ಖ್ಯಾತ ನಿರ್ಮಾಪಕನ ಕಳೆದುಕೊಂಡ ಕನ್ನಡ ಚಿತ್ರರಂಗ!ಕಣ್ಣೀರಲ್ಲಿ ಕುಟುಂಬ

Updated: Monday, June 14, 2021, 19:38 [IST]

    

ಹೌದು ನಮ್ಮ ಕನ್ನಡ ಚಿತ್ರರಂಗದ ಹಿರಿಯ ಖ್ಯಾತ ನಿರ್ಮಾಪಕರಾದ ಕೆಸಿಎನ್ ಚಂದ್ರಶೇಖರ್ ಅವರು (69) ನಿಧನರಾಗಿದ್ದಾರೆ ಎಂದು ಇಂದು ಮಾಧ್ಯಮ ಮೂಲಕ ತಿಳಿದುಬಂದಿದೆ. ಹೌದು ಚಂದ್ರಶೇಖರ್ ಅವ್ರಿಗೆ ಅಷ್ಟಕ್ಕೂ ಆಗಿದ್ದೇನು ನೋಡಿ. ಇವರು ಬಹು ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದರಂತೆ. ಅದೇ ಕಾರಣಕ್ಕೆ ಚಂದ್ರಶೇಖರ್ ಅವ್ರನ್ನ ಖಾಸಗಿ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಲಾಗುತಿತ್ತು. ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ ಎಂದು ಕೇಳಿ ಬಂದಿದೆ..   

 

ಹೌದು ಇವರು ಡಾ. ರಾಜ್ ಕುಮಾರ್ ಅಭಿನಯದ ಹುಲಿ ಹಾಲಿನ ಮೇವು, ಹಾಗೂ ಖ್ಯಾತ ಸಿನಿಮಾವಾದ ಬಬ್ರುವಾಹನ ಸೇರಿದಂತೆ ಇನ್ನೂ ಅನೇಕ ಸಿನಿಮಾಗಳನ್ನ ನಿರ್ಮಾಣ ಮಾಡಿದ್ದರು. ಜೊತೆಗೆ ಇದೆ ಚಂದ್ರಶೇಖರ್ ಅವರು, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷರಾಗಿಯೂ ಸಹ ಆಯ್ಕೆ ಆಗಿದ್ದರು. ಇದೀಗ ನಿಧನರಾಗಿದ್ದಾರೆ ಈ ವಿಷಯ ತಿಳಿದು ಸಾಕಷ್ಟು ಸಿನಿಮಾ ಗಣ್ಯರು ಸಂತಾಪ ಸೂಚಿಸಿದ್ದಾರೆ.

ಹೌದು ಬೆಂಗಳೂರಿನ ಶಿವಾನಂದ ಸರ್ಕಲ್ ಬಳಿ ಇರುವ  ನಿವಾಸದಲ್ಲಿ, ಇಂದು ಬೆಳಿಗ್ಗೆ 9 ಗಂಟೆಯಿಂದ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ ಎಂದು ಕೇಳಿ ಬಂದಿದೆ. ನೀವು ಇವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಕಾಮೆಂಟ್ ಮಾಡಿ ಹೇಳಿ, ಜೊತೆಗೆ ತಪ್ಪದೆ ಮಾಹಿತಿ ಶೇರ್ ಮಾಡಿ...