ಬಾಕ್ಸ್ ಆಫೀಸ್ ನಲ್ಲಿ ಚಿಂದಿ ಉಡಾಯಿಸಿದ ಕೆಜಿಎಫ್ 2 ಕಲೆಕ್ಷನ್ ಎಷ್ಟು ಗೊತ್ತಾ..? ಶಾಕ್ ಆಗ್ತೀರಾ

By Infoflick Correspondent

Updated:Wednesday, April 20, 2022, 17:35[IST]

ಬಾಕ್ಸ್ ಆಫೀಸ್ ನಲ್ಲಿ ಚಿಂದಿ ಉಡಾಯಿಸಿದ ಕೆಜಿಎಫ್ 2 ಕಲೆಕ್ಷನ್ ಎಷ್ಟು ಗೊತ್ತಾ..?  ಶಾಕ್ ಆಗ್ತೀರಾ

ರಾಕಿ ಭಾಯ್ನ ಹವಾ ಪ್ರಪಂಚದಾದ್ಯಂತ ಹರಡಿದ್ದು, ಕೆಜಿಎಫ್ 2 ಚಿತ್ರವ ಬೆಳ್ಳಿಪರದೆ ಮೇಲ್ ಕಮಾಲ್ ಮಾಡಿದೆ. ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹು ನಿರೀಕ್ಷಿತ 'ಕೆಜಿಎಫ್ ಅಧ್ಯಾಯ 2' ಕೊನೆಗೂ ಚಿತ್ರಮಂದಿರಕ್ಕೆ ಬಂದು ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆಯುತ್ತಿದೆ. ಚಿತ್ರ ರಿಲೀಸ್ ಗೂ ಮುನ್ನವೇ ಆನ್ ಲೈನ್ ನಲ್ಲಿ ಟೆಕೆಟ್ ಗಳು ಸೋಲ್ಡ್ ಔಟ್ ಆಗುವ ಮೂಲಕ ಬಾಕ್ಸ್ ಆಫೀಸ್ನಲ್ಲಿ ಮೋಡಿ ಮಾಡಿತ್ತು. ಇದೀಗ ನಿರೀಕ್ಷೆಯಂತೆ ಚಿತ್ರ ಬಾಕ್ಸ್ ಆಫೀಸ್ನಲ್ಲಿ 610 ಕೋಟಿ ಸಂಗ್ರಹಿಸುವ ಮೂಲಕ ದಾಖಲೆಯನ್ನು ಮಾಡಿದೆ. 

ಇಡೀ ವಿಶ್ವವೇ ಕನ್ನಡ ಸಿನಿಮಾರಂಗದತ್ತ ತಿರುಗಿ ನೋಡುವಂತೆ ಮಾಡಿದ ಚಿತ್ರ ಕೆಜಿಎಫ್ 2, ಪ್ರಶಾಂತ್ ನೀಲ್ ಹಾಗೂ ಯಶ್ ಕಾಂಬಿನೇಷನ್ ನಲ್ಲಿ ಅದ್ಭುತವಾಗಿ ಮೂಡಿ ಬಂದಿದೆ. ಈ ಚಿತ್ರವನ್ನು ಹೊಂಬಾಳೆ ಫಿಲಂಸ್ ನ ವಿಜಯ್ ಕಿರಗಂದೂರು ಅವರು ನಿರ್ಮಿಸಿದ್ದಾರೆ. ಪ್ರಶಾಂತ್ ನೀಲ್ ನಿರ್ದೇಶಿಸಿದ್ದು ಯಶ್, ರವೀನಾ ಟಂಡನ್, ಸಂಜಯ್ ದತ್, ಪ್ರಕಾಶ್ ರೈ, ಶ್ರೀನಿಧಿ ಟಂಡನ್ ಸೇರಿದಂತೆ ಹಲವರು ಅಭಿನಯಿಸಿದ್ದಾರೆ. ಸಿನಿಮಾ ರಿಲೀಸ್ ಆದ ಮೊದಲ ದಿನವೇ ಬಾಕ್ಸ್ ಆಫೀಸ್ ನಲ್ಲಿ ಚಿಂದಿ ಉಡಾಯಿಸಿತ್ತು.  ಕೆಜಿಎಫ್ ರಿಲೀಸ್ ಆದ ಮೊದಲ ದಿನವೇ 138 ಕೋಟಿಯನ್ನು ಬಾಚಿಕೊಂಡಿತ್ತು.    

ಐದೇ ದಿನದಲ್ಲಿ ದಾಖಲೆ ಮಟ್ಟದಲ್ಲಿ ಕಲೆಕ್ಷನ್ ಮಾಡಿದ ಕೆಜಿಎಫ್ 2 ಚಿತ್ರ. ಕೇವಲ 5 ದಿನಗಳಲ್ಲಿ ಬರೋಬ್ಬರಿ 610 ಕೋಟಿಗೂ ಅಧಿಕ ಹಣವನ್ನು ಬಾಚಿಕೊಂಡಿದೆ. ಭಾರತ ಒಂದರಲ್ಲೇ 546 ಕೋಟಿ ರೂಪಾಯಿಯನ್ನು ಕಲೆಕ್ಷನ್ ಮಾಡಿದೆ. ವಿದೇಶಗಳಲ್ಲಿ 142 ಕೋಟಿ ರೂಪಾಯಿ ಹರಿದು ಬಂದಿದೆ. ಕೇರಳದಲ್ಲಿ 32 ಕೋಟಿ ರೂಪಾಯಿ ಗಳಿಸಿದೆ. ಹಿಂದಿಯಲ್ಲಿ 219 ಕೋಟಿ ಕಲೆಕ್ಷನ್ ಮಾಡಿದೆ. ಕೇವಲ 5 ದಿನಗಳಲ್ಲಿ ಅತಿ ಹೆಚ್ಚು ಗಳಿಸಿದ ಚಿತ್ರವಾಗಿ ಹೊರಹೊಮ್ಮಿದೆ. ಈ ಮೂಲಕ ಎಲ್ಲಾ ದಾಖಲೆಗಳನ್ನು ಮೀರಿಸಿದ್ದು, ಎರಡನೇಯ ದಿನ ಇನ್ನೂ ಹೆಚ್ಚು ಕಲೆಕ್ಷನ್ ಮಾಡಬಹುದು ಎಂದು ಹೇಳಲಾಗಿದೆ.