KGF 2 Movie : ಕೆಜಿಎಫ್ 2 ಮೆಚ್ಚಿದ ತಮಿಳು ಸಿನಿಪ್ರಿಯರು..! 100 ಕೋಟಿ ಕಲೆಕ್ಷನ್ ಕ್ಲಬ್ ಸೇರಿದ ಮೊದಲ ಕನ್ನಡ ಸಿನಿಮಾ..!

By Infoflick Correspondent

Updated:Thursday, May 5, 2022, 22:36[IST]

KGF 2 Movie :  ಕೆಜಿಎಫ್ 2 ಮೆಚ್ಚಿದ ತಮಿಳು ಸಿನಿಪ್ರಿಯರು..! 100 ಕೋಟಿ ಕಲೆಕ್ಷನ್ ಕ್ಲಬ್ ಸೇರಿದ ಮೊದಲ  ಕನ್ನಡ  ಸಿನಿಮಾ..!

ಕನ್ನಡದ ಹೆಮ್ಮೆಯ ಕೆಜಿಎಫ್ ಚಿತ್ರ ಇದೀಗ ವಿಶ್ವ ಮಟ್ಟದಲ್ಲಿ ಸದ್ದು ಮಾಡುತ್ತಿರುವುದು ಅಷ್ಟೇ ಅಲ್ಲದೆ ಪ್ರತಿಯೊಂದು ರಾಜ್ಯದಲ್ಲಿ ದೊಡ್ಡದಾಗಿ ರೆಕಾರ್ಡ್ ಕೊಡ ಮಾಡುತ್ತಿದ್ದೆ. ಚಿತ್ರ ನೋಡಿದ ಸಿನಿಪ್ರೇಕ್ಷಕರು ಎಲ್ಲರೂ ಕೂಡ ಮೆಚ್ಚುಗೆ  ವ್ಯಕ್ತ ಪಡಿಸಿದ್ದು, ಕೆಜಿಎಫ್ ಚಿತ್ರ ಇದು ಒಂದು ಹೊಸತನದ ಚಿತ್ರ, ಕನ್ನಡ ಇಂಡಸ್ಟ್ರಿಯಲ್ಲಿ ಇಲ್ಲಿಯವರೆಗೆ ಯಾರು ಮಾಡದ ಹೊಸತನದ ಪ್ರಯತ್ನ ಮಾಡಿ ಗೆದ್ದಿದೆ. 

ಕನ್ನಡ ಚಿತ್ರರಂಗದಲ್ಲಿ ಇಂತಹ ಪ್ರಯತ್ನವನ್ನು ಹಿಂದೆಂದೂ ಕಂಡಿರಲಿಲ್ಲ. ಕೇವಲ ಬರಿ ಕನ್ನಡ ಚಿತ್ರರಂಗದಲ್ಲಿ ಮಾತ್ರವಲ್ಲದೆ ಇಡೀ ಭಾರತ ಚಿತ್ರರಂಗದಲ್ಲಿಯೂ ಇಂತಹ ಪ್ರಯತ್ನದ ಸಿನಿಮಾವನ್ನ ಮಾಡಿರಲಿಲ್ಲ. ನಿರ್ದೇಶಕ ಪ್ರಶಾಂತ್ ನೀಲ್ ಅವರು ಬುದ್ಧಿ ನಿರ್ದೇಶಕರು ಎನ್ನಬಹುದು. ಕಥೆಯನ್ನು ತುಂಬಾ ಚೆನ್ನಾಗಿ ಹೆಣೆದು ಸಿನಿಮಾ ನಿರ್ದೇಶನ ಮಾಡಿದ್ದಾರೆ.

ಎಲಿವೇಶನ್ ಕಾ ಬಾಪ್ ಎಂದು ಬಾಲಿವುಡ್ ಸಿನಿಪ್ರಿಯರು ಹೇಳುತ್ತಿದ್ದಾರೆ. ಹೌದು ವಿಶ್ವಮಟ್ಟದ ಹೆಮ್ಮೆ ಚಿತ್ರ ಕೆಜಿಎಫ್ ಆಗಿದ್ದು ಕನ್ನಡ ಇಂಡಸ್ಟ್ರಿ ತಾಕತ್ತು ಏನು ಎಂಬುದಾಗಿ ಎಲ್ಲರೂ ಕೂಡ ಇದೀಗ ಅರಿತಿದ್ದಾರೆ ಎನ್ನಬಹುದು. ಮೊನ್ನೆ ಬಾಲಿವುಡ್ ನಟ ಅಮೀರ್ ಖಾನ್ ಸಹ ಕೆಜಿಎಫ್ ಚಿತ್ರಕ್ಕೆ ಹೆದರಿದ್ದೆವು ಎಂಬುದಾಗಿ ಒಪ್ಪಿಕೊಂಡಿದ್ದಾರೆ. ಈ ಮೂಲಕ ಕನ್ನಡ ಸಿನಿಮಾರಂಗ ಮತ್ತು ಕನ್ನಡದವರು ಕೆಜಿಎಫ್ ಚಿತ್ರಕ್ಕೆ ಈ ರೀತಿ ಪ್ರತಿಕ್ರಿಯೆ ನೋಡಿ ಹೆಮ್ಮೆಪಡುತ್ತಿದ್ದಾರೆ. ಹೌದು ಈಗ ಅತ್ತ ತಮಿಳುನಾಡಿನಲ್ಲಿ ಕೆಜಿಎಫ್ ಚಿತ್ರ ನೂರು ಕೋಟಿ ಕಲೆಕ್ಷನ್ ಕ್ಲಬ್ ಸೇರಿದೆ ಎಂದು ಮಾಹಿತಿ ಲಭ್ಯವಾಗಿದೆ. ಇದು ನಾನ್ ತಮಿಳು ಸಿನಿಮಾ ಆಗಿದ್ದು, ತಮಿಳುನಾಡಿನಲ್ಲಿ ಕೆಜಿಎಫ್ ಎರಡನೆಯ ನೂರು ಕೋಟಿ ಕಲೆಕ್ಷನ್ ಮಾಡಿರುವ ಚಿತ್ರ ಆಗಿದೆ. ಹಾಗೆ ಬಾಹುಬಲಿ 100 ಕೋಟಿ ಕಲೆಕ್ಷನ್ ಕ್ಲಬ್ ಸೇರಿದ ಮೊದಲನೇ ಚಿತ್ರ ಆಗಿತ್ತು. 

ಕೆಜಿಎಫ್ 2 ಚಿತ್ರ ಸಾವಿರದ ಐದು ನೂರು ಕೋಟಿ ಕಲೆಕ್ಷನ್ ಮಾಡುತ್ತದೆಯಾ ಅಥವಾ ಇಲ್ವಾ ಎಂದು ಕಮೆಂಟ್ ಮಾಡಿ ತಿಳಿಸಿ. ಹಾಗೆ ತಮಿಳಿಗರು ನಮ್ಮ ಕನ್ನಡದ ಕೆಜಿಎಫ್ ಚಿತ್ರವ ಗೆಲ್ಲಿಸಿದ್ದಾರೆ. ಕೇವಲ ಇದು ಕನ್ನಡ ಚಿತ್ರವಲ್ಲ ಭಾರತದ ಚಿತ್ರ ಎನ್ನುವ ನಿಟ್ಟಿನಲ್ಲಿ ಪ್ರೀತಿ ತೋರಿದ್ದಾರೆ ಎನ್ನಬಹುದು. ಹೌದು ಈ ಮಾಹಿತಿ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ. ಮಾಹಿತಿ ತಪ್ಪದೆ ಶೇರ್ ಮಾಡಿ ಧನ್ಯವಾದಗಳು.