ಕನ್ನಡ ಚಿತ್ರರಂಗದ ಮತ್ತೊರ್ವ ನಿರ್ಮಾಪಕ ನಿಧನ! ಭಾರಿ ಅಪಘಾತದಲ್ಲಿ ದುರ್ಮರಣ

By Infoflick Correspondent

Updated:Sunday, May 15, 2022, 14:35[IST]

ಕನ್ನಡ ಚಿತ್ರರಂಗದ ಮತ್ತೊರ್ವ ನಿರ್ಮಾಪಕ ನಿಧನ! ಭಾರಿ ಅಪಘಾತದಲ್ಲಿ ದುರ್ಮರಣ

ಕನ್ನಡ ಚಿತ್ರರಂಗದಲ್ಲಿ ಹಲವು ಸಿನಿಮಾಗಳನ್ನು ನಿರ್ಮಾಣ ಮಾಡಿದ್ದ ಆನೇಕಲ್​ ಬಾಲರಾಜ್​ಅವರು ನಿಧನರಾಗಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ಅನೇಕಲ್​ ಬಾಲರಾಜ್​ ಅವರು ನಿರ್ಮಾಪಕನಾಗಿ ಗುರುತಿಸಿಕೊಂಡಿದ್ದರು. ಪ್ರೇಮ್​ ನಿರ್ದೇಶನದ 'ಕರಿಯಾ', ಶ್ರೀನಿವಾಸ್​ ಪ್ರಭು ನಿರ್ದೇಶನ ಮಾಡಿದ್ದ 'ಕರಿಯಾ 2', 'ಗಣಪ' ಸೇರಿದಂತೆ ಅನೇಕ ಸಿನಿಮಾಗಳನ್ನು ಆನೇಕಲ್​ ಬಾಲರಾಜ್​ ಅವರು ನಿರ್ಮಾಣ ಮಾಡಿದ್ದರು. 

ಬೆಂಗಳೂರಿನ ಜೆ.ಪಿ. ನಗರದಲ್ಲಿ ನಿರ್ಮಾಪಕ ಆನೇಕಲ್​ ಬಾಲರಾಜ್​(58) ಅವರು ನಿಧನರಾಗಿದ್ದಾರೆ. ಭಾನುವಾರ ಬೆಳಗ್ಗೆ ವಾಕಿಂಗ್​ಗೆ ತೆರಳಿದ್ದಾಗ ಸಂಭವಿಸಿದ ಅಪಘಾತದಲ್ಲಿ ಅವರು ಕೊನೆಯುಸಿರು ಎಳೆದಿದ್ದಾರೆ.     

ಭಾನುವಾರ (ಮೇ 15) ಬೆಳಗ್ಗೆ ಜೆ.ಪಿ. ನಗರದ ಅವರ ನಿವಾಸದ ಬಳಿ ವಾಕಿಂಗ್​ಗೆ ತೆರಳಿದ್ದಾಗ ಅಪಘಾತ ಸಂಭವಿಸಿದೆ. ಆನೇಕಲ್​ ಬಾಲರಾಜ್​ ಅವರು ವಾಕಿಂಗ್​ ಮಾಡಲು ತೆರಳುತ್ತಿದ್ದಾಗ ಅವರಿಗೆ ವಾಹನವೊಂದು ಡಿಕ್ಕಿ ಹೊಡೆಯಿತು. ಫುಟ್​ ಪಾತ್​ ಮೇಲೆ ಬಿದ್ದ ಅವರಿಗೆ ಗಂಭೀರವಾಗಿ ಪೆಟ್ಟಾಯಿತು. ನಂತರ ಅವರನ್ನು ಆಸ್ಪತ್ರೆಗೆ ದಾಖಲಿಸಿದರೂ ಕೂಡ ಚಿಕಿತ್ಸೆ ಫಲಕಾರಿ ಆಗದೇ ಅವರು ನಿಧನರಾಗಿದ್ದಾರೆ . 

ಆನೇಕಲ್ ಬಾಲರಾಜ್ ನಿಧನಕ್ಕೆ ಚಿತ್ರರಂಗದ ಗಣ್ಯರು ಸೇರಿಂದತೆ ಅನೇಕ ಕಲಾವಿದರುಗಳು ಸಂತಾಪ ಸೂಚಿಸಿದ್ದಾರೆ.