ಕೇವಲ ಇನ್ನೆರಡು ದಿನಗಳಲ್ಲಿ 240 ಕೋಟಿ ಸಂಗ್ರಹಿಸಿದ ಕೆಜಿಎಫ್ 2
Updated:Saturday, April 16, 2022, 17:29[IST]

ಕೆಜಿಎಫ್ 2 ಚಿತ್ರವ ಬೆಳ್ಳಿಪರದೆ ಮೇಲ್ ಕಮಾಲ್ ಮಾಡಿದೆ. ಚಿತ್ರ ರಿಲೀಸ್ ಗೂ ಮುನ್ನವೇ ಆನ್ ಲೈನ್ ನಲ್ಲಿ ಟೆಕೆಟ್ ಗಳು ಸೋಲ್ಡ್ ಔಟ್ ಆಗುವ ಮೂಲಕ ಬಾಕ್ಸ್ ಆಫೀಸ್ನಲ್ಲಿ ಮೋಡಿಯನ್ನು ಮಾಡಿತ್ತು. ಇದೀಗ ನಿರೀಕ್ಷೆಯಂತೆ ಚಿತ್ರ ಬಾಕ್ಸ್ ಆಫೀಸ್ನಲ್ಲಿ 240 ಕೋಟಿ ಸಂಗ್ರಹಿಸುವ ಮೂಲಕ ದಾಖಲೆಯನ್ನು ಮಾಡಿದೆ. ಕೇವಲ 2 ದಿನಗಳಲ್ಲಿ ಅತಿ ಹೆಚ್ಚು ಗಳಿಸಿದ ಚಿತ್ರವಾಗಿ ಹೊರಹೊಮ್ಮಿದೆ. ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹು ನಿರೀಕ್ಷಿತ 'ಕೆಜಿಎಫ್ ಅಧ್ಯಾಯ 2' ಕೊನೆಗೂ ಚಿತ್ರಮಂದಿರಕ್ಕೆ ಬಂದು ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆಯುತ್ತಿದೆ.
ರಾಕಿ ಭಾಯ್ನ ಹವಾ ಪ್ರಪಂಚದಾದ್ಯಂತ ಹರಡಿದ್ದು, ಕೇವಲ ಹಿಂದಿಯಲ್ಲಿ 100 ಕೋಟಿ ಕ್ಲಬ್ಗೆ ಸೇರಿದೆ. ಈ ಚಿತ್ರ ಯಶಸ್ವಿಯಾಗಿ 240 ಕೋಟಿ ಕಲೆಕ್ಷನ್ ಮಾಡಿದೆ. ಇದು ಗಲ್ಲಾಪೆಟ್ಟಿಗೆಯಲ್ಲಿ ಸಂಭವಿಸಿದ ಅಪರೂಪದ ವಿದ್ಯಮಾನವಾಗಿದೆ. ಕರ್ನಾಟಕ ಹಾಗೂ ಕೇರಳದಲ್ಲಿ ಕೇವಲ ಎರಡೇ ದಿನದಲ್ಲಿ ಅತಿ ಹೆಚ್ಚು ಕಲೆಕ್ಷನ್ ಮಾಡಿದ ಮೊದಲ ಚಿತ್ರವಾಗಿದೆ. ರಾಕಿಂಗ್ ಸ್ಟಾರ್ ಯಶ್ ಅವರ ಮ್ಯಾಜಿಕ್ ಇದಾಗಿದೆ ಎಂದು ಅಭಿಮಾನಿಗಳು ವಿವರಿಸಿದ್ದಾರೆ. ಕನ್ನಡ, ತೆಲುಗು, ಹಿಂದಿ, ತಮಿಳು ಮತ್ತು ಮಲಯಾಳಂ ಭಾಷೆಗಳಲ್ಲಿ ಏಪ್ರಿಲ್ 14, 2022 ರಂದು ರಾಷ್ಟ್ರಾದ್ಯಂತ ಬಿಡುಗಡೆಯಾಗಿತ್ತು.
ಅತ್ಯಂತ ಬೇಡಿಕೆಯ ನಿರ್ದೇಶಕರಲ್ಲಿ ಒಬ್ಬರಾದ ಪ್ರಶಾಂತ್ ನೀಲ್ ಚಿತ್ರ ಕಥೆ ಬರೆದು ನಿರ್ದೇಶಿಸಿದ್ದಾರೆ ಮತ್ತು ಹೊಂಬಾಳೆ ಫಿಲಂಸ್ ಬ್ಯಾನರ್ ಅಡಿಯಲ್ಲಿ ವಿಜಯ್ ಕಿರಗಂದೂರು ನಿರ್ಮಿಸಿದ್ದಾರೆ. ಪ್ಯಾನ್-ಇಂಡಿಯಾ ನಿರ್ಮಾಣ ಸಂಸ್ಥೆಗಳಲ್ಲಿ ಒಂದಾದ ಹೊಂಬಾಳೆ ಫಿಲ್ಮ್ಸ್ ಮುಂದಿನ ಎರಡು ವರ್ಷಗಳಲ್ಲಿ ಪ್ರಭಾಸ್ ಅಭಿನಯದ ಬಹುನಿರೀಕ್ಷಿತ ಚಿತ್ರ 'ಸಾಲಾರ್' ಸೇರಿದಂತೆ ಭಾರತೀಯ ಚಿತ್ರರಂಗದಲ್ಲಿ ಕೆಲವು ದೊಡ್ಡ ಚಲನಚಿತ್ರಗಳನ್ನು ಪ್ರದರ್ಶಿಸಲು ಸಿದ್ಧವಾಗಿದೆ.