KGF 2 Japan : ಜಪಾನ್ ನಲ್ಲೂ ಸದ್ದು ಮಾಡುತ್ತಿದೆ ರಾಕಿ ಭಾಯ್ ಹವಾ

By Infoflick Correspondent

Updated:Tuesday, May 3, 2022, 07:30[IST]

KGF 2  Japan : ಜಪಾನ್ ನಲ್ಲೂ ಸದ್ದು ಮಾಡುತ್ತಿದೆ ರಾಕಿ ಭಾಯ್ ಹವಾ

ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಸಿನಿಮಾ ವಿಶ್ವಾದ್ಯಂತ ಹವಾ ಸೃಷ್ಠಿಸಿದೆ. ನೆರೆಯ ದೇಶ ಪಾಕಿಸ್ತಾನದಿಂದ ಹಿಡಿದು ಹಲವೆಡೆ ಕೆಜಿಎಫ್ ಚಿತ್ರ ರಿಲೀಸ್ ಆಗಿತ್ತು.ನಂತರ ಹಲವು ಪ್ರಯತ್ನಗಳ ಬಳಿಕ ಕೆಜಿಎಫ್ ಚಿತ್ರ ಜಪಾನ್ನಲ್ಲೂ ಸಖತ್ ಸದ್ದು ಮಾಡುತ್ತಿದೆ. ಕೇವಲ ಕನ್ನಡದಲ್ಲಿ ಮಾತ್ರವಲ್ಲದೇ ಬೇರೆ ಬೇರೆ ದೇಶ-ವಿದೇಶಗಳಲ್ಲೂ ಮತ್ತು ಬೇರೆ ಬೇರೆ ಭಾಷೆಗಳಲ್ಲೂ ಕಮಾಲ್ ಮಾಡಿರು ಕೆಜಿಎಫ್ ಗೆ ವ್ಯಾಪಕ ಪ್ರತಿಕ್ರಿಯೆ ಹಾಗೂ ಪ್ರಶಂಸೆಗಳು ವ್ಯಕ್ತವಾಗುತ್ತಿದೆ. ಸಿನಿಮಾ ನೋಡಿದ ಪ್ರತಿಯೊಬ್ಬರೂ ಸಂತಸ ಹಂಚಿಕೊಂಡಿದ್ದಾರೆ. 

ಸಿನಿಮಾದಲ್ಲಿ ಪಾತ್ರಗಳು ಎಲ್ಲರಿಗೂ ಕನೆಕ್ಟ್ ಆಗುವಂತೆ ಎಮೋಷನ್ ಇದ್ದು, ತಾಯಿ ಮಗನ ಪಾತ್ರ ಅದ್ಭುತವಾಗಿ ಮೂಡಿ ಬಂದಿದೆ. ಚಿತ್ರವನ್ನು ನೋಡದೇ ಇದ್ದರೆ ಮಿಸ್ ಮಾಡಿಕೊಳ್ಳುವುದಂತೂ ಖಂಡಿತ, ಚಿತ್ರದಲ್ಲಿನ ಪ್ರತಿಯೊಬ್ಬರ ನಟನೆಯೂ ಸೂಪರ್ ಆಗಿದೆ. ಹಠ, ಚಾಣಾಕ್ಷತನ, ಅಸೂಯೆ, ಕ್ರೂರಿತನ ಕೂಡಿದ ಸಿನಿಮಾದಲ್ಲಿ ಗಟ್ಟಿಗ ರಾಕಿಭಾಯ್ ತನ್ನ ಬುದ್ಧಿವಂತಿಕೆಯಿಂದ ನಡೆಯುವ ಚಿತ್ರ ಚೆನ್ನಾಗಿದೆ. ಹೀಗಾಗಿ ಈ ಸಿನಿಮಾ ಈಗ ದೇಶವಷ್ಟೇ ಅಲ್ಲದೇ, ವಿದೇಶಗಳಲ್ಲೂ ಭಾರೀ ಸದ್ದು ಮಾಡಿದೆ. ಈ ವೇಳೆ ಜಾಪಾನ್ ನಲ್ಲಿನ ಕನ್ನಡಾಭಿಮಾನಿಗಳು ಚಿತ್ರವನ್ನು ಟೋಕಿಯೋದಲ್ಲಿ ಕೆಜಿಎಫ್ ಚಿತ್ರವನ್ನು ರಿಲೀಸ್ ಮಾಡಿಸಿದ್ದಾರೆ. ಯಶ್ ಜೊತೆ ವಿಡಿಯೋ ಕಾಲ್ ಮಾಡಿ ಮಾತನಾಡಿದ್ದಾರೆ. ಕೆಜಿಎಫ್ ಸಿನಿಮಾ ಚೆನ್ನಾಗಿ ಮೂಡಿ ಬಂದಿದೆ. ಕನ್ನಡ ಭಾಷೆಯಲ್ಲಿ ನಾವು ಸಿನಿಮಾ ನೋಡುತ್ತಿದ್ದೇವೆ ಎಂದು ಹೇಳಿದ್ದಾರೆ.  

ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಚಾಪ್ಟರ್ -2 ಚಿತ್ರ ಬಿಡುಗಡೆಯಾಗಿ ವಾರ ಕಳೆದಿಲ್ಲ. ಅದಾಗಲೇ ಯಾರೂ ಊಹೆ ಮಾಡದ ಹಾಗೆ, ಭಾರತ ಚಿತ್ರರಂಗ ಮಾತ್ರವಲ್ಲದೆ, ಇಡೀ ವಿಶ್ವವೇ ತಿರುಗಿ ನೋಡುವಂತೆ ಮಾಡಿದೆ. ಹಾಲಿವುಡ್ ಚಿತ್ರರಂಗದ ಜನರು ಕೂಡ ತಮ್ಮ ಬಾಯಿ ಮೇಲೆ ಬೆರಳಿಟ್ಟುಕೊಳ್ಳುವಂತೆ ಕೆಜಿಎಫ್ 2 ಚಿತ್ರ ಮೂಡಿ ಬಂದಿದೆ. ಪ್ರಶಾಂತ್ ನೀಲ್ ಅವರ ನಿರ್ದೇಶನದ ಕೆಜಿಎಫ್ ಮೊದಲನೆ ಅಧ್ಯಾಯ ಇಡೀ ದೇಶಾದ್ಯಂತ ಸಂಚಲನ ಸೃಷ್ಟಿಸಿತ್ತು. ಈ ಚಿತ್ರವನ್ನು ಹೊಂಬಾಳೆ ಫಿಲಂಸ್ ನ ವಿಜಯ್ ಕಿರಗಂದೂರು ಅವರು ನಿರ್ಮಿಸಿದ್ದಾರೆ. ಪ್ರಶಾಂತ್ ನೀಲ್ ನಿರ್ದೇಶಿಸಿದ್ದು ಯಶ್, ರವೀನಾ ಟಂಡನ್, ಸಂಜಯ್ ದತ್, ಪ್ರಕಾಶ್ ರೈ, ಶ್ರೀನಿಧಿ ಟಂಡನ್ ಸೇರಿದಂತೆ ಹಲವರು ಅಭಿನಯಿಸಿದ್ದಾರೆ.