ಈ ಕಥೆಯ ಮೂಲಕ ಅಭಿಮಾನಿಗಳಿಗೆ ಧನ್ಯವಾದ ಹೇಳಿದ ಯಶ್ ಆದರೆ ಕೆಲ ಜನರ ಬೇಸರ ಏನು ?
Updated:Friday, April 22, 2022, 09:21[IST]

ಕೆಜಿಎಫ್-2' ಸಿನಿಮಾಗೆ ಸಿಕ್ಕಿರುವ ಭರ್ಜರಿ ಯಶಸ್ಸಿಗೆ ರಾಕಿಂಗ್ ಸ್ಟಾರ್ ಯಶ್ ಅಭಿಮಾನಿಗಳಿಗೆ ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋ ಹಂಚಿಕೊಳ್ಳುವ ಮೂಲಕ ಧನ್ಯವಾದ ಸಲ್ಲಿಸಿದ್ದಾರೆ. ತಾವು ಕಂಡ ಕನಸು ಹೇಗೆ ನನಸಾಯಿತು ಎಂಬುದನ್ನು ಅವರು ಆ ವಿಡಿಯೋದಲ್ಲಿ ತಿಳಿಸಿದ್ದಾರೆ. ಈ ಯಶಸ್ಸಿಗೆ ಕಾರಣರಾದ ಪ್ರತಿಯೊಬ್ಬರೂ ತಾವು ಧನ್ಯವಾದ ತಿಳಿಸುವುದಾಗಿ ಯಶ್ ಹೇಳಿಕೊಂಡಿದ್ದಾರೆ.
ಕೆಜಿಎಫ್-2' ಚಿತ್ರದ ಯಶಸ್ಸಿಗೆ ನಾನು ಎಷ್ಟು ದೊಡ್ಡ ಥ್ಯಾಂಕ್ಸ್ ಹೇಳಿದ್ರೂ ಅದು ಕಡಿಮೆಯೇ ಎಂದು ಯಶ್ ವಿಡಿಯೋದಲ್ಲಿ ಹೇಳಿದ್ದಾರೆ. ಪುಟ್ಟ ಕಥೆಯ ಮೂಲಕ ಅವರು ಕೆಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ.
ಒಂದು ಊರು. ಅಲ್ಲಿ ಬರಗಾಲದ ಪರಿಸ್ಥಿತಿ ನಿರ್ಮಾಣವಾಗಿತ್ತು. ಮಳೆಗಾಗಿ ಪ್ರಾರ್ಥನೆ ಮಾಡೋಕೆ ಊರಿನ ಜನ ನಿರ್ಧರಿಸಿದರು. ಅಲ್ಲಿ ಬಂದ ಹುಡುಗ ಮಳೆ ಬಂದು ಬಿಟ್ಟರೆ ಎಂದು ಕೊಡೆ ಹಿಡಿದ ಬಂದಿದ್ದ. ಅನೇಕರು ಇದನ್ನು ಹುಚ್ಚುತನ ಎಂದರು, ಇನ್ನೂ ಕೆಲವರು ಓವರ್ ಕಾನ್ಫಿಡೆನ್ಸ್ ಎಂದರು. ಆದರೆ, ಅದೇನು ಗೊತ್ತಾ? ಅದು ನಂಬಿಕೆ' ಎಂದು ಮಾತು ಆರಂಭಿಸಿದ್ದಾರೆ ಯಶ್.
ನಾನು ಆ ಹುಡುಗನಂತೆ. ಈ ದಿನ ಬರುತ್ತದೆ ಎಂದು ನಂಬಿಕೆ ಇಟ್ಟು ಕೂತಿದ್ದ ಬಾಲಕ ನಾನು. ಈಗ ಥ್ಯಾಂಕ್ಸ್ ಅನ್ನೋದು ಸಾಕಾಗುವುದಿಲ್ಲ. ಈ ರೀತಿಯ ಪ್ರೀತಿ ತೋರಿದ್ದಕ್ಕೆ ನನ್ನ ಹೃದಯದಾಳದಿಂದ ಎಲ್ಲರಿಗೂ ಧನ್ಯವಾದ ಹೇಳುತ್ತೇನೆ. ನಮಗೆ ಖುಷಿಯಾಗಿದೆ ಎಂಬುದನ್ನು 'ಕೆಜಿಎಫ್' ತಂಡದ ಪರವಾಗಿ ನಾನು ಹೇಳುತ್ತಿದ್ದೇನೆ. ನಿಮ್ಮ ಹೃದಯವೇ ನನ್ನ ಟೆರಿಟರಿ' ಎಂದಿದ್ದಾರೆ ಯಶ್.
ಈ ವಿಡಿಯೋದಲ್ಲಿ ಅವರು ಇಂಗ್ಲಿಷ್ನಲ್ಲಿ ಮಾತನಾಡಿದ್ದು ಕೆಲವರ ಕೆಂಗಣ್ಣಿಗೆ ಗುರಿಯಾಗಿದೆ. ಕನ್ನಡದ ಬದಲು ಇಂಗ್ಲಿಷ್ ಭಾಷೆ ಬಳಸಿದ್ದಕ್ಕೆ ಯಶ್ ಅವರನ್ನು ಟ್ರೋಲ್ ಮಾಡಲಾಗುತ್ತಿದೆ. ಕೆಲವರು ನ್ಯಾಷನಲ್ ಸ್ಟಾರ್ ತಕ್ಷಣ ಯಶ್ ಕನ್ನಡವನ್ನೇ ಮರೆತುಬಿಟ್ರಾ ಅಂತಾ ಕಾಮೆಂಟ್ ಮಾಡಿದ್ದಾರೆ. ಇನ್ನು ಕೆಲವರು ಅವರು ನ್ಯಾಷನಲ್ ಸ್ಟಾರ್ ಆಗಿರುವುದರಿಂದ ವಿವಿಧ ರಾಜ್ಯಗಳಲ್ಲಿ ಬೇರೆ ಬೇರೆ ಭಾಷೆ ಮಾತನಾಡುವ ಕೋಟ್ಯಂತರ ಅಭಿಮಾನಿಗಳಿದ್ದಾರೆ. ಹೀಗಾಗಿ ಪ್ರತಿಯೊಬ್ಬರಿಗೂ ಅರ್ಥವಾಗುವ ಉದ್ದೇಶದಿಂದ ಅವರು ಇಂಗ್ಲಿಷ್ ಭಾಷೆ ಬಳಸಿದ್ದಾರೆಂದು ಕಾಮೆಂಟ್ ಮಾಡಿದ್ದಾರೆ.