Kavya shah : ಕಾವ್ಯ ಷಾ ಅವರ ತಂದೆ ಯಾರು ನೋಡಿ..! ಅವರು ಸಹ ಕನ್ನಡದ ಖ್ಯಾತ ನಟ..!

By Infoflick Correspondent

Updated:Thursday, September 1, 2022, 13:00[IST]

Kavya shah :  ಕಾವ್ಯ ಷಾ ಅವರ ತಂದೆ ಯಾರು ನೋಡಿ..! ಅವರು ಸಹ ಕನ್ನಡದ ಖ್ಯಾತ ನಟ..!

ಕಾವ್ಯ ಷಾ ಹೌದು ಇವರು ಪ್ರಸಿದ್ಧ ನಟ ನಾಗೇಂದ್ರ ಷಾ ಅವರ ಪುತ್ರಿ, ಕಾವ್ಯಾ ಷಾ ಅವರು ಭಾರತೀಯ ಚಲನಚಿತ್ರ ನಟಿಯಾಗಿ ಹೆಚ್ಚು ಗುರುತಿಸಿಕೊಂಡಿರುವ ಕಲಾವಿದೆ. ಹಾಗೆ ನಮ್ಮ ಕನ್ನಡ ಚಲನಚಿತ್ರೋದ್ಯಮದಲ್ಲೇ ಕೆಲಸವನ್ನು ಮಾಡುತ್ತಿರುವುದು.. ಆರಂಭದಲ್ಲಿ, ಅವರು ಮಿಸ್ಟರ್ & ಮಿಸೆಸ್ ರಾಮಾಚಾರಿ (2014), ಚಕ್ರವ್ಯೂಹ (2016), ಮುಕುಂದ ಮುರಾರಿ (2016), ತಾರೈ ಥಪ್ಪಟ್ಟೈ (2016) ಸೇರಿದಂತೆ ಕೆಲವು ಚಿತ್ರಗಳಲ್ಲಿ ಪೋಷಕ ಪಾತ್ರಗಳನ್ನು ನಿರ್ವಹಿಸಿದ್ದಾರೆ ಎಂದು ಹೇಳಬಹುದು. ನಟಿ ಕಾವ್ಯ ಷಾ ಅವರು ನಟ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಮಿಸ್ಟರ್ ಅಂಡ್ ಮಿಸಸ್ ರಾಮಚಾರಿ ಚಿತ್ರದಲ್ಲಿ ಸಹಾಯಕ ಪಾತ್ರ ಮಾಡಿ ಎಲ್ಲರ ಗಮನ ಸೆಳೆದ ನಟಿ.  

ಅವರ ಅತ್ಯದ್ಭುತ ಅಭಿನಯದ ಮೂಲಕ ಅವರು ಹೆಚ್ಚು ಅಭಿಮಾನಿ ಬಳಗವನ್ನು ಸಹ ಹೊಂದಿದ್ದಾರೆ. ಇದೀಗ ನಟಿ ಕಿರುತೆರೆಯಲ್ಲೂ ಕೂಡ ಹೆಚ್ಚು ಸಕ್ರಿಯ ಆಗಿರುವುದು ನಿಜ ಅವರ ಅಭಿಮಾನಿ ಬಳಗದವರಿಗೆ ಖುಷಿಯ ವಿಚಾರ. ಈಗ ನಾವು ನೀವು ನೋಡುತ್ತಿರುವ ಹಾಗೆ ಕನ್ನಡ ಕಿರುತೆರೆಯಲ್ಲಿ ಸಾಮಾನ್ಯವಾಗಿ ಯಾವುದೇ ಹಬ್ಬ ಹರಿದಿನಗಳು ಬರಲಿ ಕಾರ್ಯಕ್ರಮವನ್ನು ಕೆಲ ಸೀರಿಯಲ್ ತಂಡಗಳ ಜೊತೆ ಒಟ್ಟಾಗಿ ಸೇರಿ ಆಯಾ ಹಬ್ಬವನ್ನು ಆಚರಿಸುವುದು ಹೆಚ್ಚು ಮಾಮೂಲಿ ಆಗಿದೆ. ಅದೇ ರೀತಿ ಗಣೇಶೋತ್ಸವ ಎನ್ನುವ ಕಾರ್ಯಕ್ರಮವನ್ನ ಈ ಬಾರಿ ಗಣೇಶ ಹಬ್ಬದ ಪ್ರಯುಕ್ತ ಜೀ ಕನ್ನಡ ವಾಹಿನಿಯವರು ಹಮ್ಮಿಕೊಂಡಿದ್ದರು. ಹೌದು ಪಾರು ಸೀರಿಯಲ್ ನಲ್ಲಿ ನಟಿಸುತ್ತಿರುವ ಹನುಮಂತು ಖ್ಯಾತಿಯ ನಟ ನಾಗೇಂದ್ರ ಅವರೇ ನಟಿ ಕಾವ್ಯ ಷಾ ಅವರ ಸ್ವಂತ ತಂದೆ ಎಂದು ತಿಳಿದುಬಂದಿದೆ.

ಈ ಬಗ್ಗೆ ನಿರೂಪಕಿ ಅನುಶ್ರೀಯವರು ಕೇಳಿದ್ದು ನೀವು ನಿಮ್ಮ ಮಗಳನ್ನು ಎಷ್ಟು ಪ್ರೀತಿ ಮಾಡುತ್ತೀರಿ ಎಂದಾಗ, ಅವರು ಮಗಳ ಬಗ್ಗೆ ತುಂಬಾ ಬೆಟ್ಟದಂತೆ ಮಾತನಾಡಿದರು. ನಂತರ ಅವರೇ ಕಣ್ಣೆದುರು ಕಾವ್ಯಾ ಷಾ ಅವರೇ ಬಂದಾಗ ಮೂಕ ವಿಸ್ಮಿತರಾದರು ನಟ ನಾಗೇಂದ್ರ ಅವರು. ನಟಿ ಕಾವ್ಯ ಷಾ ಅವರು ಇತ್ತೀಚಿಗೆ ಮದುವೆಯಾಗಿದ್ದಾರೆ. ಹಾಗೆ ಕಾವ್ಯಾ ಅವರ ತಾಯಿ ತೀರಿ ಹೋಗಿ ಕೇವಲ ಎಂಟು ತಿಂಗಳಾಗಿದೆ ಮದುವೆಯಾದ ಎರಡು ತಿಂಗಳಗಳಲ್ಲಿ ತಾಯಿಯ ಬೆಲೆ ಏನು ಎಂಬುದಾಗಿ ಕಾವ್ಯಾ ಅವರಿಗೆ ಗೊತ್ತಾಗಿದೆಯಂತೆ. ಮದುವೆ ಆದ ಹೊಸತನದಲ್ಲಿ ಮೊದಲ ಹಬ್ಬ ಗಣೇಶ ಉತ್ಸವ ಆಗಿದ್ದು ಈ ಸಂದರ್ಭದಲ್ಲಿ ತಮ್ಮ ತಾಯಿಯನ್ನು ಎಷ್ಟು ಮಿಸ್ ಮಾಡಿಕೊಳ್ಳುತ್ತಿದ್ದಾರೆ ಎಂಬುದಾಗಿ ವೇದಿಕೆ ಮೇಲೆ ತಾಯಿ ನೆನೆದು ಕಣ್ಣೀರು ಹಾಕಿದರು. ಇಲ್ಲಿದೆ ನೋಡಿ ವಿಡಿಯೋ, ಹಾಗೆ ನಟಿ ಕಾವ್ಯ ಷಾ ಅವರ ತಂದೆ ಹೇಗಿದ್ದಾರೆ ಎಂಬುದಾಗಿ ತಿಳಿದುಕೊಳ್ಳಿ ಧನ್ಯವಾದಗಳು... ( VIDEO CREDIT : ZEE KANNADA )