kgf 2 : ಕೆಜಿಎಫ್ 2 ಸಿನಿಮಾಗೆ ಆರ್ ಆರ್ ಆರ್ ಬಾಹುಬಲಿ ದಾಖಲೆ ಉಡಿಸ್..! 1000 ಕೋಟಿ ಕಲೆಕ್ಷನ್

By Infoflick Correspondent

Updated:Wednesday, April 27, 2022, 21:15[IST]

kgf 2 : ಕೆಜಿಎಫ್ 2 ಸಿನಿಮಾಗೆ ಆರ್ ಆರ್ ಆರ್ ಬಾಹುಬಲಿ ದಾಖಲೆ ಉಡಿಸ್..! 1000 ಕೋಟಿ ಕಲೆಕ್ಷನ್

ಕನ್ನಡದ ಬಹುನಿರೀಕ್ಷಿತ ಚಿತ್ರ ಕೆಜಿಎಫ್ ಚಾಪ್ಟರ್ 2 ಈಗ ವಿಶ್ವ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಪ್ರಶಾಂತ್ ನೀಲ್ ಅವರ ನಿರ್ದೇಶನಕ್ಕೆ ಹಾಗೂ ರಾಕಿಂಗ್ ಸ್ಟಾರ್ ಯಶ್ ಆರ್ಭಟಕ್ಕೆ ಕೆಜಿಎಫ್ ಚಾಪ್ಟರ್ 2 ಸಿನಿಮಾ ಗೆದ್ದಿದೆ ಎಂದು ಹೇಳಬಹುದು. ಹೌದು ಗೋವಾದಲ್ಲಿ ಇಡೀ ಕೆಜಿಎಫ್ ಚಿತ್ರತಂಡ ಸಿನಿಮಾ ಗೆದ್ದ ಖುಷಿಗಾಗಿ ಪಾರ್ಟಿ ಆಯೋಜನೆ ಮಾಡಿಕೊಂಡಿದ್ದು, ನಿರ್ಮಾಪಕ ವಿಜಯ್ ಕಿರಗಂದೂರು ಅವರ ಸಂಸ್ಥೆಯಲ್ಲಿ ನಿರ್ಮಾಣವಾದ ಕೆಜಿಎಫ್ ಚಾಪ್ಟರ್ ಟು ಇದೀಗ ಗೆದ್ದೇ ಬಿಟ್ಟಿದೆ. ಹಾಗೂ ನಿರ್ದೇಶಕ ಪ್ರಶಾಂತ್ ನೀಲ್ ಅವರು ಯಶ್ ಜೊತೆ ಗೋವಾದಲ್ಲಿ ಕಾಣಿಸಿದ ಫೋಟೋ ಸಹ ವೈರಲ್ ಆಗುತ್ತಿದೆ.

ಯಶ್ ಕೆನ್ನೆಗೆ ಪ್ರಶಾಂತ್ ನೀಲ್, ವಿಜಯ್ ಕಿರಗಂದೂರು ಅವರು ಮುತ್ತಿಟ್ಟ ಫೋಟೋ ಇದೀಗ ಬಾರಿ ಹೆಚ್ಚು ವೈರಲ್ ಆಗುತ್ತಿದೆ. ಕಳೆದ ಎರಡು ವಾರದಿಂದ ಯಶಸ್ವಿ ಪ್ರದರ್ಶನ ಕಾಣುತ್ತಿರುವ ಕೆಜಿಎಫ್ 2 ಸಿನಿಮಾ ಕನ್ನಡದ ಮಹತ್ತರ ಸಿನಿಮಾ ಆಗಿ ವಿಶ್ವ ಮಟ್ಟದಲ್ಲಿ ಸದ್ದು ಮಾಡುತ್ತಿರುವುದು ಹೆಮ್ಮೆಯ ವಿಷಯ ಎನ್ನಬಹುದು. ಈ ಕೆಜಿಎಫ್ ಸಿನಿಮಾ ಏಪ್ರಿಲ್ 14 ರಿಂದ ತನ್ನ ಆರ್ಭಟ ಆರಂಭಿಸಿದ್ದು ಈಗಲೂ ಕೂಡ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ. ಹೌದು ಅದಿರನ ಪಾತ್ರದ ನಟ ಸಂಜಯ್ ದತ್ ಹಾಗೂ ರವೀನಾ ಟಂಡನ್ ಅವರ ಅಭಿನಯಕ್ಕೆ ಅವರೇ ಸಾಟಿ ಎನ್ನಬಹುದು    

. ಕೆಜಿಎಫ್ ಸಿನಿಮಾ ಇದೀಗ ಬಿಡುಗಡೆಯಾದ 11 ದಿನಕ್ಕೆ ಸಾವಿರ ಕೋಟಿ ಕಲೆಕ್ಷನ್ ಮುಕ್ತಾಯ ಮಾಡಿರುವುದಾಗಿ ಮೂಲಗಳ ಮೂಲಕ ವರದಿಯಾಗಿದೆ.

ಈ ಮೂಲಕ ರಾಜಮೌಳಿ ನಿರ್ದೇಶನದ ಬಾಹುಬಲಿ ಮತ್ತು ಆರ್ ಆರ್ ಆರ್ ಸಿನಿಮಾದ ದಾಖಲೆಯನ್ನು ನಮ್ಮ ಚಿತ್ರ ಕೆಜಿಎಫ್ 2 ಅಳಿಸಿಹಾಕಿದೆ ಎಂದು ತಿಳಿದುಬಂದಿದೆ. ಹೆಚ್ಚಿನ ಮಾಹಿತಿಗೆ ಈ ವಿಡಿಯೋ ನೋಡಿ. ಹಾಗೆ ಈ ಮಾಹಿತಿ ಬಗ್ಗೆ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ. ಹಾಗೆ ಕನ್ನಡಿಗರು ತಪ್ಪದೇ ಈ ಮಾಹಿತಿ ಹೆಮ್ಮೆಯಿಂದ ಶೇರ್ ಮಾಡಿ ಧನ್ಯವಾದಗಳು.