Keerthy Suresh About KGF 2 : ಯಶ್ ಅವರ ಬಗ್ಗೆ ಕೇಳಿದಾಗ ನಟಿ ಕೀರ್ತಿ ಸುರೇಶ್ ಪ್ರತಿಕ್ರಿಯೆ ಹೇಗಿತ್ತು ಗೊತ್ತಾ..? ಈಗ ಬಯಲು

By Infoflick Correspondent

Updated:Wednesday, April 27, 2022, 14:53[IST]

Keerthy Suresh About KGF 2 : ಯಶ್ ಅವರ ಬಗ್ಗೆ ಕೇಳಿದಾಗ ನಟಿ ಕೀರ್ತಿ ಸುರೇಶ್ ಪ್ರತಿಕ್ರಿಯೆ ಹೇಗಿತ್ತು ಗೊತ್ತಾ..? ಈಗ ಬಯಲು

ದಕ್ಷಿಣ ಭಾರತ ಸಿನಿಮಾ ರಂಗದಲ್ಲಿ ಸಾಕಷ್ಟು ನಟಿಯರು ಈಗಾಗಲೇ ದೊಡ್ಡ ಮಟ್ಟದಲ್ಲಿ ಹೆಸರು ಮಾಡಿದ್ದಾರೆ. ಹೌದು ಅಂತಹವರ ಸಾಲಿನಲ್ಲಿ ಬರುವ ನಟಿ ಕೀರ್ತಿ ಸುರೇಶ್ ಅವರು ಸಹ ಒಬ್ಬರಾಗಿದ್ದು ಸೋಶಿಯಲ್ ಮೀಡಿಯಾದಲ್ಲಿ ಹೆಚ್ಚು ಆಕ್ಟಿವ್ ಇರುತ್ತಾರೆ. ಅಭಿಮಾನಿಗಳ ಜೊತೆ ಆಗಾಗ ಹೆಚ್ಚು ಸಂವೆಂದನೆ ನಡೆಸುತ್ತಾರೆ. ಆಗಾಗ ಲೈವ್ ಮೂಲಕ ಬಂದು ಸಾಮಾಜಿಕ ಜಾಲತಾಣದಲ್ಲಿ ಅವರ ಅಭಿಮಾನಿ ಬಳಗದವರು ಕೇಳುವ ಕೆಲವೊಂದಿಷ್ಟು ಪ್ರಶ್ನೆಗಳಿಗೆ ಉತ್ತರ ನೀಡುತ್ತಾರೆ. ಅಭಿಮಾನಿಗಳ ಜೊತೆ ಮಾತನಾಡುತ್ತಾರೆ. ಹೌದು ಕೀರ್ತಿ ಸುರೇಶ್ ಅವರು ತೆಲುಗಿನ ನಟಿ ಆಗಿದ್ದು, ಸಾಕಷ್ಟು ಹಿಟ್ ಸಿನಿಮಾಗಳಲ್ಲಿ ಅಭಿನಯ ಮಾಡಿದ್ದಾರೆ.

ಹಾಗೆ ಕೀರ್ತಿ ಸುರೇಶ್ ಅವರ ಅಪಾರ ಅಭಿಮಾನಿ ಬಳಗಕ್ಕೆ ಅವರ ನಟನೆ ಸಾಕ್ಷಿ ಎನ್ನಬಹುದು. ಕೀರ್ತಿ ಸುರೇಶ್ ಅವರು ಇದೀಗ ಸುದ್ದಿಯಲ್ಲಿರುವುದು ಅವರ ಮದುವೆ ವಿಚಾರದಲ್ಲಿ. ಕೀರ್ತಿ ಸುರೇಶ್ ಅವರು ಯಾರನ್ನು ಮದುವೆಯಾಗುತ್ತಾರೆ, ಯಾವಾಗ ಮದುವೆ ಆಗುತ್ತಾರೆಂದು ಸದಾ ಅವರ ಪ್ರೀತಿಯ ಅಭಿಮಾನಿಗಳು ಕೇಳುತ್ತಲೇ ಇರುತ್ತಾರೆ.. ಕೀರ್ತಿ ಸುರೇಶ್ ಅವರದ್ದು. 

ಇದು ಎರಡನೇ ಬಾರಿ ಅವರ ಮದುವೆ ಸುದ್ದಿ ಹೆಚ್ಚಾಗುತ್ತಿರುವುದು. ಕೀರ್ತಿ ಸುರೇಶ್ ಅವರು ಸಂಗೀತ ನಿರ್ದೇಶಕ ಅನಿರುದ್ಧ್ ಎಂಬುವರ ಜೊತೆ ಪ್ರೀತಿಯಲ್ಲಿ ಇದ್ದಾರೆ ಎಂದು ಕಳೆದ ಕೆಲವು ದಿನಗಳಿಂದ ಕೇಳಿ ಬರುತ್ತಿದ್ದು ಅವರ ಪ್ರೀತಿ ವಿಚಾರಗಳು ಟಾಲಿವುಡ್ ಅಂಗಳದಲ್ಲಿ ಸದ್ದು ಮಾಡುತ್ತಿದೆ. ಹಾಗೆ ಅವರ ಅಭಿಮಾನಿಗಳು ಸದಾ ಹೆಚ್ಚು ಚರ್ಚೆಯಲ್ಲೇ ಇರುತ್ತಾರೆ ಎನ್ನಬಹುದು.  

ಜೊತೆಗೆ ಇದೇ ವರ್ಷ ಕೊನೆಯಲ್ಲಿ ಕೀರ್ತಿ ಸುರೇಶ್ ಅವರು ಮದುವೆ ಆದರೂ ಆಗಬಹುದು ಎಂದು ಹೇಳುತ್ತಾರೆ.ಆದರೆ ಈ ಬಗ್ಗೆ ಅಧಿಕೃತವಾಗಿ ಯಾವ ಮಾಹಿತಿ ಸಹ ಹೊರಬಿದ್ದಿಲ್ಲ. ಇದೀಗ ಕೆಜಿಎಫ್ ನಟ ಯಶ್ ಅವರ ಬಗ್ಗೆ ಕೀರ್ತಿ ಸುರೇಶ್ ಅವರನ್ನ ಪ್ರಶ್ನೆ ಮಾಡಿದಾಗ, ಕೀರ್ತಿ ಸುರೇಶ್ ಹೇಳಿದ್ದಿಷ್ಟು.  'ಕನ್ನಡ ಚಿತ್ರರಂಗದ ಪ್ರತಿಭಾನ್ವಿತ ನಟರಲ್ಲಿ ನಟ ಯಶ್ ಅವರು ಕೂಡ ಒಬ್ಬರು. ಅವರ ಜೊತೆ ನಟನೆ ಮಾಡುವ ಅವಕಾಶ ಬಂದರೆ ಖಂಡಿತ ನಟಿಸುತ್ತೇನೆ' ಎಂದಿದ್ದಾರೆ ಕೀರ್ತಿ ಸುರೇಶ್ ಎಂದು ತಿಳಿದುಬಂದಿದೆ. ಇದೀಗ ಪ್ಯಾನ್ ಇಂಡಿಯಾ ಸ್ಟಾರ್ ಆಗಿರುವ ನಟ ಯಶ್ ಅವರ ಜೊತೆ ಮುಂದಿನ ದಿನಗಳಲ್ಲಿ ನಟಿ ಕೀರ್ತಿ ಸುರೇಶ್ ಅವರಿಗೆ ನಟನೆ ಮಾಡಲು ಅವಕಾಶ ಸಿಗಲಿ ಎಂದು ನೀವು  ಕಾಮೆಂಟ್ ಮಾಡಿ ಧನ್ಯವಾದ..