KGF 2 : ಒಟಿಟಿಯಲ್ಲಿ ಕೆಜಿಎಫ್2 ಆದರೆ ಈ ಷರತ್ತುಗಳು ಅನ್ವಯ!

By Infoflick Correspondent

Updated:Tuesday, May 17, 2022, 10:04[IST]

KGF 2 : ಒಟಿಟಿಯಲ್ಲಿ ಕೆಜಿಎಫ್2 ಆದರೆ ಈ ಷರತ್ತುಗಳು ಅನ್ವಯ!

ಭಾರತೀಯ ಚಿತ್ರರಂಗದಲ್ಲಿ ಹತ್ತಾರು ಹೊಸ ದಾಖಲೆ ನಿರ್ಮಾಣ ಮಾಡಿರುವ ಪ್ರಶಾಂತ್ ನೀಲ್ ನಿರ್ದೇಶನದ ಕೆಜಿಎಫ್​​ 2 , 2022 ರ ಅತ್ಯಂತ ಜನಪ್ರಿಯ ಚಲನಚಿತ್ರಗಳಲ್ಲಿ ಒಂದು. ಈಗಲೇ ಕೆಜಿಎಫ್2  ಒಟಿಟಿ ವೇದಿಕೆಯತ್ತ ಹೆಜ್ಜೆಯಿಟ್ಟಿದೆ. ಚಿತ್ರಮಂದಿರಗಳಿಗೆ ಹೋಗಿ, ಸಿನಿಮಾ ನೋಡಲು ಸಾಧ್ಯವಿಲ್ಲದವರು ಇದೀಗ ಕೆಜಿಎಫ್​ ಚಾಪ್ಟರ್ 2 ಮನೆಯಲ್ಲಿ ಕುಳಿತುಕೊಂಡು ವೀಕ್ಷಣೆ ಮಾಡಬಹುದಾಗಿದೆ. ಕೆಜಿಎಫ್ 2 ಸಿನಿಮಾನ ನಾನು ಮನೆಯಲ್ಲೇ ಕೂತು ಬೇಕಷ್ಟು ಸಲ ನೋಡಿ ಎಂಜಾಯ್ ಮಾಡೋಣ ಅಂತ ನೀವಂದುಕೊಂಡಿದ್ದರೇ, ಅದಕ್ಕೂ ಅಮೇಜಾನ್ ಪ್ರೈಂ ಮತ್ತೊಂದು ಟ್ವಿಸ್ಟ್ ನೀಡಿದೆ. ಈ ಷರತ್ತುಗಳು ಅನ್ವಯವಾಗಲಿವೆ. 

ಅಮೆಜಾನ್ ಪ್ರೈಮ್​ನಲ್ಲಿ ಕೆಜಿಎಫ್ ಚಾಪ್ಟರ್ 2 ವೀಕ್ಷಿಸಬಹುದಾಗಿದೆ. ಆದರೆ ಈಗಲೇ ಕೆಜಿಎಫ್ ಚಾಪ್ಟರ್​ 2ವನ್ನು ಅಮೆಜಾನ್ ಪ್ರೈಮ್​ನಲ್ಲಿ  ವೀಕ್ಷಿಸೋಕೆ ನೀವು ನಿಮ್ಮಲ್ಲಿರೋ ಪ್ರೈಮ್ ಮೆಂಬರ್​ಶಿಪ್ ಬಿಟ್ಟು ಬೇರೆ ಬಾಡಿಗೆ  ನೀಡಬೇಕಾಗುತ್ತದೆ. 

ಅಮೆಜಾನ್ ಪ್ರೈಮ್​ 'ಚಲನಚಿತ್ರ ಬಾಡಿಗೆ' ಯೋಜನೆಯ ಭಾಗವಾಗಿ Amazon Prime ವೀಡಿಯೊದಲ್ಲಿ ಕೆಜಿಎಫ್ ಚಾಪ್ಟರ್ 2 ಲಭ್ಯವಿದೆ. ಪ್ಲಾಟ್‌ಫಾರ್ಮ್‌ನಲ್ಲಿ ಅಭಿಮಾನಿಗಳು ಚಲನಚಿತ್ರವನ್ನು ರೂ. 199 ಗೆ ಬಾಡಿಗೆಗೆ ಪಡೆಯಬಹುದು. ಕೆಜಿಎಫ್ 2 ಹಿಂದಿ, ಕನ್ನಡ, ತಮಿಳು, ತೆಲುಗು ಮತ್ತು ಮಲಯಾಳಂ ಸೇರಿದಂತೆ 5 ಭಾಷೆಗಳಲ್ಲಿ ಪ್ರೇಕ್ಷಕರಿಗೆ ಲಭ್ಯವಾಗಲಿದೆ. 

ಅಮೆಜಾನ್ ಪ್ರೈಮ್​ನಲ್ಲಿ ನೀವು ಮೆಂಬರ್​ಶಿಪ್​ ಹೊಂದಿದ್ದರೂ ಹೆಚ್ಚುವರಿ 199 ರೂ. ಹಣವನ್ನು ಕೆಜಿಎಫ್ ಚಾಪ್ಟರ್ 2 ಸಿನಿಮಾವನ್ನು ಬಾಡಿಗೆಗೆ ಪಡೆಯಬೇಕು. ಬಾಡಿಗೆಗೆ ಪಡದು ಸಿನಿಮಾ ವೀಕ್ಷಿಸಲು ಆರಂಭಿಸಿದ ಸಮಯದಿಂದ ಒಟ್ಟು 48 ಗಂಟೆಗಳವರೆಗೆ ಮಾತ್ರ ನೀವು ಕೆಜಿಎಫ್ ಚಾಪ್ಟರ್ 2 ಸಿನಿಮಾವನ್ನು ಅಮೆಜಾನ್ ಪ್ರೈಮ್​ನಲ್ಲಿ ವೀಕ್ಷಿಸಬಹುದು. 

ಜೀ5 ಆಯಪ್​ನಲ್ಲಿ ಈ ಮೊದಲು ಸಾಕಷ್ಟು ಸಿನಿಮಾಗಳು ಇದೇ ಮಾದರಿಯಲ್ಲಿ ರಿಲೀಸ್ ಆಗಿವೆ. ಸಲ್ಮಾನ್ ಖಾನ್ ನಟನೆಯ 'ರಾಧೆ' ಚಿತ್ರವನ್ನು ಇದೇ ರೀತಿಯಲ್ಲಿ ರಿಲೀಸ್ ಮಾಡಲಾಗಿತ್ತು. ಆದರೆ, ಅಮೇಜಾನ್​ ಪ್ರೈಮ್​ ವಿಡಿಯೋದಲ್ಲಿ ಈ ರೀತಿಯ ಪ್ರಯೋಗ ನಡೆದಿರಲಿಲ್ಲ. ಈಗ 'ಕೆಜಿಎಫ್ 2' ಮೂಲಕ ಸಿನಿಮಾಗಳನ್ನು ರೆಂಟ್​​ಗೆ ನೀಡುವ ತಂತ್ರವನ್ನು ಆರಂಭಿಸಿದೆ.