ನಟ ಕರಿಬಸಯ್ಯ ಸಾವನ್ನಪ್ಪಿದ್ಫು ಹೇಗೆ ಗೊತ್ತಾ..? ಅಚ್ಚರಿ ತರಿಸುತ್ತೇ ಈ ನಿಜವಾದ ಸತ್ಯ..!

By Infoflick Correspondent

Updated:Friday, September 2, 2022, 18:05[IST]

ನಟ ಕರಿಬಸಯ್ಯ ಸಾವನ್ನಪ್ಪಿದ್ಫು ಹೇಗೆ ಗೊತ್ತಾ..? ಅಚ್ಚರಿ ತರಿಸುತ್ತೇ ಈ ನಿಜವಾದ ಸತ್ಯ..!


ಸ್ಯಾಂಡಲ್ ವುಡ್ದ ಖ್ಯಾತ ನಟರಲ್ಲಿ ನಟ ಕರಿಬಸಯ್ಯ ಅವರು ಕೂಡ ಒಬ್ಬರು. ಹೌದು ಕರಿಬಸಯ್ಯ ಕಾಮಿಡಿ ಪಾತ್ರಗಳಿಗೆ ಹೆಚ್ಚು ಹೆಸರಾದವರು. ಯಾವುದೇ ಪಾತ್ರ ಇದ್ದರೂ ಹಾಗೇ ನೋಡುವುದಕ್ಕೆ ಕಪ್ಪು ಬಣ್ಣ ಹೊಂದಿದ್ದರೂ ಕೂಡ ಅಭಿಮಾನಿಗಳ ಮನಸ್ಸಿನಲ್ಲಿ ಇಂದಿಗೂ ಕೂಡ ಉಳಿದಿದ್ದಾರೆ ಕರಿಬಸಯ್ಯ. ಅವರದ್ದೇ ಆದ ಸಖತ್ ಅಭಿನಯ ಹೊಂದಿ ಕನ್ನಡಿಗರ ಮನೆ ಮಾತಾಗಿ ಹೊರಹೊಮ್ಮಿದವರು. ನಟ ಕರಿಬಸಯ್ಯ ಈಗಾಗಲೇ ತೀರಿ ಹೋಗಿರುವ ವಿಚಾರ ನಿಮಗೂ ಗೊತ್ತು. ಇವರ ಸಾವು ನಿಜಕ್ಕೂ ಎಂತಹವರ ಕಣ್ಣಲ್ಲಿ ನೀರು ತರುತ್ತದೆ. ಒಂದೊಂದೇ ವಿಷಯ ತಿಳಿದರೆ ನಿಜಕ್ಕೂ ದೇವರು ಎಷ್ಟು ಕ್ರೂರಿ ಎಂದೆನಿಸುತ್ತದೆ.  ನಟ ಕರಿಬಸಯ್ಯ ಅವರು ಅಂದು ಲಕುಮಿ ಎನ್ನುವ ಸೀರಿಯಲ್ ಶೂಟಿಂಗ್ ಆಗಿ ರಾತ್ರಿ ವೇಳೆ ತೆರಳಿದ್ದರಂತೆ. ಅದು ಕಾರಿನಲ್ಲಿ ಎಂದು ಅವರ ಪತ್ನಿ ಇದೀಗ ಮಾಹಿತಿಯನ್ನು ಬಿಚ್ಚಿಟ್ಟಿದ್ದಾರೆ. 

ಹಾಗೆ ನಟ ಕರಿಬಸಯ್ಯ ಅವರ ಸಾವಿನ ನಿಗೂಢ ರಹಸ್ಯದ ಸಾವಿನ ಸುದ್ದಿ ಆ ಸತ್ಯವನ್ನು ಇದೀಗ ಎಲ್ಲರ ಮುಂದೆ ಬಿಚ್ಚಿಟ್ಟಿದ್ದಾರೆ. ನಟನ ಪತ್ನಿ. ಇದು ನಿಮಗೂ ಗೊತ್ತಾದರೆ ನೀವು ಕೂಡ ಅಚ್ಚರಿ ಪಡುತ್ತಿರಿ. ಹೌದು ಅವರು ಹೇಳುವ ಹಾಗೆ ನಟ ಕರಿಬಸಯ್ಯ ರಾತ್ರಿ ವೇಳೆ ಕಾರು ತೆಗೆದುಕೊಂಡು ಶೂಟಿಂಗ್ ಆಗಿ ತೆರಳಿದ್ದು ರಾತ್ರಿ 12:30 ಆದರೂ ಮನೆಗೆ ವಾಪಸ್ಸು ಬರದ ಕಾರಣಕ್ಕಾಗಿ ಇವರ ಪತ್ನಿ ಫೋನ್ ಮಾಡಿ ಕರಿಬಸಯ್ಯ ಅವರನ್ನ ವಿಚಾರಿಸಿದಾಗ ನಾನು ಮಲಗಿದ್ದೇನೆ ಕಾರಿನಲ್ಲಿ ಎಂದು ಹೇಳಿ,  ಬೆಳಗಿನ ಜಾವ ಬರುವುದಾಗಿ ಕರಿಬಸಯ್ಯ ಅವರು ಹೇಳಿದ್ದಾರೆ..ಆದರೆ ಬೆಳಗಿನ ಜಾವ ಅಪಘಾತ ಸಂಭವಿಸಿದೆ..ನಟ ಕರಿಬಸಯ್ಯ ಅವರು ಕನಕಪುರ ರಸ್ತೆಯ ಸೋಮನಹಳ್ಳಿ ಕೆರೆ ಬಳಿ ಯು ಟರ್ನ್ ತೆಗೆದುಕೊಳ್ಳುವಾಗ ಕಣ್ಣು ಇದ್ದಕ್ಕಿದ್ದಂತೆ ಮಂಜಾಗಿದ್ದು ಮುಂದೆ ಏನಾಯ್ತು ಎಂಬುದೇ ಗೊತ್ತಿಲ್ಲ ಎಂದು ಅವರ ಪತ್ನಿಯ ಬಳಿ ಅಪಘಾತ ನಡೆದ ಬಳಿಕ ಆಸ್ಪತ್ರೆಯಲ್ಲಿ ನಟ ಕರಿಬಸಯ್ಯ ಹೇಳಿದ್ದಾರೆ ಎಂದು ಹೇಳಲಾಗುತ್ತಿದೇ.

ಹಾಗೆ ಕೆರೆಗೆ ಬಿದ್ದಿದ್ದು ನಟ ಕರಿಬಸಯ್ಯ ಅವರನ್ನು ಲಾರಿಯ ಚಾಲಕ ತರಕಾರಿ ಮಾರುವವರು ಆಸ್ಪತ್ರೆಗೆ ಸೇರಿಸಿದ್ದಾರೆ 3ಎಂದು ಹೇಳಲಾಗುತ್ತಿದೆ. ನಟ ಕರಿಬಸಯ್ಯನವರ ಕಾರ್ ಕೆರೆಗೆ ಬೀಳುತ್ತಿದ್ದಂತೆ ಅವರಿಗೆ ಸ್ಪೈನಲ್ ಕಾರ್ಡ್ ಬೆನ್ನಿನ ಮೂಳೆಗೆ ಹೊಡೆತ ಬಿದ್ದು, ಅವರ ಎದೆಯವರೆಗೆ ಯಾವ ಸ್ಪರ್ಶ ಇರಲಿಲ್ಲ, ಕೇವಲ ಮಾತನಾಡುತ್ತಿದ್ದರು. ನಾಲ್ಕು ದಿನಗಳ ಕಾಲದ ಬಳಿಕ ಸಾವನ್ನಪ್ಪಿದ್ದರು ಎಂದು ಕಣ್ಣೀರು ಸುರಿಸಿದ್ದಾರೆ ಅವರ ಪತ್ನಿ. ಆದರೆ ಅಸಲಿ ಮಾಹಿತಿ ಬೇರೆ ಇದೆ..ಯೂಟ್ಯೂಬ್ ನಲ್ಲಿ ಈ ವಿಡಿಯೋ ನೋಡಿದ ಒಬ್ಬರು ಅವರಿಗೆ ಗೊತ್ತಿರುವ ನಟ ಕರಿಬಸಯ್ಯ ಅವರ ಸಾವಿನ ರೋಚಕ ಸುದ್ದಿಯನ್ನು ಈ ರೀತಿ ಬಿಚ್ಚಿಟ್ಟಿದ್ದಾರೆ ಮುಂದೆ ಓದಿ 

"ಕಾರು ಕೆರೆಗೆ ಬಿದ್ದಿರಲಿಲ್ಲ...ಅಪಘಾತ ಸ್ಥಳದಲ್ಲಿ ಅವರನ್ನ ಮೊದಲು ನೋಡಿದ ವ್ಯಕ್ತಿಗಳು ನಾನು ಮತ್ತು ನನ್ನ ಇಬ್ಬರು ಗೆಳೆಯರು....ಅಂದು ಸುಮಾರು ಬೆಳಿಗ್ಗಿನ ಜಾವ 4:30 ಇರಬಹುದು ನಾನು ನನ್ನ ಸ್ನೇಹಿತರು ಕಗ್ಗಲಿಪುರದ ಜಿಮ್ಗೆ ಹೋಗುತ್ತಿದ್ದೆವು ಬಿಎಂಟಿಸಿ ಬಸ್ಸಿನಲ್ಲಿ ಕನಕಪುರ ಮಾರ್ಗ ಸೋಮನಹಳ್ಳಿ  ಬಳಿಯ ಕೆರೆ ಬಳಿ ಹೋದಾಗ ಕೆರೆಯ ಬಲಬದಿಗೆ ಕೆರೆ ಏರಿಯ ಕೆಳಗೆ ಮುಳ್ಳು ಕುರುಚಲು ಬೇಲಿಯೊಳಗೆ ಯಾವುದೋ ವಾಹನ ಬಿದ್ದಿದೆ ಎಂದು ನಮ್ಮ ಡ್ರೈವರ್ ತಿಳಿಸಿದರು ನಾನು ನನ್ನ ಸ್ನೇಹಿತರು ಹೇಗೋ ಮುಳ್ಳುಗಳನ್ನು ಸರಿಸಿ ದಾರಿ ಮಾಡಿಕೊಂಡು ಕೆಳಗೆ ಇಳಿದೆವು ಸುಮಾರು ರಸ್ತೆ ಇಂದ ಕೆಳಗೆ 30 ಅಡಿ ಇರಬಹುದು ಕಪ್ಪು ಬಣ್ಣದ ಕಾರು...ಕೇವಲ ಒಂದು  ಪಾರ್ಕಿಂಗ್ ಲೈಟ್ ಮಾತ್ರ ಆನ್ ಇತ್ತು...ಒಳಗಿನಿಂದ ಯಾರೋ ನರಳುತ್ತಿದದ್ದು ನಮಗೆ ಕೇಳಿಸಿತು...ನುಜ್ಜು ಗುಜ್ಜಾಗಿದ್ದ ಕಾರಿನ ಬಾಗಿಲನ್ನು ಹೇಗೋ ತೆಗೆದು ಮೊಬೈಲ್ ಬೆಳಕಿನ ಸಹಾಯದಿಂದ ಒಳಗೆ ಇಣುಕಿದೆ ನೋಡಿದರೆ ನಂಬಲು ಸಾಧ್ಯ ವಾಗುತ್ತಿಲ್ಲ.

.. ನಮ್ಮ ಕಲಾವಿದ ಕರಿಬಸಯ್ಯ ನವರು. ಆಶ್ಚರ್ಯದ ಜೊತೆಗೆ ಭಯ...ಅವರ ಮುಖವೆಲ್ಲ ರಕ್ತವಾಗಿತ್ತು ಕಿವಿಯಿಂದ ರಕ್ತ ಸೋರುತ್ತಿತ್ತು...ನೀರು ಕೇಳಿದರು ಅಲ್ಲೇ ಇದ್ದ ಬಾಟಲಿಯಿಂದ ಕುದಿಸಿದೆವು....ಅವರ ಬಾಯಿಯಿಂದ ಕೇಳಿದ ಮಾತೆಂದರೆ "ನನಗೆ ಏನಾಗಿದೆ ಸರ್ ಎಂದು" ನಾವು ಅವರನ್ನು ಸಮಾಧಾನ ಪಡಿಸಿ ಕೆಳಗಿನಿಂದ ಮೇಲೆ ತರಲು ಹರಸಾಹಸ ಪಟ್ಟೆವು ಆಗಲಿಲ್ಲ ತುಂಬಾ ಮುಳ್ಳು ಬೇಲಿಗಳು...ನಂತರ ಯಾರೋ ರಸ್ತೆಯಲ್ಲಿ ಹೋಗುತ್ತಿದ್ದ ಮತ್ತೊಬ್ಬರ ಸಹಾಯದಿಂದ ಮೇಲೆ ತಂದು ಆಂಬುಲೆನ್ಸ್ ಗೆ ಕರೆಮಾಡಿ..ಹಾಕಿ ಕಳುಹಿಸಿದೆವು...ಎರಡು ದಿನದ ನಂತರ ಅವರು ತೀರಿಕೊಂಡ ಸುದ್ದಿ ಕೇಳಿ ತುಂಬಾ ನೋವಾಯಿತು...ಆ ದೃಶ್ಯ ಇನ್ನೂ ನನ್ನ ಕಣ್ಣ ಮುಂದೆ ಹಾಗೆ ಇದೆ ಇನ್ನೂ...." ಎಂದು ಹೇಳಿಕೊಳ್ಳುವ ಮೂಲಕ ನಟ ಕರಿಬಸಯ್ಯ ಅವರ ಸಾವಿನ ಸತ್ಯದ ಬಗ್ಗೆ ತಿಳಿಸಿದ್ದಾರೆ. ಏನೇ ಇರಲಿ ರಾತ್ರಿ ಹೊತ್ತು ಚಾಲನೆ ಮಾಡುವಾಗ ಆದಷ್ಟು ಹೆಚ್ಚು ಜಾಗರೂಕತೆಯಿಂದ ಇರಿ. ಮಾಹಿತಿಯನ್ನು ಶೇರ್ ಮಾಡಿ..