KGF 2 Box Office : ಕೆಜಿಎಫ್ 2 ಸಿನಿಮಾ ಎಷ್ಟು ಕಲೆಕ್ಷನ್ ಮಾಡಿದೆ..? ಸಾವಿರ ಕೋಟಿ ಅಲ್ಲ ಅಂತೆ..! ನಿಜ ನೋಡಿ

By Infoflick Correspondent

Updated:Friday, April 29, 2022, 10:15[IST]

KGF 2 Box Office : ಕೆಜಿಎಫ್ 2 ಸಿನಿಮಾ ಎಷ್ಟು ಕಲೆಕ್ಷನ್ ಮಾಡಿದೆ..? ಸಾವಿರ ಕೋಟಿ ಅಲ್ಲ ಅಂತೆ..! ನಿಜ ನೋಡಿ

ಕನ್ನಡ ಚಿತ್ರರಂಗದ ಬಹುನಿರೀಕ್ಷಿತ ಚಿತ್ರ ಕೆಜಿಎಫ್ ಚಾಪ್ಟರ್ 2 ಇದೀಗ ವಿಶ್ವ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಬಿಡುಗಡೆ ಆದ ಮೊದಲ ದಿನವೇ ದಾಖಲೆ ಮಟ್ಟದಲ್ಲಿ ಕೆಜಿಎಫ್ ಹೆಚ್ಚು ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಂಡಿತ್ತು. ಅದಾದ ಬಳಿಕ ಬಿಡುಗಡೆಯ ಮೊದಲ ದಿನವೇ ಎಲ್ಲಾ ಪ್ರೇಕ್ಷಕರಿಗೂ ಹೆಚ್ಚು ಇಷ್ಟ ಆಗಿತ್ತು. ಹೌದು ಕೆಜಿಎಫ್ ಸಿನಿಮಾ ಕೇವಲ ಸಿನಿಮಾ ಅಲ್ಲಾ, ಬದಲಿಗೆ ಕನ್ನಡಿಗರ ಕನಸು. ಹಾಗೆ ಕನ್ನಡಿಗರ ಸ್ವಾಭಿಮಾನ ಎಂದು ಹೇಳಬಹುದು. ಕೆಜಿಎಫ್ ಚಾಪ್ಟರ್ 2 ಚಿತ್ರ ವಿಶ್ವದಾದ್ಯಂತ ಭರ್ಜರಿಯಾಗಿ ಬಿಡುಗಡೆಯಾಗಿದ್ದು, ಇಡೀ ಪ್ರಪಂಚವೇ ಕನ್ನಡ ಸಿನಿಮಾರಂಗದ ಕಡೆಗೆ ತಿರುಗಿ ನೋಡುವಂತೆ ನಿರ್ದೇಶಕ ಪ್ರಶಾಂತ್ ನೀಲ್ ಅವರು ಈ ಮೂಲಕ ಮಾಡಿದ್ದಾರೆ. 

ಕೆಜಿಎಫ್ ಭಾಗ-1 ಬಂದಾದ ಮೇಲೆ ಈ ಕೆಜಿಎಫ್ ಭಾಗ 2 ರ ಸಿನಿಮಾದ ಮೇಲೆ ಹೆಚ್ಚು ನಿರೀಕ್ಷೆ ಮೂಡಿದ್ದು ಏಪ್ರಿಲ್ 14 ತೆರೆಯ ಮೇಲೆ ಭಾಗ-2 ನೋಡಿ ಅಭಿಮಾನಿಗಳು ಹುಚ್ಚೆದ್ದು ಕುಣಿಯುತ್ತಿದ್ದರು. ಅದರಂತೆ ಇದೀಗ ಕೆಜಿಎಫ್ ಭಾಗ-2 ಸಿನಿಮಾ ಇಲ್ಲಿಯವರೆಗೆ ಎಷ್ಟು ಕಲೆಕ್ಷನ್ ಮಾಡಿದೆ ಎಂಬ ಸುದ್ದಿಯೂ ಸಹ ತಿಳಿದುಬಂದಿದ್ದು, ಕೆಲವರು ಈಗಾಗಲೇ ಚಿತ್ರ ಸಾವಿರ ಕೋಟಿ ಕಲೆಕ್ಷನ್ ದಾಟಿದೆ ಎಂದರೆ, ಇನ್ನೂ ಕೆಲವರು ಸಾವಿರ ಕೋಟಿ ಮಾಡಿಲ್ಲ ಎಂದು ಹೇಳುತ್ತಿದ್ದಾರೆ. ಹೀಗಿರುವಾಗ ಈ ವಿಚಾರವಾಗಿಯೇ ಇನ್ನೊಂದು ಮಾಹಿತಿ ಹೊರಬಿದ್ದಿದ್ದು, ಇಲ್ಲಿಯವರೆಗೆ ಕೆಜಿಎಫ್ ಚಾಪ್ಟರ್ ಭಾಗ 2 940 ಕೋಟಿಗಿಂತ ಅಧಿಕ ಕಲೆಕ್ಷನ್ ಮಾಡಿದೆಯಂತೆ. ಹಾಗೆ ಡಿಜಿಟಲ್ ರೈಟ್ಸ್ 54 ಕೋಟಿ, ಸ್ಯಾಟಲೈಟ್ ರೈಟ್ಸ್ ನೂರು ಕೋಟಿ, ಕೆಜಿಎಫ್ ಚಿತ್ರದ ಮ್ಯೂಸಿಕ್ ಭಾಗವಾಗಿ ಲಹರಿ ಮ್ಯೂಸಿಕ್ ಒಟ್ಟು 70 ಕೋಟಿ ಹಣ ಕೊಟ್ಟು ಖರೀದಿಸಿದ್ದಾರೆ ಎನ್ನಲಾಗಿದೆ.

ಹೀಗಿದ್ದು ಕೆಜಿಎಫ್ 2 ಸಿನಿಮಾ ಇಲ್ಲಿಯವರೆಗೆ ಹನ್ನೆರಡು ನೂರು ಕೋಟಿಗೂ ಅಧಿಕ ಕಲೆಕ್ಷನ್ ಮಾಡಿರುವುದಾಗಿ ವರದಿಯಾಗಿದೆ. ಇದು ಕೇವಲ 13 ದಿನದ ಕಲೆಕ್ಷನ್ ಆಗಿದೆಯಂತೆ. ಮುಂದೆ ಎರಡು ಸಾವಿರ ಕೋಟಿ ಹತ್ತಿರ ಬರುತ್ತಾ ಕಾದು ನೋಡಬೇಕು. ಹೆಚ್ಚಿನ ಮಾಹಿತಿಗೆ ಈ ವಿಡಿಯೋ ನೋಡಿ. ಈ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ ದನ್ಯವಾದಗಳು..