KGF 2 : ಬಾಲಿವುಡ್ ಬಾಕ್ಸ್ ಆಫೀಸ್ ನಲ್ಲಿ ಹೊಸ ದಾಖಲೆ ಬರೆದ ಕೆಜಿಎಫ್2 ಬಗ್ಗೆ ಇಲ್ಲಿದೆ ವಿಶೇಷ ಮಾಹಿತಿ

By Infoflick Correspondent

Updated:Friday, April 29, 2022, 14:07[IST]

KGF 2 : ಬಾಲಿವುಡ್ ಬಾಕ್ಸ್ ಆಫೀಸ್ ನಲ್ಲಿ ಹೊಸ ದಾಖಲೆ ಬರೆದ ಕೆಜಿಎಫ್2 ಬಗ್ಗೆ ಇಲ್ಲಿದೆ ವಿಶೇಷ ಮಾಹಿತಿ

ಕೆಜಿಎಫ್​ 2’ ಸಿನಿಮಾ ಬಾಲಿವುಡ್ ಇತಿಹಾಸದಲ್ಲೇ ಹೊಸ ದಾಖಲೆ ಬರೆದಿದೆ. ಮೊದಲ ದಿನ ಈ ಚಿತ್ರ ಯಾರೂ ಊಹಿಸದಷ್ಟು ಗಳಿಕೆ ಮಾಡಿದೆ. ಯಶ್ ಅಬ್ಬರಕ್ಕೆ ಅಲ್ಲಿನ ಬಾಕ್ಸ್ ಆಫೀಸ್  ಉಡೀಸ್ ಆಗಿದೆ. ಈ ಚಿತ್ರ ಮೊದಲ ದಿನ 53.95 ಕೋಟಿ ರೂಪಾಯಿ ಗಳಿಕೆ ಮಾಡಿದೆ! ಮೊದಲ ದಿನ ಅತಿ ಹೆಚ್ಚು ಗಳಿಕೆ ಮಾಡಿದ ಚಿತ್ರ ಎಂಬ ಖ್ಯಾತಿ ‘ಕೆಜಿಎಫ್​ 2’ಗೆ ಸಿಕ್ಕಿದೆ. ಸಿನಿಮಾ ತೆರೆಕಂಡು ಮೂರು ವಾರ ಪೂರ್ಣಗೊಳ್ಳುತ್ತಾ ಬಂದಿದೆ. ಆದಾಗ್ಯೂ ಚಿತ್ರದ ಕಲೆಕ್ಷನ್ ತಗ್ಗುತ್ತಿಲ್ಲ. ಬಾಲಿವುಡ್​ನಲ್ಲಿ ಸಖತ್ ಸದ್ದು ಮಾಡಿದ ‘ಬಜರಂಗಿ ಭಾಯಿಜಾನ್’ (320.34 ಕೋಟಿ ರೂಪಾಯಿ), ‘ಸುಲ್ತಾನ್’ (300 ಕೋಟಿ ರೂಪಾಯಿ), ‘ಪದ್ಮಾವತ್​’ (302 ಕೋಟಿ ರೂಪಾಯಿ) ದಾಖಲೆಗಳನ್ನು ‘ಕೆಜಿಎಫ್ 2’ ಹಿಂದಿಕ್ಕಿದೆ.   

ಬಾಲಿವುಡ್​ನಲ್ಲಿ ಅತಿ ಹೆಚ್ಚು ಕಲೆಕ್ಷನ್ ಮಾಡಿದ ಸಿನಿಮಾಗಳ ಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೇರಲು ಇನ್ನು ಕೆಲವೇ ಸಿನಿಮಾಗಳನ್ನು ಹಿಂದಿಕ್ಕಿದರೆ ಸಾಕು. ಸದ್ಯ ₹ 343 ಕೋಟಿಗಳ ಸಂಗ್ರಹದೊಂದಿಗೆ K.G.F 2 ಹಿಂದಿಯಲ್ಲಿ ಅತಿ ಹೆಚ್ಚು ಗಳಿಕೆಯ ಮೂರನೇ ಚಿತ್ರವಾಗಿದೆ. ಮಾರುಕಟ್ಟೆಯಲ್ಲಿ ₹135 ಕೋಟಿಗಿಂತ ಹೆಚ್ಚಿನ ಗಳಿಕೆ ವಿಶ್ವಾದ್ಯಂತ 1ನೇ ವಾರದಲ್ಲಿ ಸುಮಾರು ₹800 ಕೋಟಿ ಗಳಿಕೆ ಕಂಡಿದೆ. 

ಕೆಜಿಎಫ್1&2 ಹಲವು ಪ್ರಥಮಗಳನ್ನು ಹೊಂದಿದೆ.  K.G.F ಚಾಪ್ಟರ್ 1 ಭಾರತದಲ್ಲಿ 5 ಭಾಷೆಗಳಲ್ಲಿ ಬಿಡುಗಡೆಯಾದ ಮೊದಲ ಚಲನಚಿತ್ರವಾಗಿದೆ. ಕೆಜಿಎಫ್ 1 ₹ 100, 200 ಮತ್ತು 250 ಕೋಟಿ ಗಡಿ ದಾಟಿದ ಮೊದಲ ಕನ್ನಡ ಚಿತ್ರವಾಯಿತು.  K.G.F 2 ಟ್ರೈಲರ್ ಮೊದಲ 24 ಗಂಟೆಗಳಲ್ಲಿ ಹೆಚ್ಚು ವೀಕ್ಷಿಸಲ್ಪಟ್ಟ ಟ್ರೈಲರ್ ಆಗಿದೆ.  K.G.F1 2019 ರಲ್ಲಿ Amazon Prime ನಲ್ಲಿ ಅತಿ ಹೆಚ್ಚು ವೀಕ್ಷಿಸಿದ ಚಲನಚಿತ್ರವಾಗಿದೆ. K.G.F2 ಬಿಡುಗಡೆಯಾದಾಗಿನಿಂದ ಪ್ರತಿದಿನ ಹೊಸ ದಾಖಲೆಗಳನ್ನು ನಿರ್ಮಿಸುವ ಮೂಲಕ ಬಾಕ್ಸ್ ಆಫೀಸ್‌ನಲ್ಲಿ ದಾಖಲೆ ಮುರಿಯುತ್ತಿದೆ. 

ಈ ಸಂದರ್ಭದಲ್ಲಿ ಮಾತನಾಡಿದ ಹೊಂಬಾಳೆ ಫಿಲಂಸ್‌ನ ಪಾಲುದಾರ ಮತ್ತು ಸಹ-ಸಂಸ್ಥಾಪಕ ಶ್ರೀ.ಚಲುವೇಗೌಡ, “ಪ್ರಪಂಚದ ಮೂಲೆಮೂಲೆಯಿಂದ ನಮಗೆ ಸಿಗುತ್ತಿರುವ ಅವಿರತ ಬೆಂಬಲ ಮತ್ತು ಪ್ರೋತ್ಸಾಹದಿಂದ ನಾವು ಮುಳುಗಿದ್ದೇವೆ ಮತ್ತು ವಿನಮ್ರರಾಗಿದ್ದೇವೆ. ನಮ್ಮೊಂದಿಗೆ ಈ ರೋಮಾಂಚಕ ಪ್ರಯಾಣದ ಭಾಗವಾಗಿರುವ ಎಲ್ಲರಿಗೂ ನಾನು ಧನ್ಯವಾದ ಹೇಳಲು ಬಯಸುತ್ತೇನೆ.  ನಿಮ್ಮೆಲ್ಲರಿಗೂ ತುಂಬಾ ಕೃತಜ್ಞರಾಗಿರುತ್ತೇನೆ! ” ಎಂದಿದ್ದಾರೆ.