Kavitha Gowda : ಚಂದನ್ ಬೇಸರ ಮಾಡಿಕೊಂಡಾಗ ಕವಿತಾ ಚಿನ್ನು ಏನು ಕೊಡುತ್ತಾರೆ ಗೊತ್ತಾ..? ಇಲ್ನೋಡಿ ವಿಡೀಯೋ
Updated:Sunday, June 12, 2022, 08:52[IST]

ಕನ್ನಡ ಚಿತ್ರರಂಗದ ನಟ ಕಿರುತೆರೆಯಲ್ಲಿ ಹೆಚ್ಚು ಪ್ರಖ್ಯಾತಿ ಹೊಂದಿದ ಲಕ್ಷ್ಮಿ ಬಾರಮ್ಮ ಸೀರಿಯಲ್ ನ ನಟ ಚಂದನ್ ಮತ್ತು ಅದೇ ಸೀರಿಯಲ್ನ ಚಿನ್ನು ಖ್ಯಾತಿಯ ನಟಿ ಕವಿತಾ ಗೌಡ ಅವರು ಈಗಾಗಲೇ ದಂಪತಿಗಳಾಗಿದ್ದಾರೆ. ಕನ್ನಡ ಕಿರುತೆರೆಯಲ್ಲಿ ಹೊಸ ಸಂಚಲನ ಮೂಡಿಸಿದ್ದ ಈ ಜೋಡಿ ಸತಿಪತಿಗಳಾಗಿ ಸಂತೋಷದ ಜೀವನ ನಡೆಸುತ್ತಿದ್ದಾರೆ ಎಂದು ಹೇಳಬಹುದು. ನಟ ಚಂದನ್ ಆರಂಭದದಿನಗಳಲ್ಲಿ ಸೀರಿಯಲ್ ಗಳಲ್ಲಿ ಅಭಿನಯ ಮಾಡುತ್ತಿದ್ದರು. ಆನಂತರ ಸಿನಿಮಾ ಕಡೆ ಮುಖ ಮಾಡಿ ಅಲ್ಲಿ ಹೆಚ್ಚು ಯಶಸ್ಸು ಸಿಗದ ಕಾರಣಕ್ಕಾಗಿ ಇದೀಗ ಮತ್ತೆ ಧಾರವಾಹಿಗಳಲ್ಲಿ ಅಭಿನಯ ಮಾಡುತ್ತಿದ್ದಾರೆ. ಜೊತೆಗೆ ಒಂದು ಹೋಟೆಲ್ ಸಹ ಈ ಜೋಡಿ ನಡೆಸುತ್ತಿದೆ.
ನಟ ಚಂದನ್ ಹಾಗೂ ಅವರ ಪತ್ನಿ ನಟಿ ಕವಿತಾ ಗೌಡ ಅವರು ಸಾಮಾಜಿಕ ಜಾಲತಾಣದಲ್ಲಿ ತುಂಬಾನೇ ಸದ್ದು ಮಾಡುತ್ತಾರೆ. ಕೆಲವೊಂದಿಷ್ಟು ವಿಚಾರಗಳ ಫೋಟೋಗಳ ಮೂಲಕ ವಿಡಿಯೋಗಳ ಮೂಲಕ ಅಭಿಮಾನಿಗಳಿಗಾಗಿ ಸದಾ ಹಂಚುತ್ತಲೇ ಇರುತ್ತಾರೆ ಎನ್ನಬಹುದು. ಇದೀಗ ನಟ ಚಂದನ್ ಜೊತೆ ಇರುವ ಮತ್ತೊಂದು ವಿಡಿಯೋವನ್ನು ಹಂಚಿಕೊಂಡಿರುವ ನಟಿ ಕವಿತಾ ಗೌಡ ಅವರು ಚಂದನ್ ಯಾವಾಗ ಯಾವುದಾದರೂ ಒಂದು ವಿಷಯಕ್ಕೆ ಹೆಚ್ಚು ಬೇಸರ ಮಾಡಿಕೊಂಡಾಗ ತಾವೇನು ಮಾಡುತ್ತಾರೆ ಎಂದು ಕವಿತಾ ಅವರು ವಿಡಿಯೋವೊಂದರ ಮೂಲಕವೇ ತೋರಿಸಿದ್ದಾರೆ.
ಚಂದನ್ ತುಂಬಾ ಬೇಸರಪಟ್ಟುಕೊಂಡು ನಾನು ಏನು ಮಾಡುತ್ತೇನೆ ಎಂದು ಚಿನ್ನು ಅವರ ಪ್ರೀತಿಯ ವಿಡಿಯೋ ಮೂಲಕ ಹೀಗೆ ತೋರಿಸಿದ್ದಾರೆ.
ಅಸಲಿಗೆ ಚಿನ್ನು ಕವಿತಾ ಗೌಡ ಗೆ ಈ ವಿಡಿಯೋದಲ್ಲಿ ನಟ ಚಂದನ್ ಗೆ ಮುತ್ತಿನ ಮಳೆ ಹರಿಸಿ ಐ ಲವ್ ಯು ಚಂದನ್ ಎಂದು ಹೇಳಿದ್ದಾರೆ. ಈ ವಿಡಿಯೋ ನೋಡಿದ ನೆಟ್ಟಿಗರು ಅಭಿಮಾನಿಗಳು ಸಖತ್ ಖುಷಿಯಾಗಿದ್ದು ವಿಡಿಯೋವನ್ನು ಹೆಚ್ಚು ಶೇರ್ ಮಾಡುತ್ತಿದ್ದಾರೆ ಎನ್ನಲಾಗಿದೆ. ಜೊತೆಗೆ ನಿಮ್ಮ ಜೋಡಿ ಹೀಗೆ ಇರಲಿ ಎಂದು ಹೇಳುತ್ತಿದ್ದಾರೆ. ನೀವು ಕೂಡ ಒಂದು ಬಾರಿ ನಟ ಚಂದನ್ ಚಿನ್ನು ವಿಡಿಯೋ ಒಂದುಬಾರಿ ನೋಡಿ. ವಿಡಿಯೋ ಇಷ್ಟವಾದಲ್ಲಿ ಶೇರ್ ಮಾಡಿ ಧನ್ಯವಾದ.