KGF 2 Movie :ಚಿತ್ರರಂಗದ ಇತಿಹಾಸದಲ್ಲಿ ಕೆಜಿಎಫ್-2 ಧೂಳೆಬ್ಬಿಸೆದೆ: ಬಾಕ್ಸ್ ಆಫೀಸ್ ನಲ್ಲಿ ಭರ್ಜರಿ ಕಲೆಕ್ಷನ್ ಮಾಡಿದೆ..

By Infoflick Correspondent

Updated:Sunday, May 1, 2022, 18:04[IST]

KGF 2 Movie :ಚಿತ್ರರಂಗದ ಇತಿಹಾಸದಲ್ಲಿ ಕೆಜಿಎಫ್-2 ಧೂಳೆಬ್ಬಿಸೆದೆ: ಬಾಕ್ಸ್ ಆಫೀಸ್ ನಲ್ಲಿ ಭರ್ಜರಿ ಕಲೆಕ್ಷನ್ ಮಾಡಿದೆ..

ಇದುವರೆಗೂ ಕನ್ನಡ ಚಿತ್ರ ಮಾಡಿರದ ದಾಖಲೆಗಳನ್ನು ಕೆಜಿಎಫ್-2 ಸಿನಿಮಾ ಮಾಡಿದೆ. ಅದಾಗಲೇ ಬರೋಬ್ಬರಿ ಒಂದು ಸಾವಿರ ಕೋಟಿ ಕಲೆಕ್ಷನ್ ಮಾಡಿ ಧೂಳೆಬ್ಬಿಸಿದೆ. ರಾಕಿಂಗ್ ಸ್ಟಾರ್ ಯಶ್ ಹಾಗೂ ನಿರ್ದೇಶಕ ಪ್ರಶಾಂತ್ ನೀಲ್ ನಿರ್ದೇಶನದ ಕೆಜಿಎಫ್-2 ಚಿತ್ರ ನಿತ್ಯ ದಾಖಲೆಗಳನ್ನು ಮಾಡುತ್ತಲೇ ಇದೆ. ಚಿತ್ರ ರಿಲೀಸ್ ಆಗಿ 3 ವಾರ ಕಳೆದರೂ, ಯಶ್ ಹವಾ ಸ್ವಲ್ಪವೂ ತಗ್ಗಿಲ್ಲ. ಕೆಜಿಎಫ್ 2 ರಿಲೀಸ್ ಆದ ಬಳಿಕ ಇಡೀ ವಿಶ್ವದಲ್ಲೇ ಚಿತ್ರ ರೂಲ್ ಮಾಡುತ್ತಿದೆ. ರಾಕಿ ಭಾಯ್ ನ ಹವಾ ಪ್ರಪಂಚದಾದ್ಯಂತ ಹರಡಿದ್ದು, ಕೆಜಿಎಫ್ 2 ಚಿತ್ರವು ಬೆಳ್ಳಿಪರದೆ ಮೇಲೆ ಕಮಾಲ್ ಮಾಡಿದೆ. 

ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಚಾಪ್ಟರ್ -2 ಸಿನಿಮಾ ಬಿಡುಗಡೆಯಾಗಿ ಸಖತ್ ಸೌಂಡ್ ಮಾಡುತ್ತಿದೆ. ಅದಾಗಲೇ ಯಾರೂ ಊಹೆ ಮಾಡದ ಹಾಗೆ, ಭಾರತ ಚಿತ್ರರಂಗ ಮಾತ್ರವಲ್ಲದೆ, ಇಡೀ ವಿಶ್ವವೇ ತಿರುಗಿ ನೋಡುವಂತೆ ಮಾಡಿದೆ. ಕರ್ನಾಟಕ ರಾಜ್ಯದಲ್ಲಿ 153.8 ಕೋಟಿ, ತಮಿಳುನಾಡು 94.24 ಕೋಟಿ, ತೆಲುಗು ರಾಜ್ಯದಲ್ಲಿ 125.7 ಕೋಟಿ, ಕೇರಳದಲ್ಲಿ 53.8 ಕೋಟಿ, ಹಿಂದಿ ಬಾಕ್ಸ್ಆಫೀಸ್ನಲ್ಲಿ 353.06 ಕೋಟಿ, ಇತರೆಡೆ 402.9 ಕೋಟಿ, ವಿದೇಶದಲ್ಲಿ 164.2 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದ್ದು, ಒಟ್ಟು 1000 ಕೋಟಿ ರೂಪಾಯಿ ಅನ್ನು ಬಾಚಿಕೊಂಡಿದೆ.  

ಕೇವಲ ಕನ್ನಡದಲ್ಲಿ ಮಾತ್ರವಲ್ಲದೇ ಬೇರೆ ಬೇರೆ ದೇಶ-ವಿದೇಶಗಳಲ್ಲೂ ಮತ್ತು ಬೇರೆ ಬೇರೆ ಭಾಷೆಗಳಲ್ಲೂ ಕಮಾಲ್ ಮಾಡಿರು ಕೆಜಿಎಫ್ ಗೆ ವ್ಯಾಪಕ ಪ್ರತಿಕ್ರಿಯೆ ಹಾಗೂ ಪ್ರಶಂಸೆಗಳು ವ್ಯಕ್ತವಾಗುತ್ತಿದೆ. ಸಿನಿಮಾ ನೋಡಿದ ಪ್ರತಿಯೊಬ್ಬರೂ ಸಂತಸ ಹಂಚಿಕೊಂಡಿದ್ದಾರೆ. ಸಿನಿಮಾದಲ್ಲಿ ಪಾತ್ರಗಳು ಎಲ್ಲರಿಗೂ ಕನೆಕ್ಟ್ ಆಗುವಂತೆ ಎಮೋಷನ್ ಇದ್ದು, ತಾಯಿ ಮಗನ ಪಾತ್ರ ಅದ್ಭುತವಾಗಿ ಮೂಡಿ ಬಂದಿದೆ. ಚಿತ್ರವನ್ನು ನೋಡದೇ ಇದ್ದರೆ ಮಿಸ್ ಮಾಡಿಕೊಳ್ಳುವುದಂತೂ ಖಂಡಿತ, ಚಿತ್ರದಲ್ಲಿನ ಪ್ರತಿಯೊಬ್ಬರ ನಟನೆಯೂ ಸೂಪರ್ ಆಗಿದೆ. ಹಠ, ಚಾಣಾಕ್ಷತನ, ಅಸೂಯೆ, ಕ್ರೂರಿತನ ಕೂಡಿದ ಸಿನಿಮಾದಲ್ಲಿ ಗಟ್ಟಿಗ ರಾಕಿಭಾಯ್ ತನ್ನ ಬುದ್ಧಿವಂತಿಕೆಯಿಂದ ನಡೆಯುವ ಚಿತ್ರ ಚೆನ್ನಾಗಿದೆ. ಹೀಗಾಗಿ ಈ ಸಿನಿಮಾ ಈಗ ದೇಶವಷ್ಟೇ ಅಲ್ಲದೇ, ವಿದೇಶಗಳಲ್ಲೂ ಭಾರೀ ಸದ್ದು ಮಾಡಿದೆ.