ಬಾಲಿವುಡ್ ದಾಖಲೆಗಳನ್ನು ಧೂಳಿಪಟ ಮಾಡಿದ ಕೆಜಿಎಫ್2 ಕಲೆಕ್ಷನ್ ಅಬ್ಬರ

By Infoflick Correspondent

Updated:Friday, April 22, 2022, 15:43[IST]

ಬಾಲಿವುಡ್ ದಾಖಲೆಗಳನ್ನು ಧೂಳಿಪಟ ಮಾಡಿದ ಕೆಜಿಎಫ್2 ಕಲೆಕ್ಷನ್ ಅಬ್ಬರ

ಯಶ್ ಅಭಿನಯದ ಪ್ರಶಾಂತ್ ನೀಲ್ ನಿರ್ದೇಶನದ ಕೆಜಿಎಫ್‌ 2 ಸದ್ಯ ಬಾಕ್ಸ್ ಆಫೀಸ್‌ನಲ್ಲಿ ತೂಫಾನ್‌ ಎಬ್ಬಿಸಿದೆ. ಈ ಸಿನಿಮಾದಲ್ಲಿ ಯಶ್ ನಟನೆಯನ್ನು ನೋಡಿ ಜನರು ಮೆಚ್ಚಿಕೊಂಡಿದ್ದಾರೆ. ಈ ಚಿತ್ರ ತೆರೆಗೆ ಬಂದು ಒಂದು ವಾರ ಕಳೆದಿದೆ. ಆದಾಗ್ಯೂ ಬಾಲಿವುಡ್​ನಲ್ಲಿ ಸಿನಿಮಾದ ಅಬ್ಬರ ಕೊಂಚವೂ ಕಡಿಮೆ ಆಗಿಲ್ಲ. ಚಿತ್ರದ ಕಲೆಕ್ಷನ್ ತಗ್ಗುವ ಸೂಚನೆಯೇ ಸಿಗುತ್ತಿಲ್ಲ. ಬಾಲಿವುಡ್  ಅಂಗಳದಲ್ಲಿ ಈ ಸಿನಿಮಾ 250 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ.  

ಬಾಲಿವುಡ್ ಸಿನಿಮಾಗಳು ಮಾಡಿದ್ದ ದೊಡ್ಡ ದಾಖಲೆಗಳನ್ನು ರಾಕಿ ಭಾಯ್ ಅಳಿಸಿ ಹಾಕುತ್ತಿದ್ದಾನೆ. ಹಿಂದಿ ಚಿತ್ರರಂಗದಲ್ಲಿ ಮೊದಲ ದಿನ ಅತೀ ಹೆಚ್ಚು ಕಲೆಕ್ಷನ್ ಮಾಡಿದ ಸಿನಿಮಾ ಎಂಬ ಖ್ಯಾತಿ ಕೆಜಿಎಫ್ 2 ಸಿನಿಮಾಕ್ಕಿದೆ. ಬಾಹುಬಲಿ 2, ಆರ್ ಆರ್ ಆರ್ ಚಿತ್ರ ಬಾಲಿವುಡ್ ನಲ್ಲಿ ಮಾಡಿರುವ ಮೊದಲ ದಿನದ ಗಳಿಕೆಯನ್ನೇ ಹಿಂದಿಕ್ಕಿದೆ. ಇದೇ ಅಲ್ಲದೆ ಮೂಲ ಬಾಲಿವುಡ್ ಸಿನಿಮಾಗಳು ಮಾಡಿದ್ದ ಮೊದಲ ದಿನದ ಕಲೆಕ್ಷನ್ ಅನ್ನೇ ಕೆಜಿಫ್ 2 ಧೂಳಿಪಟ ಮಾಡಿದೆ. 

ಶ್ರೀ ಸಿಗಂದೂರು ಚೌಡೇಶ್ವರಿ ಜ್ಯೋತಿಷ್ಯರು ಪಂಡಿತ್ ಶ್ರೀ ರಾಮಚಂದ್ರ ಆಚಾರ್ಯ ನಿಮ್ಮ ಸಮಸ್ಯೆಗಳಾದ ವಿದ್ಯೆ ಉದ್ಯೋಗ ವ್ಯವಹಾರ ಹಣಕಾಸು ಸಾಲದ ಬಾಧೆ ಪ್ರೀತಿ-ಪ್ರೇಮ ವಿಚಾರ ಮನೆಯಲ್ಲಿ ಅಶಾಂತಿ ಅತ್ತೆ-ಸೊಸೆ ಕಿರಿಕಿರಿ ಮತ್ತೆ ಯಾವುದೇ ಏನೇ ಸಮಸ್ಯೆಗಳಿದ್ದರೂ ಅಘೋರಾರ   ನಾಗಸಾಧು ಶಕ್ತಿಗಳಿಂದ ಕೇವಲ ಎರಡೇ ಗಂಟೆಯಲ್ಲಿ ಶಾಶ್ವತ ಪರಿಹಾರ - 9035551170

ಬಾಲಿವುಡ್ ನಲ್ಲಿ ನಟ ಹೃತಿಕ್ ರೋಷನ್ ಮತ್ತು ಟೈಗರ್ ಶ್ರಾಫ್ ಅಭಿನಯಿಸಿದ್ದ ವಾರ್ ಸಿನಿಮಾ ಇಲ್ಲಿಯವರೆಗೂ ಹಿಂದಿಯಲ್ಲಿ ಮೊದಲ ದಿನದ ಗಳಿಕೆಯಲ್ಲಿ ಅಗ್ರಸ್ಥಾನದಲ್ಲಿತ್ತು. ನಂತರ ಸ್ಥಾನದಲ್ಲಿ ಅಮಿರ್ ಖಾನ್ ಅಭಿನಯದ ಥಗ್ಸ್ ಆಫ್ ಹಿಂದೂಸ್ಥಾನ್ ಚಿತ್ರವಿತ್ತು. ಈ ಎರಡು ಚಿತ್ರಗಳು ಕ್ರಮವಾಗಿ 51.60 ಕೋಟಿ ಮತ್ತು 50.75 ಕೋಟಿ ಗಳಿಸಿತ್ತು. ಈ ದಾಖಲೆಯನ್ನು ಕೆಜಿಎಫ್ 2 ಅಳಿಸಿ ಹಾಕಿದೆ. 

ಕೆಜಿಎಫ್ 2' ಹಿಂದಿ ವರ್ಷನ್ 219.56 ರೂ. ಕೋಟಿ ಸಂಗ್ರಹ ಮಾಡಿದೆ. ಬಾಲಿವುಡ್‌ನಲ್ಲಿ ಅತ್ಯಧಿಕ ಗಳಿಕೆ ಮಾಡಿದ್ದ 'ದಂಗಲ್' ಚಿತ್ರ ಮೊದಲ ವಾರದಲ್ಲಿ 197.54 ಕೋಟಿ ರೂ. ಸಂಗ್ರಹಿಸಿತ್ತು. ಸಲ್ಮಾನ್ ಖಾನ್ ಸಿನಿಮಾದ ದಾಖಲೆಯನ್ನು 'ಕೆಜಿಎಫ್‌ 2' ಅಳಿಸಿ ಹಾಕಿತ್ತು. ಈಗ 'ಬಾಹುಬಲಿ 2', 'ದಂಗಲ್' ಸಿನಿಮಾಗಳ ದಾಖಲೆಯೂ ಅಳಿಸಿ ಹಾಕಿದೆ ಕನ್ನಡದ ಈ ಸಿನಿಮಾ! ರಾಕಿ ಡೋಂಟ್​ ಲೈಕ್​ ರೆಕಾರ್ಡ್​.. ಬಟ್​ ರೆಕಾರ್ಡ್​ ಲೈಕ್ಸ್​ ರಾಕಿಂಗ್​ ಸ್ಟಾರ್​!  ಇದುವರೆವಿಗೂ  ಕೆಜಿಎಫ್ 2  ಚಿತ್ರ 800 ಕೋಟಿಗೂ ಮೀರಿ ಗಳಿಕೆ ಗಳಿಸಿದೆ.