ಈ ಊರಿನಲ್ಲಿ ಕೆಜಿಎಫ್ 2 ಸಿನಿಮಾ ಇಲ್ಲ ! ಅಭಿಮಾನಿಗಳ ಆಕ್ರೋಶ ಪ್ರತಿಭಟನೆ
Updated:Wednesday, April 13, 2022, 18:46[IST]

ರಾಜ್ಯಾದ್ಯಂತ ಗುರುವಾರ ಕೆಜಿಎಫ್ 2 ಬಿಡುಗಡೆಯಾಗಲಿದ್ದು, ಎಲ್ಲಿಯೂ ಈ ಸಿನಿಮಾದೇ ಹವಾ ಭರ್ಜರಿಯಾಗಿದೆ. ಒಂದು ವಾರದ ಟಿಕೇಟ್ ಈಗಲೇ ಬುಕ್ ಆಗಿದ್ದು ಎಲ್ಲೆಡೆ ಹೌಸ್ ಫುಲ್ ಆಗಿದೆ. ಹಾಗಾಗಿ ಕೆಜಿಎಫ್ 2 ಸಿನಿಮಾ ಬಿಡುಗಡೆಯಾಗದ ಊರಿಲ್ಲ ಎನ್ನಬಹುದು. ಪ್ರತಿ ಊರಿನಲ್ಲೂ ಯಶ್ ಅಭಿಮಾನಿಗಳು ಅದ್ದೂರಿಯಾಗಿ ಚಿತ್ರ ಬಿಡುಗಡೆ ಮಾಡಲು ಕ್ಷಣಗಣನೆ ಎಣಿಸುತ್ತಿದ್ದಾರೆ. ಆದರೆ ಈ ಊರಿನಲ್ಲಿ ಯಶ್ ಅಭಿಮಾನಿಗಳು ಪ್ರತಿಭಟನೆಗೆ ಕೂತಿದ್ದಾರೆ ಏಕೆ ಗೊತ್ತೆ ?!
ಚಿಕ್ಕಮಗಳೂರು ನಗರದಲ್ಲಿ ಕೆಜಿಎಫ್ 2 ಪ್ರದರ್ಶನ ಇಲ್ಲ ಎಂಬುದು ಆಶ್ಚರ್ಯಕರ ಸುದ್ದಿ ! ಹೌದು. ಈ ಊರಿನ ಈ ಟಾಕೀಸ್ ನಲ್ಲಿ ಕೆಜಿಎಫ್ 2 ಸಿನಿಮಾ ಹಾಕಿಲ್ಲ ಎಂದು ಅಭಿಮಾನಿಗಳು ಆಕ್ರೋಶ್ ವ್ಯಕ್ತಪಡಿಸುತ್ತಿದ್ದಾರೆ.
ಚಿಕ್ಕಮಗಳೂರು ನಗರದಲ್ಲಿ ಕೆಜಿಎಫ್ 2 ಪ್ರದರ್ಶನ ಇಲ್ಲವೆಂದು ನಾಗಲಕ್ಷ್ಮಿ ಥಿಯೇಟರ್ ಮುಂಭಾಗದಲ್ಲಿ ಯಶ್ ಅಭಿಮಾನಿಗಳು ಬುಧವಾರ ಪ್ರತಿಭಟನೆ ನಡೆಸಿದ್ದಾರೆ. ಕೆಜಿಎಫ್ 2 ಪ್ರದರ್ಶನ ಇಲ್ಲವೆಂದು ಯಶ್ ಅಭಿಮಾನಿಗಳು ಥಿಯೇಟರ್ ಮಾಲೀಕರ ವಿರುದ್ಧ ಪ್ರತಿಭಟನೆ ನಡೆಸಿ, ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಶಾಸಕ ಸಿ.ಟಿ.ರವಿ, ಪ್ರತಿಭಟನಾಕಾರರ ಮನವೋಲಿಸಿ, ನಟ ಯಶ್ ಹಾಗೂ ವಿತರಕರ ಜೊತೆ ಮಾತನಾಡುವ ಭರವಸೆ ನೀಡಿದ್ದಾರೆ.
ಶಾಸಕ ಸಿ.ಟಿ.ರವಿ ಅವರ ಆಶ್ವಾಸನೆಯಿಂದ ಅಭಿಮಾನಿಗಳು ಮನೆಗೆ ತೆರಳಿದ್ದಾರೆ. ತಾಂತ್ರಿಕದೋಷ ಆಗಿರಬಹುದು ಆದರೆ ನಾಳೆ ಕೆಜಿಎಫ್ 2 ಸಿನಿಮಾ ಚಿಕ್ಕಮಗಳೂರು ಊರಿನ ಈ ಥಿಯೆಟರ್ ನಲ್ಲಿ ಬಿಡುಗಡೆ ಆಗುತ್ತದೆ ಎಂಬ ನಂಬಿಕೆ ಅಭಿಮಾನಳು ಹೊಂದಿದ್ದಾರೆ. ಏನಾಗುತ್ತದೆ ಎಂದು ಕಾದುನೋಡಬೇಕು.