KGF 2 : ಮನೆ ಮನೆಗೆ ಬರಲಿದ್ದಾನೆ ರಾಕಿಭಾಯ್: ಕೆಜಿಎಫ್ -2 ಚಿತ್ರ ನೋಡಲು ತಯಾರಾಗಿ

By Infoflick Correspondent

Updated:Wednesday, July 20, 2022, 19:09[IST]

KGF 2 : ಮನೆ ಮನೆಗೆ ಬರಲಿದ್ದಾನೆ ರಾಕಿಭಾಯ್: ಕೆಜಿಎಫ್ -2  ಚಿತ್ರ ನೋಡಲು ತಯಾರಾಗಿ

ಸ್ಯಾಂಡಲ್ ವುಡ್ ನ ಅತಿ ಹೆಚ್ಚು ಸುದ್ದಿ ಮಾಡಿದ ಚಿತ್ರ ಕೆಜಿಎಫ್ 2 (kgf 2). ಇತ್ತೀಚೆಗೆ ಹಲವು ಭಾಷೆಗಳಲ್ಲಿ ಕೆಜಿಎಫ್ ಚಿತ್ರ ವಿಶ್ವಾದ್ಯಂತ ರಿಲೀಸ್ ಆಗಿತ್ತು.  ಈ ಚಿತ್ರ ಎಲ್ಲೆಡೆ ತನ್ನದೇ ಹವಾ ಕ್ರಿಯೇಟ್ ಮಾಡಿದ್ದು ಎಲ್ಲರಿಗೂ ತಿಳಿದಿರುವ ವಿಚಾರವೇ. ಅಷ್ಟರಮಟ್ಟಕ್ಕೆ ಕೆಜಿಎಫ್ ಚಿತ್ರ ಹಿಟ್ ಆಗಿದೆ.  ಚಿತ್ರದ ಹಾಡುಗಳು, ಡೈಲಾಗ್ ಗಳು ಎಲ್ಲವೂ ಸಿಕ್ಕಾಪಟ್ಟೆ ವೈರಲ್ ಆಗಿವೆ. ಪುಟ್ಟ ಮಕ್ಕಳು ಕೂಡ ಕೆಜಿಎಫ್ ಚಿತ್ರದ ಹಾಡು, ಡೈಲಾಗ್ ಗಳನ್ನು ಹೇಳುತ್ತಾರೆ. 

ಭಾರತದಲ್ಲಿ ಮೂರನೇ ಸ್ಥಾನವನ್ನು ಪಡೆದಿರುವ ಕೆಜಿಎಫ್ 2 ಚಿತ್ರ, ವರ್ಲ್ಡ್ ವೈಡ್ ಭಾರೀ ಕಲೆಕ್ಷನ್ ಮಾಡಿದೆ. ಕನ್ನಡದ ಸಿನಿಮಾ ಈ ಮಟ್ಟಕ್ಕೆ ಕಲೆಕ್ಷನ್ ಮಾಡಿರುವುದು ಹೆಮ್ಮೆಯ ವಿಚಾರವೇ. ಕೆಜಿಎಫ್ 2 ಚಿತ್ರ ರಾಜಮೌಳಿ ನಿರ್ದೇಶನದ RRR ಸಿನಿಮಾದ ದಾಖಲೆಯನ್ನು ಕೂಡ ಉಡೀಸ್ ಮಾಡಿದೆ. ಈ ಮೂಲಕ ಕೆಜಿಎಫ್ 2 ಎಲ್ಲಾ ಭಾಷೆಯಲ್ಲೂ, ಎಲ್ಲಾ ಪ್ರದೇಶಗಳಲ್ಲಿಯೂ ಉತ್ತಮ ಗಳಿಸಿದೆ. ಭಾರತದ ಮೂಲೆ ಮೂಲೆಗಳಿಂದಲೂ ಕೆಜಿಎಫ್ 2 ಚಿತ್ರವನ್ನು ನೋಡಲು ಜನರು ಮುಗಿಬಿದ್ದಿದ್ದರು. 

ಕನ್ನಡದಲ್ಲಿ ಮಾತ್ರವಲ್ಲದೇ, ತಮಿಳು, ತೆಲುಗು, ಮಲಯಾಳಂ ಹಾಗೂ ಹಿಂದಿ ಭಾಷೆಯಲ್ಲೂ ಹೆಚ್ಚು ಗಳಿಕೆ ಮಾಡಿರುವ ಸಿನಿಮಾ ಎಂಬ ಪ್ರಶಂಸೆಯನ್ನು ಕೆಜಿಎಫ್ ಪಡೆದಿದೆ. ಇನ್ನು ಈ ಚಿತ್ರವನ್ನು ಥಿಯೇಟರ್ ಗೆ ಹೋಗಿ ನೋಡಲಾಗದೇ ಇರುವವರು. ಮತ್ತೆ ನೋಡಬೇಕು ಎಂದು ಅಂದುಕೊಂಡಿರು ವವರಿಗೆ ಸಿಹಿ ಸುದ್ದಿ ಎಂದರೆ ತಪ್ಪಾಗೋದಿಲ್ಲ. ಕಿರುತೆರೆಯಲ್ಲಿ ಕೆಜಿಎಫ್೨ ಚಿತ್ರ ರಿಲೀಸ್ ಆಗುತ್ತಿದೆ. ಜೀ ಕನ್ನಡ  ವಾಹಿನಿಯಲ್ಲಿ  ಕೆಜಿಎಫ್ ೨ ರಿಲೀಸ್ ಆಗಲಿದ್ದು, ಯಾವಾಗ.? ಯಾವ ದಿನ ಎಂಬ ವಿಚಾರವನ್ನು ಇನ್ನೂ ಬಹಿರಂಗಪಡಿಸಿಲ್ಲ.