಗೆದುಕೊಳ್ಳುತ್ತಿದ್ದಾರೆ‌. ಇದೀಗ ಕನ್ನಡಿಗರು ಪ್ರಶಾಂತ್ ನೀಲ್‌ಗೆ ಕನ್ನಡ ಪಾಠ ಮಾಡುವ ಸಮಯ ಬಂದಿದೆ. ಕನ್ನಡವನ್ನು ಮರಿಬೇಡಿ ನೀಲ್ ಎನ್ನುತ್ತಿದ್ದಾರೆ ಕನ್ನಡಿಗರು.

KGF 2 ನಂತರ ಕನ್ನಡ ಸಿನಿಮಾ ಇಂಡಸ್ಟ್ರಿ ಜೊತೆಗೆ ಬೇರೆ ಭಾಷೆಗಳಲ್ಲೂ ಪ್ಯಾನ್ ಇಂಡಿಯನ್ ಲೆವೆಲಲ್ ನಲ್ಲಿ ಅಬ್ಬರಿಸಿದ ಸಿನಿಮಾ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ನಟನೆಯ ಚಾರ್ಲಿ 777 ಸಿನಿಮಾ. ಹಾಗೆಯೇ ತಮಿಳಿನ ಸಿನಿಮಾ ಕಮಲ್ ಹಾಸನ್ ನಟನೆಯ ವಿಕ್ರಮ್ ಸಿನಿಮಾ ಕೂಡ ಅದ್ಭುತ ಪ್ರದರ್ಶನವನ್ನೇ ಕಂಡಿದೆ.

ಪ್ರಶಾಂತ್ ನೀಲ್ ಅವರು ವಿಕ್ರಮ್  ಸಿನಿಮಾ ಬಗ್ಗೆ ರಿಯಾಕ್ಟ್ ಮಾಡಿದ್ದಾರೆ. ಇಡೀ ವಿಕ್ರಂ ಸಿನಿಮಾ ತಂಡಕ್ಕೆ ಶುಭಾಷಯಗಳು. ಕಮಲ್ ಹಾಸನ್, ವಿಜಯ್ ಸೇತುಪತಿ, ಫಹಾದ್ ಫಾಸಿಲ್ ಅವರನ್ನು ಒಟ್ಟಿಗೆ ನೋಡುವುದೇ ಹಬ್ಬ. ನಿರ್ದೇಶಕ ಲೋಕೇಶ್ ಕನಕರಾಜ್ ಕೆಲಸದ ಪರಿಗೆ ಅಭಿಮಾನಿ, ಸಂಗೀತ ನಿರ್ದೇಶಕ ಅನಿರುದ್ಧ್ ನೀವು ರಾಕ್ ಸ್ಟಾರ್, ನಮ್ಮ ಮಾಸ್ಟರ್ ಅನ್ಬರಿವು ಬಗ್ಗೆ ಬಹಳ ಹೆಮ್ಮೆ ಇದೆ. ಸೂರ್ಯ ಸರ್ ರೋಲೆಕ್ಸ್ ಪಾತ್ರ ಮರೆಯಲು ಸಾಧ್ಯವಿಲ್ಲ' ಎಂದಿದ್ದಾರೆ..

ಇದಕ್ಕೆ ಸಿಟ್ಟಾಗಿರುವ ಕನ್ನಡ ಟ್ವಿಟ್ಟರ್ ಬಳಕೆದಾರರು ವಿಕ್ರಂ ಸಿನಿಮಾ ನೋಡಿದ್ದ ತಪ್ಪಲ್ಲ,, ಆದ್ರೆ ಕನ್ನಡದಲ್ಲಿ ಇತ್ತೀಚೆಗೆ ರಿಲೀಸ್ ಆದ ರಕ್ಷಿತ್ ಶೆಟ್ಟಿ ಅಭಿನಯದ '777 ಚಾರ್ಲಿ' ಸಿನಿಮಾ ನೋಡಿಲ್ಲವೇ ಎಂದು ಪ್ರಶ್ನೆ ಮಾಡುತ್ತಿದ್ದಾರೆ.ಕನ್ನಡದ ' 777 ಚಾರ್ಲಿ' ಬಗ್ಗೆ ಯಾಕೆ ಪ್ರತಿಕ್ರಿಯಿಸಿಲ್ಲ ಎಂಬುದೇ ಕನ್ನಡಾಭಿಮಾನಿಗಳು ಪ್ರಶಾಂತ್ ನೀಲ್ ಅವರಿಗೆ ಕೇಳುತ್ತಿರುವ ಪ್ರಶ್ನೆ. ನೆಟ್ಟಿಗರು ಪ್ರಶಾಂತ್ ನೀಲ್ ಅವರಿಗೆ '777 ಚಾರ್ಲಿ ಸಿನಿಮಾ' ನೋಡುವಂತೆ ಕಮೆಂಟ್ ಗಳನ್ನ ಮಾಡ್ತಿದ್ದಾರೆ. ಪ್ರಶಾಂತ್ ನೀಲ್ ಕನ್ನಡಿಗರಾಗಿ ಕನ್ನಡದ ಚಾರ್ಲಿ777 ಉತ್ತಮ ಸಿನಿಮಾಕ್ಕೆ ಪ್ರತಿಕ್ರಿಯೆ ನೀಡದೆ ಇರಿವುದು ಹಲವರ ಕೆಂಗಣ್ಣಿಗೆ ಕಾರಣವಾಗಿದೆ.