‌‌ಅಮುಲ್ ಜಾಹಿರಾತಿನಲ್ಲೂ ಈಗ ಯಶ್ ಹವಾ, ಕೆಜಿಎಫ್2 ಮೆಚ್ಚಿಕೊಂಡ ಅಮುಲ್

By Infoflick Correspondent

Updated:Saturday, April 23, 2022, 19:55[IST]

‌‌ಅಮುಲ್ ಜಾಹಿರಾತಿನಲ್ಲೂ ಈಗ ಯಶ್ ಹವಾ, ಕೆಜಿಎಫ್2 ಮೆಚ್ಚಿಕೊಂಡ ಅಮುಲ್

ಕೆಜಿಎಫ್ ಚಾಪ್ಟರ್​ 2' ಸಿನಿಮಾ ದಾಖಲೆಯ ಮೇಲೆ ದಾಖಲೆ ಬರೆಯುತ್ತಲೇ ಇದೆ. ಈ ಚಿತ್ರದಿಂದ ಯಶ್​ಗೆ ಬೇಡಿಕೆ ಹೆಚ್ಚಿದೆ. ಸಾಕಷ್ಟು ಜಾಹೀರಾತುಗಳಲ್ಲಿ ನಟಿಸೋಕೆ ಯಶ್​ಗೆ ಆಫರ್​ಗಳು ಬರುತ್ತಿವೆ. ಈಗ ಅಮುಲ್' ಕಂಪನಿ  'ಕೆಜಿಎಫ್ ಚಾಪ್ಟರ್​ 2'  ಯಶ್ ಸಿನಿಮಾ ಶೈಲಿಯಲ್ಲಿ ಹಾಲಿನ ಉತ್ಪನ್ನ, ಐಸ್​ಕ್ರೀಮ್​ಗಳನ್ನು ಮಾರಾಟ ಮಾಡುವ ಜಾಹೀರಾತು‌ಮಾಡುತ್ತಿದೆ. 

ಅಮುಲ್ ಇಂಡಿಯಾವು ವಿಶ್ವದಲ್ಲಿ ನಡೆಯುವು ಸೆನ್ಸೇಷನಲ್​​ ವಿಷಯಗಳನ್ನು ಕಾಮಿಕ್​ ರೂಪದಲ್ಲಿ ಪ್ರಕಟಿಸುತ್ತದೆ. ಅಮುಲ್​ ಇಂಡಿಯಾದ ಕ್ರಿಯೇಟಿವಿಟಿಯು ಎಲ್ಲರ ಗಮನ ಸೆಳೆಯುವಂತೆ ಮಾಡುತ್ತದೆ. 

ಅಮುಲ್  ಸದಾ ಸದ್ಯದ ಟ್ರೆಂಡ್​ಗೆ ತಕ್ಕಂತೆ ಜಾಹೀರಾತುಗಳನ್ನು ಸಿದ್ಧಪಡಿಸಿ ಪೋಸ್ಟ್ ಮಾಡುತ್ತದೆ. ಕೆಜಿಎಫ್ 2' ಸಿನಿಮಾದಲ್ಲಿ ರಾಕಿ ಭಾಯ್ ಚಿನ್ನದ ಗಟ್ಟಿಹಿಡಿದು ಕೊಂಡಿರುವ ದೃಶ್ಯ ಬಹಳ ಪ್ರಸಿದ್ಧಿ ಪಡೆದಿದ್ದು, ಒಂದು ಚಿನ್ನದ ಗಟ್ಟಿಗಾಗಿ ಆತ ಮಾಡುವ ಕೆಲಸ ಸಿನಿಮಾದಲ್ಲಿ ಜನಮೆಚ್ಚುಗೆ ಪಡೆದುಕೊಂಡಿದೆ. ಇದೇ ಮಾದರಿಯಲ್ಲಿ ಪೋಸ್ಟ್ ಒಂದನ್ನು ಮಾಡಿದೆ ಅಮುಲ್​. ಬೈಕ್ ಮೇಲೆ ರಾಕಿ ಕೂತಿದ್ದಾನೆ. ಆತನ ಕೈಯಲ್ಲಿ ಬ್ರೆಡ್ ಇದೆ. ‘ಕೂಲರ್​ನಲ್ಲಿ ಗೋಲ್ಡ್​ ಇಡಿ’ ಎಂದು ಬರೆಯಲಾಗಿದೆ. 

 ಶ್ರೀ ಸಿಗಂದೂರು ಚೌಡೇಶ್ವರಿ ಜ್ಯೋತಿಷ್ಯರು ಪಂಡಿತ್ ಶ್ರೀ ರಾಮಚಂದ್ರ ಆಚಾರ್ಯ ನಿಮ್ಮ ಸಮಸ್ಯೆಗಳಾದ ವಿದ್ಯೆ ಉದ್ಯೋಗ ವ್ಯವಹಾರ ಹಣಕಾಸು ಸಾಲದ ಬಾಧೆ ಪ್ರೀತಿ-ಪ್ರೇಮ ವಿಚಾರ ಮನೆಯಲ್ಲಿ ಅಶಾಂತಿ ಅತ್ತೆ-ಸೊಸೆ ಕಿರಿಕಿರಿ ಮತ್ತೆ ಯಾವುದೇ ಏನೇ ಸಮಸ್ಯೆಗಳಿದ್ದರೂ ಅಘೋರಾರ   ನಾಗಸಾಧು ಶಕ್ತಿಗಳಿಂದ ಕೇವಲ ಎರಡೇ ಗಂಟೆಯಲ್ಲಿ ಶಾಶ್ವತ ಪರಿಹಾರ - 9035551170

ಅಮುಲ್​ನ ಪ್ರಸಿದ್ಧ ಕಾಮಿಕ್​ ಪಾತ್ರವನ್ನು ರಾಕಿ ಭಾಯ್​ ರೂಪದಲ್ಲಿ ರಚಿಸಲಾಗಿದ್ದು, ಕೆಜಿಎಫ್​ 2 ಸಿನಿಮಾದಲ್ಲಿ ಯಶ್​ ಯಾವ ರೀತಿಯಲ್ಲಿ ಕಾಣಿಸಿಕೊಂಡಿದ್ದಾರೋ ಅದೇ ರೀತಿಯಲ್ಲಿ ಈ ಕಾಮಿಕ್​ನ್ನು ರಚಿಸಲಾಗಿದೆ. ಕನ್ನಡ ಚಿತ್ರರಂಗದಿಂದ ಈ ಗೌರವ ಪಡೆದ ಮೊದಲ ನಾಯಕ ಯಶ್ ಆಗಿದ್ದಾರೆ ಎಂದು ಅಭಿಮಾನಿಗಳು ಹೇಳುತ್ತಿದ್ದಾರೆ.