KGF 2 : ತಮಿಳ್ ಭಾಷೆಯಲ್ಲಿ ಕೆಜಿಎಫ್ ದೇ ಕಮಾಲ್: ಮಕಾಡೆ ಮಲಗಿದವು ಸೂಪರ್ ಸ್ಟಾರ್ ಗಳ ಚಿತ್ರಗಳು

By Infoflick Correspondent

Updated:Wednesday, June 1, 2022, 13:56[IST]

KGF 2 : ತಮಿಳ್ ಭಾಷೆಯಲ್ಲಿ ಕೆಜಿಎಫ್ ದೇ ಕಮಾಲ್: ಮಕಾಡೆ ಮಲಗಿದವು ಸೂಪರ್ ಸ್ಟಾರ್ ಗಳ ಚಿತ್ರಗಳು

ರಾಕಿಂಗ್ ಸ್ಟಾರ್ ಯಶ್, ಕೆಜಿಎಫ್ ಚಿತ್ರದ ಮೂಲಕ ಇಂಟರ್ ನ್ಯಾಷನಲ್ ಹೀರೋ ಆಗಿದ್ದಾರೆ. ಈ ಚಿತ್ರದ ಮೂಲಕ ತಮ್ಮ ವರ್ಚಸ್ಸನ್ನು ಕೂಡ ಹೆಚ್ಚಿಸಿಕೊಂಡಿದ್ದಾರೆ. ಕೆಜಿಎಫ್ ಚಿತ್ರ ಬರದೇ ಇದ್ದಿದ್ದರೆ ಇಂದು ಯಶ್ ಪ್ಯಾನ್ ಇಂಡಿಯಾ ಸ್ಟಾರ್ ಆಉತ್ತಿದ್ದರೋ ಇಲ್ಲವೋ ಗೊತ್ತಿಲ್ಲ. ಬಟ್ ನಮ್ಮ ಕನ್ನಡ ಭಾಷೆ ಇಡೀ ವಿಶ್ವದಲ್ಲಿ ವರ್ಚಸ್ಸನ್ನು ಹೆಚ್ಚಿಸಿಕೊಳ್ಳುತ್ತಿರಲಿಲ್ಲ ಎನಿಸುತ್ತದೆ. ಯಶ್ ಹವಾ ದಕ್ಷಿಣ ಭಾರತದಲ್ಲಿ ಮಾತ್ರವಲ್ಲದೇ, ಇಡೀ ವಿಶ್ವಕ್ಕೂ ಹಬ್ಬಿದೆ. ಕೆಜಿಎಫ್ ಚಿತ್ರದಿಂದ ಯಶ್ ಈಗ ರಾಕಿ ಭಾಯ್ ಆಗಿದ್ದಾರೆ.   

ಕನ್ನಡದಲ್ಲಿ ಮಾತ್ರವಲ್ಲದೇ, ತಮಿಳು, ತೆಲುಗು, ಮಲಯಾಳಂ ಹಾಗೂ ಹಿಂದಿ ಭಾಷೆಯಲ್ಲೂ ಹೆಚ್ಚು ಗಳಿಕೆ ಮಾಡಿರುವ ಸಿನಿಮಾ ಎಂಬ ಪ್ರಶಂಸೆಯನ್ನು ಕೆಜಿಎಫ್ ಪಡೆದಿದೆ. ಇದೀಗ ಯಶ್ ತಮಿಳಿನಲ್ಲಿ ಮತ್ತೊಂದು ದಾಖಲೆಯನ್ನು ಮಾಡಿದ್ದಾರೆ. ಯಶ್ ತಮಿಳಿನಲ್ಲಿ ಹೊಸ ದಾಖಲೆ ಬರೆದಿದ್ದು, ಕಾಲಿವುಡ್ ನ ಸ್ಟಾರ್ ಹೀರೋಗಳನ್ನು ಕೂಡ ಹಿಂದಿಕ್ಕಿದ್ದಾರೆ. ಅದರಲ್ಲೂ ರಜನಿಕಾಂತ್, ವಿಜಯ್ ಹಾಗೂ ಅಜಿತ್ ಅವರು ಮಾಡಿದ್ದ ದಾಖಲೆಗಳನ್ನು ಮುರಿದಿರುವ ಯಶ್ ಹವಾ ತಮಿಳುನಾಡಿನಲ್ಲಿ ಜೋರಾಗಿದೆ. 

ಕೆಜಿಎಫ್ 2 ಚಿತ್ರಕ್ಕೆ ಚೆನ್ನೈನಲ್ಲಿ ಹೆಚ್ಚಿನ ಬೇಡಿಕೆ ಇದ್ದು, ಎಲ್ಲರೂ ಥಿಯೇಟರ್ ಗಳಿಗೆ ಬಂದು ಸಿನಿಮಾ ವೀಕ್ಷಣೆ ಮಾಡುತ್ತಿದ್ದಾರೆ. ಹೀಗಾಗಿ ಚೆನ್ನೈ ಬಾಕ್ಸ್ ಆಫೀಸ್ನಲ್ಲಿ ಕೆಜಿಎಫ್ 2 ಚಿತ್ರ ಕಲೆಕ್ಷನ್ ಜೋರಾಗಿದೆ. 100 ಕೋಟಿಗೂ ಅಧಿಕ ಹಣವನ್ನು ಗಳಿಸುವ ಮೂಲಕ ಹೊಸ ದಾಖಲೆ ಬರೆದಿದೆ. ಈ ಹಿನ್ನಲೆಯಲ್ಲಿ ಈಗ ಯಶ್ ಅವರು ಅಲ್ಲಿನ ಸೂಪರ್ ಸ್ಟಾರ್ ಗಳಾದ ರಜನಿಕಾಂತ್, ವಿಜಯ್ ಹಾಗೂ ಅಜಿತ್ ಅವರ ಸಿನಿಮಾಗಳನ್ನು ಕೂಡ ಹಿಂದಿಕ್ಕಿದ್ದಾರೆ. ಕೆಜಿಎಫ್ 2 ಚಿತ್ರ ತಮಿಳಿನಲ್ಲಿ ಭರ್ಜರಿಯಾಗಿ ಕಲೆಕ್ಷನ್ ಮಾಡುತ್ತಿದೆ. ತಮಿಳುನಾಡಿನ ಬಾಕ್ಸ್ ಆಫೀಸ್ನಲ್ಲಿ 100 ಕೋಟಿ ಗಳಿಸಿದ ಕನ್ನಡದ ಮೊದಲ ಚಿತ್ರ ಕೆಜಿಎಫ್ 2 ಎಂಬ ಹೆಗ್ಗಳೆಕೆಯನ್ನು ಪಡೆದಿದೆ.