KGF 2 : ಒಟಿಟಿಗೆ ಲಗ್ಗೆಯಿಟ್ಟ ಕೆಜಿಎಫ್2 ! ಎಷ್ಟು ಕೋಟಿಗೆ ಯಾವ ಒಟಿಟಿಗೆ ಮಾರಾಟ?

By Infoflick Correspondent

Updated:Saturday, May 7, 2022, 20:29[IST]

KGF 2 : ಒಟಿಟಿಗೆ ಲಗ್ಗೆಯಿಟ್ಟ ಕೆಜಿಎಫ್2 ! ಎಷ್ಟು ಕೋಟಿಗೆ ಯಾವ ಒಟಿಟಿಗೆ ಮಾರಾಟ?

ವಿಶ್ವದಾದ್ಯಂತ ಬಿಡುಗಡೆಯಾಗಿ 1100 ಕೋಟಿ ರೂ. ಗಳಿಕೆ ಮಾಡಿರುವ ಕೆಜಿಎಫ್ 2 ಸಿನಿಮಾ ಒಟಿಟಿ ರಿಲೀಸ್ ಗಾಗಿ ಅಭಿಮಾನಿಗಳು ಕಾಯುತ್ತಿದ್ದಾರೆ. ಒಟಿಟಿಯೊಂದು 'ಕೆಜಿಎಫ್ 2' ಸಿನಿಮಾವನ್ನು ಕೊಂಡುಕೊಳ್ಳಲು ಯೋಜನೆ ಹಾಕಿದೆ. ದೊಡ್ಡ ಒಟಿಟಿಯೊಂದು 'ಕೆಜಿಎಫ್ 2' ಸಿನಿಮಾದ ಮೇಲೆ ಕಣ್ಣು ಹಾಕಿದ್ದು, ಸಿನಿಮಾಕ್ಕೆ ನೂರಾರು ಕೋಟಿ ಮೊತ್ತದ ಆಫರ್ ನೀಡಿದೆ. ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿ ದಾಖಲೆ ಬರೆಯುತ್ತಿರುವ ‘ಕೆಜಿಎಫ್ ಚಾಪ್ಟರ್ 2’ ಒಟಿಟಿ ರಿಲೀಸ್ ಬಗ್ಗೆ ಇದೀಗ ಕುತೂಹಲ ಗರಿಗೆದರಿದೆ.  

ಮೇ ಅಂತ್ಯಕ್ಕೆ ಕೆಜಿಎಫ್ 2 ಒಟಿಟಿಯಲ್ಲಿ ರಿಲೀಸ್ ಆಗಲಿದೆ ಎಂಬ ಸುದ್ದಿಯಿದೆ. ಅಮೆಝೋನ್ ಪ್ರೈಮ್ ನಲ್ಲಿ ಕೆಜಿಎಫ್ 2 ಪ್ರಸಾರವಾಗಲಿದೆ. ಒಟಿಟಿ ಹಕ್ಕಿಗಾಗಿ ಅಮೆಝೋನ್ ಪ್ರೈಮ್ 320 ಕೋಟಿ ರೂ. ಬೆಲೆ ನೀಡಿದೆ ಎಂದು ಸುದ್ದಿಯಿದೆ. ಆದರೆ ಇದುವರೆಗೆ ಅಧಿಕೃತವಾಗಿ ಅಮೆಝೋನ್ ಪ್ರೈಮ್ ಕೆಜಿಎಫ್ 2 ಹಕ್ಕು ಖರೀದಿ ಮಾಡಿದ ಬಗ್ಗೆ ಪ್ರಕಟಣೆ ನೀಡಿಲ್ಲ. ಕೆಜಿಎಫ್ ಚಾಪ್ಟರ್ 1’ರ ಒಟಿಟಿ ಹಕ್ಕು ಪಡೆದುಕೊಂಡಿದ್ದ ಅಮೆಜಾನ್ ಪ್ರೈಮ್ ಎರಡನೇ ಭಾಗದ ಹಕ್ಕುಗಳನ್ನೂ ಪಡೆದಿದೆ ಎಂದು ವರದಿಗಳು ಹೇಳಿವೆ.    

ಭಾರತದಲ್ಲಿ ಅಮೆಜಾನ್ ಪ್ರೈಮ್ ಪ್ರಾಬಲ್ಯ ಹೊಂದಿದ್ದು, ಅದರ ಚಂದಾದಾರರ ಸಂಖ್ಯೆಯೂ ಹೆಚ್ಚಿದೆ. ಹೀಗಾಗಿ ‘ಕೆಜಿಎಫ್ 2’ ಚಿತ್ರವನ್ನು ಅದೇ ಖರೀದಿಸಿದೆ ಎಂದು ವರದಿಗಳು ಹೇಳಿವೆ. ಆದರೆ ಘೋಷಣೆ ಮತ್ತು ಬಿಡುಗಡೆಯ ದಿನಾಂಕ ಇನ್ನಷ್ಟೇ ಅಧಿಕೃತವಾಗಿ ಘೋಷಣೆಯಾಗಬೇಕಿದೆ. 

ಸಲ್ಮಾನ್ ಖಾನ್ ನಟನೆಯ 'ರಾಧೆ' ಸಿನಿಮಾಕ್ಕಿಂತಲೂ ದೊಡ್ಡ ಡೀಲ್ ಇದಾಗಿದ್ದು, ಒಂದೊಮ್ಮೆ ಈ ಡೀಲ್ ಖಾಯಂ ಆದರೆ ಭಾರತದ ಅತಿದೊಡ್ಡ ಒಟಿಟಿ ಡೀಲ್ ಇದೆನಿಸಿಕೊಳ್ಳಲಿದೆ. ಅತಿ ಹೆಚ್ಚು ಮೊತ್ತಕ್ಕೆ ಸೇಲ್ ಆದ ಸಿನಿಮಾ ಎಂಬ ಖ್ಯಾತಿ 'ಕೆಜಿಎಫ್ 2' ಪಾಲಾಗಲಿದೆ.