KGF 2 : ರಿಲೀಸ್ ಆಗಿ 6 ವಾರ ಕಳೆದರೂ ಕೆಜಿಎಫ್: ಚಾಪ್ಟರ್ 2 ಗಳಿಸಿದ್ದೆಷ್ಟು ಗೊತ್ತಾ..?

By Infoflick Correspondent

Updated:Saturday, May 28, 2022, 11:22[IST]

KGF 2 : ರಿಲೀಸ್ ಆಗಿ 6 ವಾರ ಕಳೆದರೂ ಕೆಜಿಎಫ್: ಚಾಪ್ಟರ್ 2 ಗಳಿಸಿದ್ದೆಷ್ಟು ಗೊತ್ತಾ..?

ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್: ಚಾಪ್ಟರ್ 2 ಚಿತ್ರ ಬಾಕ್ಸ್ ಆಫೀಸ್ನಲ್ಲಿ ಭರ್ಜರಿ ದಾಖಲೆಯನ್ನೇ ಮಾಡಿದೆ. ಕಳೆದ ತಿಂಗಳು ಅಂದರೆ, ಏಪ್ರಿಲ್ 14ರಂದು ತೆರೆಕಂಡ ಈ ಚಿತ್ರ 6 ವಾರ ಕಳೆದರೂ ಉತ್ತಮ ಗಳಿಕೆಯೊಂದಿಗೆ ಮುನ್ನುಗುತ್ತಿದೆ. ಕರ್ನಾಟಕ ಮಾತ್ರವಲ್ಲದೆ, ಆಂಧ್ರಪ್ರದೇಶ, ತಮಿಳುನಾಡು, ಬಾಲಿವುಡ್ ನಲ್ಲೂ ಹೊಸ ಹೊಸ ದಾಖಲೆಗಳನ್ನು ಸೃಷ್ಠಿ ಮಾಡುತ್ತಲೇ ಇದೆ. ಕೆಜಿಎಫ್ ಹವಾ ಕೊಂಚವೂ ಕಡಿಮೆಯಾಗಿಲ್ಲ. ಹಾಗಾದರೆ ಪ್ರಶಾಂತ್ ನೀಲ್ ನಿರ್ದೇಶನದ ಸಂಜಯ್ ದತ್, ರವೀನಾ ಟಂಡನ್ ನಟನೆಯ ಈ ಚಿತ್ರ ಈವರೆಗೂ ಬಾಕ್ಸ್ ಆಫೀಸ್ನಲ್ಲಿ ಗಳಿಸಿದ್ದೆಷ್ಟು ಗೊತ್ತಾ..? 

ಭಾರತದಲ್ಲಿ 1000 ಕೋಟಿ ರೂ.ಗಳಿಗೂ ಅಧಿಕ ಗಳಿಕೆ ಮಾಡಿರುವ ಎರಡನೇ ಚಿತ್ರ ಎಂಬ ಖ್ಯಾತಿಯನ್ನು ಕೆಜಿಎಫ್: ಚಾಪ್ಟರ್ 2 ಸಿನಿಮಾ ಪಡೆದಿದೆ. ಮೊದಲ ಸ್ಥಾನದಲ್ಲಿ ಬಾಹುಬಲಿ 2 ಚಿತ್ರವಿದೆ. ಕೆಜಿಎಫ್: ಚಾಪ್ಟರ್ 2 ಚಿತ್ರ ತೆರೆಕಂಡ ಬಳಿಕ ಸಾಕಷ್ಟು ಚಿತ್ರಗಳು ರಿಲೀಸ್ ಆಗಿವೆ. ಆಚಾರ್ಯ, ಜೆರ್ಸಿ, ಸರ್ಕಾರು ವಾರಿ ಪಾಟ, ಜಯೇಶ್ಭಾಯ್ ಜೋರ್ದಾರ್, ಧಾಕಡ್, ರನ್ವೇ 35ಕ್ಕೂ ಹೆಚ್ಚು ಸಿನಿಮಾಗಳು ರಿಲೀಸ್ ಆಗಿವೆ. ಆದರೂ ಕೂಡ ಕೆಜಿಎಫ್ ಹವಾ ಮಾತ್ರ ಹಾಗೆಯೇ ಉಳಿದುಕೊಂಡಿದೆ. 

ಇನ್ನು ಕಳೆದ 6 ವಾರಗಳಲ್ಲಿ ಕೆಜಿಎಫ್: ಚಾಪ್ಟರ್ 2 ಗಳಿಸಿರುವ ಕಲೆಕ್ಷನ್ ಬಗ್ಗೆ ಕೇಳಿದರೆ, ಶಾಕ್ ಆಗುತ್ತೀರಾ. ಎಲ್ಲಾ ದಾಖಲೆಗಳನ್ನು ಮೀರುತ್ತಿರುವ ಕೆಜಿಎಫ್: ಚಾಪ್ಟರ್ 2 ಇದೀಗ ಬಾಕ್ಸ್ ಆಫೀಸ್ ನಲ್ಲಿ ಧೂಳೆಬ್ಬಿಸಿದೆ. ಬಾಕ್ಸ್ ಆಫೀಸ್ ನಲ್ಲಿ ಸಾವಿರ ಕೋಟಿ ಮೀರಿ ಕಲೆಕ್ಷನ್ ಮಾಡಿದೆ. ಒಂದೂವರೆ ತಿಂಗಳಾದರೂ ಥಿಯೇಟರ್ ಗಳಲ್ಲಿ ಹೌಸ್ ಫುಲ್ ಆಗಿ ಓಡುತ್ತಿದೆ. ವಿಶ್ವದಾದ್ಯಂತ 6 ವಾರಗಳ ಕಾಲದ ಒಟ್ಟು ಕಲೆಕ್ಷನ್ 1230.37 ಎಂದು ಹೇಳಲಾಗಿದೆ. ಈ ಚಿತ್ರ ಹೀಗೆ ಓಡುತ್ತಿದ್ದರೆ, ಇನ್ನೂ ಹೆಚ್ಚು ಹೆಚ್ಚು ಕಲೆಕ್ಷನ್ ಮಾಡುವುದರಲ್ಲಿ ಅನುಮಾನವೇ ಇಲ್ಲ.