Kavitha Gowda : ಕವಿತಾ ಗೌಡ ಅವರನ್ನು ಮಂಚಕ್ಕೆ ಕರೆದಿದ್ದ ಈ ನಿರ್ಮಾಪಕ! ಕಿರುತೆರೆಯ ಕರಾಳ ಮುಖ ತೆರೆದಿಟ್ಟ ಕವಿತಾ ಗೌಡ

By Infoflick Correspondent

Updated:Saturday, September 3, 2022, 20:01[IST]

Kavitha Gowda : ಕವಿತಾ ಗೌಡ ಅವರನ್ನು ಮಂಚಕ್ಕೆ ಕರೆದಿದ್ದ ಈ ನಿರ್ಮಾಪಕ!  ಕಿರುತೆರೆಯ ಕರಾಳ ಮುಖ ತೆರೆದಿಟ್ಟ  ಕವಿತಾ ಗೌಡ

ಕಿರುತೆರೆ ಲೋಕದಲ್ಲಿ ತಮ್ಮದೇ ಆದ ಚಾಪನ್ನು ಮೂಡಿಸಿರುವ ನಟಿ ಕವಿತಾ ಗೌಡ ಅಲಿಯಾಸ್ ಚಿನ್ನು ಕವಿತಾ ಗೌಡ ಕನ್ನಡದಲ್ಲಿ ಮಾತ್ರವಲ್ಲದೆ ತೆಲುಗು ಕಿರುತೆರೆಯಲ್ಲಿಯೂ ಕೂಡ ನಟಿಸಿದ್ದಾರೆ., ತಮಗೆ ಸಿನಿಮಾರಂಗದಲ್ಲಿ ಆಗಿರುವಂತಹ ಕೆಟ್ಟ ಅನುಭವವನ್ನು ಹಂಚಿಕೊಂಡಿದ್ದಾರೆ. 

ಸಿನಿಮಾದಲ್ಲಿ ಅವಕಾಶಗಳು ಸಿಗಬೇಕು ಅಂದ್ರೆ ಎಷ್ಟು ಕಷ್ಟಪಡಬೇಕಾಗುತ್ತದೆ ಅಂತ ತಮ್ಮ ಕೆಟ್ಟ ಅನುಭವವನ್ನು ಹೇಳಿಕೊಂಡಿದ್ದಾರೆ ಕವಿತಾ ಗೌಡ. ದೊಡ್ಡ ನಿರ್ಮಾಪಕರ ಮ್ಯಾನೇಜರ್ ಒಬ್ಬರು ತಾನು ಇರುವ ಚಿತ್ರೀಕರಣದ ಸೆಟ್ ಗೆ ಬಂದು ಮಾತನಾಡಿದರು. ನೇರವಾಗಿ ನಮ್ಮ ನಿರ್ಮಾಪಕರು ನಿಮ್ಮಿಂದ ಬೇರೇನೋ ಎಕ್ಸ್ಪೆಕ್ಟ್ ಮಾಡುತ್ತಿದ್ದಾರೆ ಅಂತ ಹೇಳಿದರು. ನಾನು ಮರ್ಯಾದೆಯಿಂದ ಇಲ್ಲಿ ಎದ್ದು ಹೋಗಿ ಇಲ್ಲವಾದರೆ ಲೈಟ್ ಬಾಯ್ಸ್ ಕರೆಸಿ ಹೊಡಿಸುತ್ತೇನೆ ಎಂದಿದ್ದೆ.

ಇದೇ ರೀತಿ ಇನ್ನೊಂದು ಅನುಭವ ಕೂಡ ಆಗಿತ್ತು. ನಿರ್ಮಾಪಕರು ಒಬ್ಬರು ಸಿನಿಮಾ ಬಗ್ಗೆ ಮಾತನಾಡಲು ಹೋಟೆಲ್ ಒಂದಕ್ಕೆ ಬರಲು ತಿಳಿಸಿದರು ನಾನು ಹೋದೆ ಆದರೆ ಅಲ್ಲಿ ನಿರ್ಮಾಪಕರ ಹೊರತುಪಡಿಸಿ ಬೇರೆ ಯಾರು ಇರಲಿಲ್ಲ. ಕಥೆ ಹೇಳುವವರು ಇರಲಿಲ್ಲ ನಿರ್ದೇಶಕರು ನಟ ಯಾರು ಇರಲಿಲ್ಲ ಅಲ್ಲದೇ ನನಗೆ ಕುಡಿಯಲು ಏನಾದರೂ ಬೇಕಾ ಅಂತ ಆಫರ್ ಮಾಡಿದ್ರು. ನಾನು ಕೂಡಲೇ ಅಲ್ಲಿಂದ ಹಿಂತಿರುಗಿದೆ. ಎಂದು ತನ್ನ ಅನುಭವವನ್ನು ಹಂಚಿಕೊಂಡಿದ್ದಾರೆ ಕವಿತಾ ಗೌಡ. ಕವಿತಾ ಗೌಡ ಮಾತನಾಡಿದ ಈ ಆಡಿಯೋ ಕ್ಲಿಪ್ ವೈರಲ್ ಆಗಿದೆ.( video credit : Rathi tv kannada )